Sunday, 11th May 2025

Sensex Rises: ಸೆನ್ಸೆಕ್ಸ್‌ 597 ಅಂಕ ಏರಿಕೆ, ಓಲಾ ಷೇರು 16% ಜಿಗಿತ

Sensex Rises

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 597 ಅಂಕ ಏರಿಕೆಯಾಯಿತು. ಎನ್‌ಎಸ್‌ಇ ಸೂಚ್ಯಂಕ 181 ಅಂಕ ವೃದ್ಧಿಸಿತು. (Stock market) ಸೆನ್ಸೆಕ್ಸ್‌ 80,845ಕ್ಕೆ ದಿನದ ವಹಿವಾಟು (Sensex) ಮುಕ್ತಾಯಗೊಳಿಸಿದರೆ, ನಿಫ್ಟಿ(Nifty) 24,457ಕ್ಕೆ ಸ್ಥಿರವಾಯಿತು. ಉಭಯ ಸೂಚ್ಯಂಕಗಳು ಧನಾತ್ಮಕವಾಗಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ದರದ ಗಣನೀಯ ಹೆಚ್ಚಳ ಸಕಾರಾತ್ಮಕ ಪ್ರಭಾವ ಬೀರಿತು (Sensex Rises).

ಅಮೆರಿಕದ ಫೆಡರಲ್‌ ರಿಸರ್ವ್‌ ಈ ತಿಂಗಳು ಬಡ್ಡಿ ದರದಲ್ಲಿ 0.25% ಇಳಿಕೆ ಮಾಡುವ ನಿರೀಕ್ಷೆ ಇರುವುದು ಷೇರು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿತು. ಎಸ್‌ಬಿಐ, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಷೇರುಗಳ ದರ ಏರಿತು. ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ದರದಲ್ಲಿ 3% ಏರಿಕೆಯಾಯಿತು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಮಂಗಳವಾರ ಬ್ಲೂ ಚಿಪ್‌ ಷೇರುಗಳ ಖರೀದಿಯಲ್ಲಿಸಕ್ರಿಯರಾಗಿದ್ದರು. ಹೀಗಾಗಿ ಎಚ್‌ಡಿಎಫ್‌ಸಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಇತ್ಯಾದಿ ಷೇರುಗಳಿಗೆ ಭಾರಿ ಬೇಡಿಕೆ ಇತ್ತು. ಎನ್‌ಟಿಪಿಸಿ ಮತ್ತು ಅಕ್ಟ್ರಾ ಟೆಕ್‌ ಸಿಮೆಂಟ್‌ ಷೇರುಗಳ ದರದಲ್ಲೂ ಹೆಚ್ಚಳ ಉಂಟಾಯಿತು. ಡಿಸೆಂಬರ್‌ 2ರಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 238 ಕೋಟಿ ರೂ. ಮೌಲ್ಯದ ಷೇರುಗಳನ್ನು ಹಾಗೂ ದೇಶೀಯ ಹೂಡಿಕೆದಾರರು 3,588 ಕೋಟಿ ರೂ. ಷೇರುಗಳನ್ನು ಖರೀದಿಸಿದರು.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 84.68 ರೂ.ನಷ್ಟಿತ್ತು. ಬ್ರೆಂಟ್‌ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 72.38 ಡಾಲರ್‌ನಷ್ಟಿತ್ತು. ಆನ್‌ಲೈನ್‌ ಫುಡ್‌ ವಲಯದ ಸ್ವಿಗ್ಗಿ ಕಳೆದ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕ ಅವಧಿಯಲ್ಲಿ ತನ್ನ ನಷ್ಟವನ್ನು 625 ಕೋಟಿ ರೂ.ಗೆ ತಗ್ಗಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 657 ಕೋಟಿ ರೂ. ನಷ್ಟಕ್ಕೀಡಾಗಿತ್ತು. ಕಂಪನಿಯ ಆದಾಯವು 3,601 ಕೋಟಿ ರೂ.ಗೆ ಏರಿಕೆಯಾಗಿದೆ.

ಓಲಾ ಎಲೆಕ್ಟ್ರಿಕ್‌ ಷೇರು ದರ 16% ಜಿಗಿತ

ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ ಕಂಪನಿಯ ಷೇರು ದರ ಕಳೆದ ಎರಡು ದಿನಗಳಲ್ಲಿ 16% ಏರಿಕೆಯಾಗಿದೆ. ಇದಕ್ಕೆ ಕಾರಣವೇನು ಎನ್ನುತ್ತೀರಾ? ಓಲಾ ಎಲೆಕ್ಟ್ರಿಕ್‌ 2024ರ ಡಿಸೆಂಬರ್‌ ಒಳಗಾಗಿ ತನ್ನ ಸ್ಟೋರ್‌ಗಳ ಸಂಖ್ಯೆಯನ್ನು 4,000 ಕ್ಕೆ ಏರಿಸುವುದಾಗಿ ತಿಳಿಸಿದೆ. ಈಗ 800 ಸ್ಟೋರ್‌ಗಳನ್ನು ಕಂಪನಿ ಹೊಂದಿದೆ. ಮುಂದಿನ ಮೂರು ವಾರದೊಳಗೆ 3,200 ಸ್ಟೋರ್‌ಗಳನ್ನು ತೆರೆಯುವುದಾಗಿ ತಿಳಿಸಿದೆ.

ಇದರೊಂದಿಗೆ ಓಲಾ ಎಲೆಕ್ಟ್ರಿಕ್‌ (Ola Electric) ಭಾರತದ ಅತಿ ದೊಡ್ಡ ಇವಿ ಡಿಸ್ಟ್ರಿಬ್ಯೂಷನ್‌ ನೆಟ್‌ ವರ್ಕ್‌ ಅನ್ನು ಹೊಂದಲಿದೆ. ಈ ಘೋಷಣೆಯ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್‌ ಷೇರು ದರದಲ್ಲಿ ದಿಢೀರ್‌ ಹೆಚ್ಚಳವಾಗಿದೆ.
ಹಲವಾರು ಷೇರುಗಳು ಮಂಗಳವಾರ 15% ಗೂ ಹೆಚ್ಚು ಏರಿಕೆ ದಾಖಲಿಸಿದೆ. ಕ್ಯುಪಿಡ್‌ ಬ್ರೇವರೀಸ್‌ & ಡಿಸ್ಟಿಲರೀಸ್(‌57.48%), ರಾತಿ ಬಾರ್ಸ್‌ (20%), ಲಿನ್‌ಕೊಲೊನ್‌ ಫಾರ್ಮಾ (19.9%), ಜಿಂದಾಲ್‌ ವರ್ಲ್ಡ್‌ ವೈಡ್‌ (19.97), ವಿಶನ್‌ ಸಿನಿಮಾಸ್‌ (19.84%), ಬಿಎಸ್‌ಎಲ್‌ ಲಿಮಿಟೆಡ್‌ (19.43%), ಶಿವಾಲಿಕ್‌ ರಸಾಯನ್‌ (17.30%), ಕೆಬಿಎಸ್‌ ಇಂಡಿಯಾ (16.37%) ಷೇರು ದರ ಚೇತರಿಸಿತು.

ಈ ಸುದ್ದಿಯನ್ನೂ ಓದಿ: Stock Market: ಜಿಡಿಪಿ ಇಳಿಕೆಯ ಹೊರತಾಗಿಯೂ ಚೇತರಿಸಿದ ಸೆನ್ಸೆಕ್ಸ್‌, ನಿಫ್ಟಿ