ಎಂಟನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಬೇರೆಯದೆ ದಿಕ್ಕು ಪಡೆದುಕೊಳ್ಳುತ್ತಿದೆ. ಮನೆಗೆ ರಜತ್ ಕಿಶನ್ ಹಾಗೂ ಶೋಭಾ ಶೆಟ್ಟಿ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಬಳಿಕ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಇದರ ನಡುವೆ ಬಿಗ್ ಬಾಸ್ ಟಾಸ್ಕ್ ನೀಡಿದ್ದು, ಜಿದ್ದಾಜಿದ್ದಿಯಲ್ಲಿ ಎಲ್ಲರೂ ಆಟವಾಡುತ್ತಿದ್ದಾರೆ. ಇದರ ಜೊತೆಗೆ ಜಗಳಗಳು ನಡೆಯುತ್ತಿವೆ. ಅದು ಕೂಡ ಒಂದೇ ಟೀಂ ನಲ್ಲಿದ್ದ ಸ್ಪರ್ಧಿಗಳ ನಡುವೆ ಗಲಾಟೆ ಆಗಿದೆ.
ಬಿಗ್ ಬಾಸ್ಯಲ್ಲಿ ಯಾರು ಸ್ಟ್ರಾಂಗ್?, ಯಾರು ವೀಕ್? ಎಂಬ ವಿಚಾರಕ್ಕೆ ಉಗ್ರಂ ಮಂಜು ಮತ್ತು ರಜತ್ ಕಿಶನ್ ನಡುವೆ ಕಿತ್ತಾಟ ನಡೆದಿದೆ. ಈ ವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಫಿಸಿಕಲ್ ಟಾಸ್ಕ್ ಕೊಟ್ಟಿದ್ದು ಗೆಲ್ಲೋ ಕಿಚ್ಚು ಹೆಚ್ಚಾಗಿದೆ. ಟಾಸ್ಕ್ ಏನೆಂದರೆ ಕೊಳವೆ ಮೂಲಕ ಬರುವ ಚೆಂಡನ್ನು ಪಡೆದುಕೊಂಡು ತಮ್ಮ ತಂಡಕ್ಕೆ ಮೀಸಲಿರುವ ಚೌಕಟ್ಟಿನ ಒಳಗೆ ಚೆಂಡನ್ನು ಇಡಬೇಕು. ಈ ಟಾಸ್ಕ್ ಮಧ್ಯೆ ಬೆಡ್ ರೂಮ್ನಲ್ಲಿ ಮಂಜು-ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ.
ರಜತ್ ಅವರು ನಾನು, ತ್ರಿವಿಕ್ರಮ್ ಒಂದೇ ಟೀಮ್ನಲ್ಲಿ ಇದ್ದರೆ ಎದುರಾಳಿ ತಂಡ ಸ್ವಲ್ಪ ವೀಕ್ ಆಗುತ್ತೆ ಎಂದಿದ್ದಾರೆ. ರಜತ್ ಅವರ ಈ ಮಾತು ಮಂಜು ಅವರನ್ನು ಕೆರಳುವಂತೆ ಮಾಡಿದೆ. ಯಾವ ನನ್ಮಗ ಇಲ್ಲ ಅಂತಾನೆ. ಫಿಸಿಕಲ್ ಕೊಟ್ಟರೆ ನಾವು ಸ್ಟ್ರಾಂಗ್. ನಾವು ಮಾತನಾಡಿದ್ರೆ, ಉರಿ ಕಿತ್ತುಕೊಂಡು ಬಿಟ್ಟಿತು ಎಂದು ಮಂಜುಗೆ ರಜತ್ ತಿರುಗೇಟು ನೀಡಿದ್ದಾರೆ.
ರಜತ್ ಅವರ ವೀಕ್ ಮಾತಿಗೆ ಮಂಜು ಇಬ್ಬರು ಒಂದೇ ಟೀಮ್ನಲ್ಲಿ ಇದ್ರೆ ನಾವೆಲ್ಲಾ ವೀಕ್ ಅಂತಾನ. ನಾವು ವೀಕಾ. ಇಬ್ಬರು ಒಂದೇ ಟೀಮ್ಗೆ ಹೋಗಿ ಗುರು. ಜೋರಾಗಿ ಮಾತಾಡಬೇಡ, ನನಗೂ ಬರುತ್ತೆ ಎಂದು ನೇರವಾಗಿ ಯುದ್ಧಕ್ಕೆ ನಿಂತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್, ಮಂಜು ಮಧ್ಯೆ ನಡೆಯುತ್ತಿದ್ದ ಫೈಟ್ನಲ್ಲಿ ಈಗ ರಜತ್ ಅವರು ಬಂದಿದ್ದಾರೆ.
ಈ ವಾರ ಏಳು ಮಂದಿ ನಾಮಿನೇಟ್:
ಎಂಟನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಹಾಗೂ ಶೋಭಾ ಶೆಟ್ಟಿ, ರಜತ್ ಕಿಶನ್ ಬಿಟ್ಟು ಉಳಿದ 7 ಜನ ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್ ಹಾಗೂ ಹನುಮಂತ ಲಮಾಣಿ ನಾಮಿನೇಟ್ ಆಗಿದ್ದಾರೆ.