Saturday, 10th May 2025

Your’s Sincerely Raam: ಮತ್ತೆ ಒಂದಾದ ಗಣೇಶ್‌-ರಮೇಶ್‌; ಗಮನ ಸೆಳೆಯುವ ʼರಾಮ್‌ʼ ಚಿತ್ರದ ಟೀಸರ್‌ ಇಲ್ಲಿದೆ

Your's Sincerely Ram

ಬೆಂಗಳೂರು: 2016ರಲ್ಲಿ ತೆರೆಕಂಡ, ರಮೇಶ್‌ ಅರವಿಂದ್‌ (Ramesh Aravind) ನಿರ್ದೇಶನದ ʼಸುಂದರಾಂಗ ಜಾಣʼ ಚಿತ್ರದಲ್ಲಿ ಗಣೇಶ್‌ (Ganesh) ನಾಯಕನಾಗಿ ಅಭಿನಯಿಸಿದ್ದರು. ಇದೀಗ ಸುಮಾರು 8 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದೆ. ವಿಶೇಷ ಎಂದರೆ ಈ ಬಾರಿ ಇಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ. ಹೌದು, ಕನ್ನಡ ಚಿತ್ರರಂಗದ ತ್ಯಾಗರಾಜರು ಎಂದೇ ಖ್ಯಾತಿ ಪಡೆದಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್ ಅಭಿನಯದ ಹೊಸ ಸಿನಿಮಾ ಸೆಟ್ಟೇರಿದೆ. ವಿಖ್ಯಾತ್ ನಿರ್ದೇಶನದ ಈ ಚಿತ್ರಕ್ಕೆ ಗೌರಿ ಹಬ್ಬವಾದ ಶುಕ್ರವಾರ ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಮುಹೂರ್ತ ನೆರವೇರಿತು. ನಟಿ ಕಂ ನಿರೂಪಕಿ ಜಾನ್ವಿ ರಾಯಲ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ನಿರ್ದೇಶಕ ವಿಖ್ಯಾತ್ ಪತ್ನಿ ಸ್ವಾತಿ ವಿಖ್ಯಾತ್ ಕ್ಯಾಮೆರಾಗೆ ಚಾಲನೆ ನೀಡಿದರು (Your’s Sincerely Raam).

ರಮೇಶ್ ಅರವಿಂದ್ ಹಾಗೂ ಗಣೇಶ್ ಸಂಗಮದ ಹೊಸ ಸಿನಿಮಾಗೆ ‘Your’s Sincerely ರಾಮ್’ ಎಂಬ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್, ಟೀಸರ್‌ ಕೂಡ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ನಟ ರಮೇಶ್ ಅರವಿಂದ್ ಮಾತನಾಡಿ, ʼʼವಿಖ್ಯಾತ್ ಪರಿಚಯ ಆಗಿದ್ದು 9 ವರ್ಷಗಳ ಹಿಂದೆ. ʼಪುಷ್ಪಕ ವಿಮಾನʼ ಕಥೆಯನ್ನು ಮೊದಲು ಹೇಳಲು ಬಂದರು. ಅಂದಿನಿಂದ ಇಂದಿನವರೆಗೂ ಅವರನ್ನು ನೋಡಿಕೊಂಡು ಬರುತ್ತಿದ್ದೇನೆ. ಅವರ ಸೌಂದರ್ಯ ಪ್ರಜ್ಞೆ ಚೆನ್ನಾಗಿದೆ. ಅವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್ ಗಳಲ್ಲಿ ಸೂಕ್ಷ್ಮ ಮನೋಭಾವವಿದೆ. ಅವರು ನಿರ್ದೇಶನ ಮಾಡುತ್ತಿರುವುದು ಖುಷಿ ತಂದಿದೆ. ಗಣೇಶ್ ಮತ್ತು ನನ್ನ ಕಾಂಬೋ ನಿಮಗೆ ಎಷ್ಟು ಖುಷಿ ಕೊಡುತ್ತದೆಯೋ ನಮಗೂ ಅಷ್ಟೇ ಖುಷಿ ಕೊಡುತ್ತದೆʼʼ ಎಂದರು.

ಗಣೇಶ್ ಮಾತನಾಡಿ, ʼʼಗೌರಿ ಹಬ್ಬದ ದಿನ ʼYour’s Sincerely ರಾಮ್‌ʼಗೆ ಮುಹೂರ್ತ ನಡೆದಿದೆ. ಚಿಕ್ಕ ಗ್ಲಿಂಪ್ಸ್ ನೋಡಿದ್ದೀರಿ. ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಹ ಕಥೆ ಇದರಲ್ಲಿದೆ. ಇದರ ನೂರಷ್ಟು ಸಿನಿಮಾದಲ್ಲಿ ಇರುತ್ತದೆ. ಪ್ರತಿ ಸೀನ್, ಸ್ಕ್ರೀನ್ ಪ್ಲೇ ಒಂದೊಳ್ಳೆ ಅನುಭವವಾಗಿರುತ್ತದೆ. ಬಹಳ ಖುಷಿ ಇದೆ. ರಮೇಶ್ ಜೊತೆ ಚಿತ್ರ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಅದ್ಭುತ ನಟ, ಟೆಕ್ನಿಷಿಯನ್ ರಮೇಶ್. ವಿಖ್ಯಾತ್ ಫ್ಯಾಷನೇಟೆಡ್ ಡೈರೆಕ್ಟರ್. ಸತ್ಯ ಅವರಿಗೆ ಒಳ್ಳೆದಾಗಲಿʼʼ ಎಂದದು ಹಾರೈಸಿದರು.

ಈ ಸುದ್ದಿಯನ್ನೂ ಓದಿ: Sandalwood News: ಭಾರತ-ಬಾಂಗ್ಲಾ ಯುದ್ಧದ ಕಥೆ ಹೇಳುವ ʻಸಿಗ್ನಲ್‌ ಮ್ಯಾನ್‌ 1971ʼ ಚಿತ್ರದ ಹಾಡು ರಿಲೀಸ್‌

ʼಪುಷ್ಪಕ ವಿಮಾನʼ, ʼಇನ್ಸ್‌ಪೆಕ್ಟರ್ ವಿಕ್ರಮ್ʼ, ʼಮಾನ್ಸೂನ್ ರಾಗʼದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ.ಆರ್. ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್‌ನಡಿ ಸತ್ಯ ರಾಯಲ ‘Your’s Sincerely ರಾಮ್’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ.ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ , ಪ್ರಶಾಂತ್ ರಾಜಪ್ಪ‌ , ಯದುನಂದನ್ ಹಾಗೂ ಸಚಿನ್ ಸಂಭಾಷಣೆ ಚಿತ್ರಕ್ಕಿದೆ. ಆಡಿಯೊ ಹಕ್ಕುಗಳು ಆನಂದ್ ಆಡಿಯೊಗೆ ದಾಖಲೆ ಬೆಲೆಗೆ ಮಾರಾಟವಾಗಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗವನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ತಿಳಿಸಲಿದೆ.

Leave a Reply

Your email address will not be published. Required fields are marked *