Saturday, 10th May 2025

BBK 11: ವಾರದ ಕತೆಯಲ್ಲಿ ರಜತ್​ರನ್ನು ಜೈಲಿಗೆ ಅಟ್ಟಿದ ಸುದೀಪ್: ಧನುಗೂ ಶಿಕ್ಷೆ ಕೊಟ್ಟ ಕಿಚ್ಚ

Rajath and Kichcha Sudeep (1)

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಹನ್ನೊಂದನೇ ವೀಕ್​ನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ ಪ್ರಸಾರಕ್ಕೆ ಕೆಲವೇ ಗಂಟೆಗಳಿವೆ. ಇದೀಗ ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಬಿಟ್ಟಿದ್ದು, ಮನೆಯೊಳಗಿರುವ ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಾರ ಮನೆಯೊಳಗೆ ಜಗಳ ಕೊಂಚ ಅಧಿಕವಾಗಿತ್ತು. ಅದರಲ್ಲೂ ರಜತ್ ಕಿಶನ್ ಹಾಗೂ ಧನರಾಜ್ ಆಚಾರ್ ಕೈ-ಕೈ ಮಿಲಾಯಿಸಿದ್ದರು. ಇದೇ ವಿಚಾರವಾಗಿ ಸುದೀಪ್ ಮಾತನಾಡಿದ್ದಾರೆ.

ಸುದೀಪ್ ಅವರು ನೇರವಾಗಿ ಈ ಟಾಪಿಕ್​ಗೆ ಬಂದಿದ್ದಾರೆ. ಧನರಾಜ್​, ರಜತ್ ಅವ್ರೇ ಏನು ಹುಲಿ ಸಿಂಹ ಆಗೋಕ್​​ ಹೋಗಿದ್ದೀರಾ? ಅಥವಾ ಮನುಷ್ಯರಾಗಿರೋಕೆ​ ಹೋಗಿದ್ದೀರೋ? ಎಂದು ​ ಪ್ರಶ್ನಿಸಿದ್ದಾರೆ. ನಂತರ, ನಿಮ್ಗೆ ಅವಶ್ಯಕತೆ ಇತ್ತಾ ಅವರ ಕೆನ್ನೆ ಮುಟ್ಟೋದು ಎಂದು ಧನರಾಜ್​ ಬಳಿ ಕೇಳಿದ್ದಾರೆ. ನಾಲಿಗೆ ಮೇಲೆ ನಿಗಾ ಇರ್ಲಿ ರಜತ್ ಅವ್ರೆ ಎಂದು ಸುದೀಪ್ ಎಚ್ಚರಿಕೆ ನೀಡಿದ್ದಾರೆ.

ಸರ್ ನಾನೇನು ಕೆಟ್ಟ ಮಾತು ಬಳಸಿಲ್ಲ ಎಂದು ರಜತ್​ ಹೇಳಿದಾಗ ಸುದೀಪ್​ಗೆ ಕೆಟ್ಟ ಕೋಪ ಬಂದಿದೆ. ನಿಮ್ಮ ಪ್ರಕಾರ ಕೆಟ್ಟ ಮಾತುಗಳೇನು ಎಂದು ಹೇಳ್ಬಿಡಿ, ನಾವು ಒಂದು ಬುಕ್​ ಮಾಡಿ ಇಡ್ತೀವಿ​​ ಎಂದು ಸುದೀಪ್​ ರಾಂಗ್ ಆಗಿದ್ದಾರೆ. ನಿಮಗೆ ಟೈಮ್​ ಕೊಡ್ತೀವಿ ಫೈಟ್​ ಮಾಡ್ಕೊಳಿ ಫಿಸಿಕಲಿ ಎಂದು ಹೇಳಿದ್ದಾರೆ. ಕೊನೆಯಲ್ಲಿ ಇದಕ್ಕೆ ಒಂದು ಪನೀಷ್​ಮೆಂಟ್​ ಇದ್ದೇ ಇರುತ್ತೆ ಎಂದು ಹೇಳಿದ ಕಿಚ್ಚ ಒಂದು ಸಣ್ಣ ಜೈಲನ್ನು ಮನೆಯೊಳಗೆ ತರಿಸಿದ್ದಾರೆ. ರಜತ್​ ಅವರನ್ನು ಒಳಗೆ ಹಾಕಿದ್ದು, ಅವರೆಲ್ಲೇ ಹೋಗಬೇಕೆಂದರೂ ಧನರಾಜ್ ಆಚಾರ್ ಆ ಜೈಲನ್ನು ಎಳೆದು ಕರೆದುಕೊಂಡು ಹೋಗಬೇಕೆಂದು ಸೂಚಿಸಿದ್ದಾರೆ.

ಧನರಾಜ್-ರಜತ್ ನಡುವೆ ಏನಾಗಿತ್ತು?:

ಧನರಾಜ್ ಅವರು ಕಳಪೆಗೆ ರಜತ್ ಕಿಶನ್ ಹೆಸರನ್ನು ತೆಗೆದುಕೊಂದ್ದರು. ಕೈಕಾಲು ಮುರೀತಿನಿ ಅಂತಾರೆ, ಬೆದರಿಕೆ ಹಾಕೋ ಥರಾ ಅವರ ಮಾತುಗಳು ಇರುತ್ತದೆ ಎಂಬ ಕಾರಣ ನೀಡಿದ್ದಾರೆ. ಇದರಿಂದ ಸಿಟ್ಟಾದ ರಜತ್, ಅಂದು ನೀವು ನನ್ನ ಮುಖವನ್ನು ಟಚ್ ಮಾಡಿದಾಗ ಅದು, ಸಾಫ್ಟ್​ ಆಗಿರಲಿಲ್ಲ ಎಂದಿದ್ದಾರೆ. ಅದಕ್ಕೆ ಧನರಾಜ್, ನನಗೆ ಗೊತ್ತು, ನಾನು ಎಷ್ಟು ಸಾಫ್ಟ್​ ಆಗಿ ಮಾಡಿದ್ದೀನಿ ಎಂದು ಅಂತಾ ಹೇಳುತ್ತಾರೆ. ಮತ್ತೆ ಕೌಂಟರ್ ಕೊಟ್ಟ ರಜತ್, ನೀನೇನು ಮಗು ಮುಟ್ಟಿದ ಹಾಗೆ ಮುಟ್ಟಿರೋದಾ?, ನಾನೇನು ನಿನ್ನೆ ಮೊನ್ನೆ ಹುಟ್ಟಿ ಬಿಗ್​ ಬಾಸ್​ಗೆ ಬಂದಿಲ್ಲ. ನನಗೆ ಬರ್ತಿರೋ ಸಿಟ್ಟಿಗೆ ನಿನ್ನ ಮಕ-ಮೂತಿ ಒಡೆದು ಹಾಕಿಯೇ ಆಚೆ ಹೋಗಬೇಕಾಗಿತ್ತು ಎಂದಿದ್ದಾರೆ.

ರಜತ್ ಅವರ ಈ ಮಾತು ಧನುಗೆ ಸಿಟ್ಟು ತರಿಸಿದೆ. ಅದೇನೋ ಮುಕ-ಮೂತಿ ಒಡೆಯುತ್ತೀನಿ ಅಂದ್ರಲ್ಲ. ಹೊಡೆಯಿರಿ ನೋಡೋಣ ಎಂದಿದ್ದಾರೆ. ನಿಂಗೆ ತಾಖತ್ತಿದ್ದರೆ ನನ್ನ ಮುಟ್ಟಿ ತೋರಿಸೋ ಎಂದು ಧನು ಮೇಲೆ ರಜತ್ ಮತ್ತಷ್ಟು ಗರಂ ಆಗಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಧನು ಹೊಡೆಯುತ್ತೀರಾ.. ಹೊಡೆಯಿರಿ.. ಎಂದಿದ್ದಾರೆ. ಆಗ ರಜತ್ ಅವರು, ಧನು ಮೇಲೆ ಕೈಮಾಡಲು ಹೋಗಿದ್ದಾರೆ.

BBK 11: ಬಿಗ್ ಬಾಸ್​ನಲ್ಲಿ ಡಬಲ್ ಎಲಿಮಿನೇಷನ್?: ಕುತೂಹಲ ಕೆರಳಿಸಿದ ವಾರದ ಕತೆ ಎಪಿಸೋಡ್