ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಜೊತೆಗೆ ಜಗಳಗಳು ಕೂಡ ಹೆಚ್ಚಾಗುತ್ತಿದೆ. ಹನ್ನೆರಡನೇ ವಾರಕ್ಕೆ ಕಾಲಿಟ್ಟಿ ಬಿಬಿಕೆಯಲ್ಲಿ ಟಾಸ್ಕ್ಗಳು ಕಠಿಣವಾಗುತ್ತಿದ್ದು, ಸ್ಪರ್ಧಿಗಳು ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ದೊಡ್ಮನೆ ಎರಡು ಗುಂಪುಗಳಾಗಿ ವಿಂಗಡನೆಗೊಂಡಿದೆ. ಒಂದು ಗುಂಪಿಗೆ ತ್ರಿವಿಕ್ರಮ್ ನಾಯಕನಾದರೆ ಮತ್ತೊಂದು ಗ್ರೂಪ್ಗೆ ರಜತ್ ಕಿಶನ್ ಕ್ಯಾಪ್ಟನ್ ಆಗಿದ್ದಾರೆ.
ತ್ರಿವಿಕ್ರಮ್ ನಾಯಕನಾಗಿರುವ ಗ್ರೂಪ್ನಲ್ಲಿ ಭವ್ಯಾ, ಗೌತಮಿ ಜಾಧವ್, ಮಂಜು ಹಾಗೂ ಚೈತ್ರಾ ಕುಂದಾಪುರ ಇದ್ದರೆ ಅತ್ತ ರಜತ್ ಗುಂಪಿನಲ್ಲಿ ಧನರಾಜ್, ಹನುಮಂತ, ಐಶ್ವರ್ಯಾ ಹಾಗೂ ಮೋಕ್ಷಿತಾ ಪೈ ಇದ್ದಾರೆ. ಈ ಎರಡೂ ಗ್ರೂಪ್ಗಳ ಮಧ್ಯೆ ಕಾಲಕಾಲಕ್ಕೆ ಟಾಸ್ಕ್ ನಡೆಯುತ್ತೆ. ಹೀಗೆ ಟಾಸ್ಕ್ನಲ್ಲಿ ಗೆದ್ದ ತಂಡ ಎದುರಾಳಿ ತಂಡದಲ್ಲಿರುವ ಸದಸ್ಯರನ್ನು ನಾಮಿನೇಟ್ ಮಾಡುವ ಅವಕಾಶ ಪಡೆಯುತ್ತಾರೆ.
ಇದೀಗ ಟಾಸ್ಕ್ ಮಧ್ಯೆ ಉಗ್ರಂ ಮಂಜು ಹಾಗೂ ರಜತ್ ನಡುವೆ ಹೊಡೆದಾಡುವ ಮಟ್ಟಕ್ಕೆ ಜಗಳ ಹೋಗಿದೆ. ಚೆಂಡು ಸಾಗಲಿ ಮುಂದೆ ಹೋಗಲಿ ಎಂಬ ಟಾಸ್ಕ್ ಮಧ್ಯೆ ಉಸ್ತುವಾರಿ ಚೈತ್ರಾ ಅವರು ಧನರಾಜ್ ಅವರಿಗೆ ಪದೇ ಪದೇ ಫೌಲ್ ಕೊಟ್ಟಿದ್ದಾರೆ. ಇದರಿಂದ ಕೆರಳಿದ ರಜತ್, ಧನರಾಜ್‌ಗೆ ಆಟ ಆಡಲೇ ಬೇಡಿ ಎಂದು ತಡೆದು ಎಲ್ಲ ಚಲ್ಲಾ-ಪಿಲ್ಲಿ ಮಾಡಿದ್ದಾರೆ. ಜೊತೆಗೆ ಆಟ ಆಡಿ ಗೆಲ್ಲೋಕೆ ಯೋಗ್ಯತೆ ಇಲ್ಲ ಎಂದು ಚೈತ್ರಾಗೆ ಹೇಳಿದ್ದಾರೆ.
ಅತ್ತ ಸುಮ್ಮನಿರದ ಚೈತ್ರಾ, ಹೋಗಲೇ, ತಾಯತ ಕಟ್ಟಿಸುತ್ತೇನೆ ಎಂದವರೆಲ್ಲಾ ತಾಯತ ಕಟ್ಟಿಸಿಕೊಂಡು ಹೋಗುತ್ತಾ ಇದ್ದಾರೆ ಎಂದು ಹೇಳಿದ್ದಾರೆ. ರಜತ್ ಹಾಗೂ ಚೈತ್ರಾ ಜಗಳದ ಮಧ್ಯೆ ಕರ್ನಾಟಕ ಖದರ್ ತಂಡದಲ್ಲಿರುವ ಮಂಜು ಅವರು ಮಧ್ಯಪ್ರವೇಶಿಸಿದ್ದಾರೆ. ಟಿವಿಯಲ್ಲಿ ಗೇಮ್ ನೋಡಿಕೊಂಡು ಬಂದವರದ್ದೆಲ್ಲಾ ಇದೇ ಕಥೆ ಎಂದು ಮಂಜು ಹೇಳಿದ್ದಾರೆ. ಇಲ್ಲಿಂದ ಶುರುವಾದ ಇವರಿಬ್ಬರ ಜಗಳ ಹೊಡೆದಾಟ ಮಟ್ಟಕ್ಕೆ ಹೋಗಿದೆ.
ನೀನೇನು ಸಾಚ ತರ ಬಂದು ಮಾತನಾಡುತ್ತಾ ಇದ್ದಿಯಾ. ಸಾಚ ಆಟಗಳನ್ನೆಲ್ಲಾ ನಾನು ನೋಡಿಕೊಂಡೇ ಬಂದಿರೋದು ಕೂತ್ಕೋ ಎಂದು ರಜತ್ ಅವರು ಮಂಜು ಮೇಲೆ ಕೂಗಾಡಿದ್ದಾರೆ. ಇದರಿಂದ ಕೆರಳಿದ ಮಂಜು ಕೂತಲ್ಲಿಂದ ಎದ್ದು ರಜತ್ ಎದುರು ಬಂದು ಏನೋ ಹೊಡೆದು ಬಿಟ್ಟು ಹೋಗ್ತಿಯೇನೋ. ಮುಟ್ಟಲೇ ಮುಟ್ಟಲೇ ಎಂದು ಜೋರು ಕೂಗಾಟ-ಗಲಾಟೆ ನಡೆದಿದೆ. ಒಟ್ಟಾರೆ ಪ್ರತಿ ವಾರ ಸುದೀಪ್ ಬಂದು ಸ್ಪರ್ಧಿಗಳಿಗೆ ಬುದ್ದಿವಾದ ಹೇಳುತ್ತಿದ್ದರೂ ಮತ್ತದೆ ತಪ್ಪು ನಡೆಯುತ್ತಿರುವುದು ದುರಾದೃಷ್ಟಕರ.
BBK 11: ಕ್ಯಾಪ್ಟನ್ ಆಗುವ ಕನಸು ನನಸಾದರೂ ಅನುಭವಿಸಲಾಗದೆ ಬಿಗ್ ಬಾಸ್ ತೊರೆದ ಗೋಲ್ಡ್ ಸುರೇಶ್