Monday, 12th May 2025

ಈ ಬಾರಿಯ ವಿಶ್ವಕಪ್ ನಮ್ದೇ: ಸೂಪರ್ ​ಸ್ಟಾರ್ ರಜಿನಿಕಾಂತ್

ಅಹಮದಾಬಾದ್: ಈ ಬಾರಿಯ ವಿಶ್ವಕಪ್ ನಮ್ದೇ. ಶೇ.100ರಷ್ಟು ವಿಶ್ವಕಪ್​ ಭಾರತಕ್ಕೆ ಬರಲಿದೆ ಎಂದು ತಮಿಳು ಸೂಪರ್ ​ಸ್ಟಾರ್ ರಜಿನಿಕಾಂತ್ ಹೇಳಿದ್ದಾರೆ.

ತಮಿಳು ಸೂಪರ್ ​ ಸ್ಟಾರ್ ರಜಿನಿಕಾಂತ್ ಅವರು ಕ್ರಿಕೆಟ್​ನ ಕಟ್ಟಾ ಅಭಿಮಾನಿ. ಇತ್ತೀಚೆಗೆ ನಡೆದ ಭಾರತ-ನ್ಯೂಜಿಲೆಂಡ್ ಸೆಮಿ ಫೈನಲ್ ಪಂದ್ಯಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಸಂಭ್ರಮಿಸಿದ್ದರು.

ನಾವು ಮೊದಲು ಸ್ವಲ್ಪ ಹೊತ್ತು ಟೆನ್ಷನ್ ಆಗಿದ್ದೆವು. ಪ್ರತಿ ವಿಕೆಟ್ ಬೀಳುತ್ತಿದ್ದಂತೆ ಪರಿಸ್ಥಿತಿ ನಮ್ಮ ಪರವಾಗಿ ಬದಲಾಯಿತು. ಆದರೆ, ಮೊದಲ ಒಂದೂ ವರೆ ಗಂಟೆಗಳ ಕಾಲ ನಾವು ತುಂಬಾ ಚಿಂತಿತರಾಗಿದ್ದೆವು. ಈ ಬಾರಿಯ ವಿಶ್ವಕಪ್ ನಮ್ದೇ. ಶೇ.100ರಷ್ಟು ವಿಶ್ವಕಪ್​ ಭಾರತಕ್ಕೆ ಬರಲಿದೆ ಎಂದರು.

ಮೊಹಮ್ಮದ್ ಶಮಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಸೆಮಿ ಫೈನಲ್‌ನಲ್ಲಿ ಭಾರತ ತಂಡದ ಗೆಲುವಿಗೆ ನೂರಕ್ಕೆ ನೂರು ಅವರೇ ಕಾರಣ ಎಂದು ಉತ್ತರಿಸಿದರು.

ಫೈನಲ್​ ಪಂದ್ಯ ಭಾನುವಾರ ಆಸ್ಟ್ರೇಲಿಯಾ ಮತ್ತು ಭಾರತ ಮಧ್ಯೆ ನಡೆಯಲಿದೆ. ಎರಡು ದಶಕಗಳ ನಂತರ ಮತ್ತೊಮ್ಮೆ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದೆ. ಗುರುವಾರ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್ 3 ವಿಕೆಟ್​ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಜೊತೆ ಪ್ರಶಸ್ತಿ ಹೋರಾಟಕ್ಕೆ ಸಜ್ಜಾಗಿದೆ.

‘ಜೈಲರ್’ ಮೂಲಕ ಸೂಪರ್ ಹಿಟ್ ಪಡೆದಿರುವ ರಜಿನಿಕಾಂತ್ ಸದ್ಯ ಟಿಜೆ ಜ್ಞಾನವೇಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಮಗಳು ಐಶ್ವರ್ಯ ನಿರ್ದೇಶನದ ರಜಿನಿ ಅಭಿನಯದ ‘ಲಾಲ್ ಸಲಾಂ’ ಚಿತ್ರ ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾಗ ಲಿದೆ. ಸದ್ಯ ಲಾಲ್​ ಸಲಾಂ ಟೀಸರ್​ ಬಿಡುಗಡೆಯಾಗಿದೆ.

Leave a Reply

Your email address will not be published. Required fields are marked *