ಚೆನ್ನೈ: ವೆಟ್ರಿಮಾರನ್ ನಿರ್ದೇಶನ ಸೂರಿ, ವಿಜಯ್ ಸೇತುಪತಿ, ಮಂಜು ವಾರಿಯರ್ ಅಭಿನಯದ ‘ವಿಡುತಲೈ 2’ (Viduthalai Part 2) ತಮಿಳು ಚಿತ್ರ ಇಂದು ಬಿಡುಗಡೆಯಾಗಿದೆ. ಪಾರ್ಟ್ 2 ಮೇಲೆ ಅಭಿಮಾನಿಗಳ ನಿರೀಕ್ಷೆ ಜೋರಾಗಿತ್ತು. ಸಿನಿಮಾದಲ್ಲಿ ವಿಜಯ್ ಸೇತುಪತಿ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ ನೀಡಿದ್ದಾರೆ. ವೆಟ್ರಿಮಾರನ್ ಅವರ ಅತ್ಯುತ್ತಮ ಚಿತ್ರಗಲಲ್ಲ ಇದು ಕೂಡ ಒಂದು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಜಯ್ ಸೇತುಪತಿಯು ಯಂಗ್ ಲುಕ್ನಲ್ಲಿ ಕಂಡುಬಂದಿದ್ದು ಕಥೆ ಕೂಡ ಪಾರ್ಟ್ ಒಂದಕ್ಕಿಂತ ವಿಭಿನ್ನವಾಗಿದೆ. ಒಂದು ಸಮುದಾಯದಲ್ಲಿ ಒಬ್ಬ ನಾಯಕ ಹೇಗೆಲ್ಲ ಬೆಳೆದು ಬಂದ ಅನ್ನುವ ಚಿತ್ರಣ ಈ ಚಿತ್ರದಲ್ಲಿ ಮೂಡಿ ಬಂದಿದೆ. ‘ವಿಡುತಲೈ 2’ ಚಿತ್ರೀಕರಣವನ್ನು ದಟ್ಟ ಕಾಡಿನಲ್ಲಿಯೇ ಮಾಡಲಾಗಿದೆ. ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಂಜು ವಾರಿಯರ್ ನಾಯಕಿಯಾಗಿ ನಟಿಸಿದ್ದಾರೆ. ಮಕ್ಕಳ್ ಪಡೈ ಲೀಡರ್ ವಿಜಯ್ ಸೇತುಪತಿ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ವರ್ಗದ ಹೋರಾಟದ ಹಾದಿಯ ಚಿತ್ರಣವನ್ನೂ ಇಲ್ಲಿ ಕಾಣಬಹುದಾಗಿದ್ದು ಮಕ್ಕಳ್ ಪಡೈ ಹಾಗೂ ಪೊಲೀಸರ ನಡುವಿನ ಚಕಮಕಿ ಇಲ್ಲೂ ಮುಂದುವರಿದಿದೆ.
ಪಾರ್ಟ್ 1 ಕೂಡ ಹಿಟ್ ಆಗಿತ್ತು
2023ರಲ್ಲಿ ‘ವಿಡುತಲೈ’ ಪಾರ್ಟ್ 1 ಮೂಡಿ ಬಂದಿತ್ತು. ಈ ಸಿನಿಮಾ ಬಹಳಷ್ಟು ಹಿಟ್ ಆಗಿತ್ತು.ಕಾಡಿನೊಳಗೆ ಇರುವ ಹಳ್ಳಿಯೊಂದರಲ್ಲಿ ಬದುಕುತ್ತಿರುವ ಸಮುದಾಯದ ಜೀವನ ಶೈಲಿ ಬಗ್ಗೆ ಹೇಳಾಗಿತ್ತು. ಸಿನಿಮಾದಲ್ಲಿ ವಿಜಯ್ ಸೇತುಪತಿ ಪೆರುಮಾಳ್ ಆಗಿ ಕಾಣಿಸಿಕೊಂಡಿದ್ದರು. ಒಂದು ಸಮಯದಾಯಕ್ಕಾಗಿ ಧ್ವನಿಯೆತ್ತಿ ನಿಲ್ಲುವಂತೆ ಇಲ್ಲಿ ಪೆರುಮಾಳ್ ಪಾತ್ರವನನು ಚಿತ್ರಿಸಲಾಗಿತ್ತು. ಒಂದು ಕಡೆ ಬಂಧನ, ಇನ್ನೊಂದು ಕಡೆ ಗುಂಡಿನ ಸದ್ದಿನ ನಡುವೆಯೇ ಒಂದು ನೈಜ ಕಥೆಯಂತೆಯೇ ಮೂಡಿ ಬಂದಿತ್ತು.
ʼವಿಡುತಲೈʼ ಭಾಗ 2 ನೋಡಿದ ಅಭಿಮಾಮಿಗಳು ಚಿತ್ರದ ಮುಂದುವರಿದ ಭಾಗವು ಉತ್ತಮವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ವಿಜಯ್ ಅವರ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಸಿಗುವಂತಾಗಬೇಕು. ಇದು ನಾನು ನೋಡಿದ ಅತಿದೊಡ್ಡ ಕ್ರಾಂತಿಕಾರಿ ಚಿತ್ರ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ವಿಜಯ ಸೇತುಪತಿಯ ಅತ್ಯುತ್ತಮ ಚಿತ್ರ. ಮೇಕಿಂಗ್ ಸ್ಟೈಲ್, ಕಾಸ್ಟಿಂಗ್ ಆಯ್ಕೆ ಸೂಪರ್ ಎಂದು ಪ್ರತಿಕ್ರಿಯಿಸಿದ್ದಾರೆ. ʼವಿಡುತಲೈʼ ಭಾಗ 2 ಭಾಗ 1ಕ್ಕೆ ತಕ್ಕಂತೆ ಇಲ್ಲ ಎಂದು ಟೀಕಿಸಿದ ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ, “ವಿಜಯ್ ಸೇತುಪತಿ ಅವರ ಅಭಿನಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕರೆ ಅದು ಪ್ರಶಸ್ತಿಗೆ ಅವಮಾನ. ಅವರು ಚಿತ್ರದಲ್ಲಿದ್ದಾರೆ ಎಂಬುದನ್ನು ನಾನು ಸಂಪೂರ್ಣವಾಗಿ ಮರೆತಿದ್ದೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ: BBK 11: ಕಿರುತೆರೆಯಲ್ಲಿ ಮುಂದುವರೆದ ಬಿಗ್ ಬಾಸ್ ಅಬ್ಬರ: ಕಿಚ್ಚನ ವೀಕೆಂಡ್ಗೆ ಎಷ್ಟು TRP?