Sunday, 11th May 2025

ಡಸ್ಟ್ ಅಲರ್ಜಿ: ನಟ ಉಪೇಂದ್ರ ಆರೋಗ್ಯ ತಪಾಸಣೆ

ಬೆಂಗಳೂರು: ನೆಲಮಂಗಲದ ಹರ್ಷ ಆಸ್ಪತ್ರೆಗೆ ಸಾಮಾನ್ಯ ಆರೋಗ್ಯ ತಪಾಸಣೆಗೆಂದು  ನಟ ಉಪೇಂದ್ರ ಅವರು ತೆರೆಳಿದ್ದರು. ಆದರೆ ಈಗ ಅವರು ಆರೋಗ್ಯವಾಗಿದ್ದಾರೆಂಬ ಸುದ್ದಿ ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಉಪೇಂದ್ರ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಡಸ್ಟ್ ಅಲರ್ಜಿ ಆಗಿದೆ. ಹೀಗಾಗಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಉಪೇಂದ್ರ ಅವರು ‘ನಾನು ಆರೋಗ್ಯ ವಾಗಿದ್ದೇನೆ ಶೂಟಿಂಗ್ ಮುಂದುವರೆಸುತ್ತೇನೆ’ ಎಂಬ ವಿಡಿಯೋ ವೈರಲ್ ಆಗುತ್ತಿದೆ.