Tuesday, 13th May 2025

ಯಶ್-ರಾಧಿಕಾ ಪಂಡಿತ್ ಜೋಡಿಗೆ ಐದನೇ ವಿವಾಹ ವಾರ್ಷಿಕೋತ್ಸವ

Yash and Radhika Pandit

ಬೆಂಗಳೂರು: ಸ್ಯಾಂಡಲ್ ವುಡ್ ನ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಗುರುವಾರ ಐದನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಜೋಡಿ 2016ರ ಡಿಸೆಂಬರ್ 9ರಂದು ವಿವಾಹವಾಗಿದ್ದರು.

ಮೊಗ್ಗಿನ ಮನಸು ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಯಶ್ ಮತ್ತು ರಾಧಿಕಾ ನಂತರ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿ ಕೊಂಡಿದ್ದರು. ಹಲವು ವರ್ಷಗಳ ಕಾಲ ಪ್ರೀತಿಸಿ ನಂತರ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ದ್ದರು.

ಯಶ್‌-ರಾಧಿಕಾ ದಂಪತಿಗೆ ಐರಾ ಯಶ್‌ ಮತ್ತು ಯಥರ್ವ್‌ ಯಶ್‌ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ವಿವಾಹ ವಾರ್ಷಿಕೋತ್ಸವದ ಸಲುವಾಗಿ ರಾಧಿಕಾ ಪಂಡಿತ್ ಅವರು ಪೋಸ್ಟ್ ಮಾಡಿದ್ದು, ನೀವು ಧೈರ್ಯಶಾಲಿ ಸುಸಜ್ಜಿತ ವ್ಯಕ್ತಿಯಾಗಲು ಸಹಾಯ ಮಾಡುವವರು ಯಾರಾದರು ಇದ್ದರೆ, ಅದು ಪವಿತ್ರವಾದದ್ದು. ನೀವು ಅಂತಹ ಪ್ರೀತಿಯನ್ನು ಹಿಡಿದುಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.