Thursday, 15th May 2025

ನಟಿ ಉರ್ಫಿ ಜಾಧವ್‌ಗೆ ಜೀವ ಬೆದರಿಕೆ ಇಮೇಲ್‌

ನವದೆಹಲಿ: ತನ್ನ ವಿಭಿನ್ನ ಉಡುಗೆಯಿಂದ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ ಉರ್ಫಿ ಜಾಧವ್‌ಗೆ ಜೀವ ಬೆದರಿಕೆಯ ಎರಡು ಇಮೇಲ್‌ಗಳು ಬಂದಿವೆ.

ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡ ಉರ್ಫಿ ಜಾವೇದ್ ತನ್ನ ವಿಭಿನ್ನ ಬಟ್ಟೆಗಳಿಗೆ ಹೆಸರುವಾಸಿಯಾಗಿದ್ದಾಳೆ.

ಇತ್ತೀಚೆಗೆ ಆಕೆ ‘ಭೂಲ್ ಭುಲೈಯಾ’ ಚಲನಚಿತ್ರದಿಂದ ರಾಜ್‌ಪಾಲ್ ಯಾದವ್ ಅವರ ನೋಟವನ್ನು ಮರುಸೃಷ್ಟಿಸಿದರು. ಇದು ಹೆಚ್ಚು ಗಮನ ಸೆಳೆಯಿತು ಮತ್ತು ಆಕೆಗೆ ಸಾವಿನ ಬೆದರಿಕೆಯೂ ಬಂದಿದೆ.

ನಟಿ ಉರ್ಫಿಗೆ ಅಪರಿಚಿತ ವ್ಯಕ್ತಿಯಿಂದ ಇಮೇಲ್ ಬಂದಿದೆ. ಆಕೆ ವೀಡಿಯೊವನ್ನು ತೆಗೆದು ಹಾಕದಿದ್ದರೆ ಅವಳಿಗೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಇಮೇಲ್ ಸ್ವೀಕರಿಸಿದ ನಂತರ ಅವಳು ಈ ಬಗ್ಗೆ ಮುಂಬೈ ಪೊಲೀಸರಿಗೆ ಮೊರೆ ಹೋಗಿದ್ದಾಳೆ ಮತ್ತು ಅದನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ.

ಊರ್ಫಿ ಜಾವೇದ್ ಅವರು ‘ಬಿಗ್ ಬಾಸ್ ಒಟಿಟಿ’ ಯಲ್ಲಿನ ನಂತರ ಖ್ಯಾತಿ ಗಳಿಸಿದರು. ಹಲವಾರು ಟಿವಿ ಶೋಗಳಲ್ಲಿಯೂ ನಟಿಸಿದ್ದಾರೆ. ಅವರು ‘ಬಡೆ ಭಯ್ಯಾ ಕಿ ದುಲ್ಹನಿಯಾ’ ಚಿತ್ರದಲ್ಲಿ ಅವ್ನಿ ಪಾತ್ರವನ್ನು ಮರು ಸೃಷ್ಟಿಸಿ ಹೆಸರುವಾಸಿಯಾಗಿದ್ದಾರೆ.

2016 ರಿಂದ 2017 ರವರೆಗೆ, ಸ್ಟಾರ್ ಪ್ಲಸ್‌ನ ‘ಚಂದ್ರ ನಂದಿನಿ’ ಯಲ್ಲಿ ಛಾಯಾ ಪಾತ್ರವನ್ನು ನಿರ್ವಹಿಸಿದ್ದಾರೆ. 2020 ರಲ್ಲಿ, ಅವರು ಶಿವಾನಿ ಭಾಟಿಯಾ ಆಗಿ ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಸೇರಿದರು. ನಂತರ ಅವರು ‘ಕಸೌತಿ ಜಿಂದಗಿ ಕೇ’ ಚಿತ್ರದಲ್ಲಿ ತನಿಶಾ ಚಕ್ರವರ್ತಿ ಪಾತ್ರವನ್ನು ನಿರ್ವಹಿಸಿದ್ದರು.

Leave a Reply

Your email address will not be published. Required fields are marked *