Saturday, 10th May 2025

BBK 11: ಅಂತಿಮ ಹಂತದಲ್ಲಿ ವೈರಿಗಳಾದ ಭವ್ಯಾ-ತ್ರಿವಿಕ್ರಮ್: ಇಬ್ಬರ ಮಧ್ಯೆ ಜಗಳ

Bhavya Gowda and Trivikram

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಹಂತಕ್ಕೆ ತಲುಪಿದೆ. ಇನ್ನೇನು ಎರಡು ವಾರಗಳಲ್ಲಿ ಶೋ ಮುಕ್ತಾಯಗೊಳ್ಳಲಿದೆ. ಸದ್ಯ ಮನೆಯೊಳಗೆ ಎಂಟು ಮಂದಿ ಇದ್ದಾರಷ್ಟೆ. ಈ ಪೈಕಿ ಒಬ್ಬರು ಈ ವಾರದ ನಡುವೆ ಎಲಿಮಿನೇಟ್ ಆಗಲಿದ್ದಾರೆ. ಅಂದರೆ, ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಬಾಂಡಿಂಗ್ ಕಾಪಾಡಿಕೊಂಡು ಬಂದಿದ್ದ ಸ್ಪರ್ಧಿಗಳೆಲ್ಲ ಈಗ ವೈರಿಗಳಾಗುತ್ತಿದ್ದಾರೆ. ಇದಕ್ಕೆ ಉತ್ತಮ ಸಾಕ್ಷಿ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್.

ಭವ್ಯಾ ಹಾಗೂ ತ್ರಿವಿಕ್ರಮ್ ಮಧ್ಯೆ ಪ್ರೀತಿ ಇದೆ ಎಂದು ಹೇಳಲಾಗಿತ್ತು. ಪ್ರತಿ ವೀಕೆಂಡ್ ಇದರ ಬಗ್ಗೆ ಸುದೀಪ್ ಕೂಡ ಕಾಮಿಡಿ ಮಾಡುತ್ತಾರೆ. ಆದರೆ, ಇದೀಗ ಶೋ ಮುಗಿಯಲು ಎರಡು ವಾರ ಇರುವಾಗ ಇವರಿಬ್ಬರು ವೈರಿಗಳಾಗಿದ್ದಾರೆ. ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಭವ್ಯಾ ಗೌಡ, ತ್ರಿವಿಕ್ರಮ್​ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಬಿಗ್ ​ಬಾಸ್​ ಮನೆ ಮಂದಿಗೆ ವಾರದ ಟಾಸ್ಕ್​ ಕೊಟ್ಟಿದ್ದಾರೆ. ಚೆಂಡು ಕೆಳಗೆ ಬೀಳದಂತೆ ಸಂಭಾಳಿಸುತ್ತಾ, ಅಲ್ಲಿರುವ ಬಾಸ್ಕೆಟ್​ನಲ್ಲಿ ಬೀಳಿಸಬೇಕು. ಮೋಕ್ಷಿತಾ, ಧನರಾಜ್​​, ತ್ರಿವಿಕ್ರಮ್​, ಭವ್ಯಾ ಆಟಕ್ಕಿಳಿದಿದ್ದಾರೆ. ತ್ರಿವಿಕ್ರಮ್​ಗೆ ಆಟದ ಉಸ್ತುವಾರಿ ವಹಿಸಿರುವ ಹನುಮಂತು ಫೌಲ್​ ನೀಡಿದ್ದಾರೆ. ಫೌಲ್​ ಅಲ್ಲ, ಫಸ್ಟಿಂದ ಆಡಿಸಬೇಕು ಎಂದು ಹನುಮಂತು ಸೇರಿದಂತೆ ಸ್ಪರ್ಧಿಗಳು ಸಲಹೆ ಕೊಟ್ಟಿದ್ದಾರೆ. ನಂತರ, ತ್ರಿವಿಕ್ರಮ್​ಗೆ ಆಟವನ್ನು ಮೊದಲಿನಿಂದ ಆರಂಭಿಸುವಂತೆ ಬಿಗ್ ಬಾಸ್​ ಸೂಚಿಸಿದ್ದಾರೆ.

ಆಗ ನಗುಮೊಗದಲ್ಲಿ ಚಪ್ಪಾಳೆ ಹೊಡೆದು ಥ್ಯಾಂಕ್​ ಯೂ ಬಿಗ್​ ಬಾಸ್​​ ಎಂದು ಭವ್ಯಾ ತಿಳಿಸಿದ್ದಾರೆ. ಇದೇ ವಿಚಾರ ಟಾಸ್ಕ್ ಮುಗಿದ ಬಳಿಕ ಇವರಿಬ್ಬರ ಜಗಳಕ್ಕೆ ಕಾರಣ. ಸಿಟ್ಟಿನಿಂದ ತ್ರಿವಿಕ್ರಮ್​ಗೆ ಭವ್ಯಾ ಗೌಡ ನನ್ನಿಂದ ದೂರವಿರಿ ಅಂತ ಹೇಳಿದ್ದಾರೆ. ನಾನು ಸೋತ ತಕ್ಷಣ ನಿನ್ನ ರಿಯಾಕ್ಷನ್​ ಹೇಗಿತ್ತು ಅನ್ನೋದನ್ನು ನೋಡ್ದೆ ಎಂದಿದ್ದಾರೆ. ನಿಮ್ಮ ಕಾರಣ ಇಟ್ಟುಕೊಂಡು ನಾನೇಕೆ ಬೇಸರ ಮಾಡ್ಕೊಳ್ಳಿ ಎಂದು ಭವ್ಯಾ ಪ್ರಶ್ನಿಸಿದ್ದಾರೆ.

ನಂತರ ರಜತ್​ ಬಳಿ ಮಾತನಾಡುತ್ತಿರುವಾಗ ಏನ್​ ಆಡ್ತಾರೆ ಜನ ಎಂದು ತ್ರಿವಿಕ್ರಮ್ ತಮ್ಮ ಅಸಮಾಧಾನಗಳನ್ನು ಹೊರಹಾಕುತ್ತಿದ್ದಂತೆ ಮೈಂಡ್​ ಯುವರ್​ ಲ್ಯಾಂಗ್ವೇಜ್​ ಎಂದು ಭವ್ಯಾ ಕೆರಳಿದ್ದಾರೆ. ಕೋಪಗೊಂಡ ತ್ರಿವಿಕ್ರಮ್​ ನಾನ್​ ನಿನ್​ ಹತ್ರ ಮಾತನಾಡುತ್ತಿದ್ದೀನಾ? ಎಂದು ಪ್ರಶ್ನಿಸಿದ್ದಾರೆ. ಸದ್ಯ ಇವರಿಬ್ಬರ ನಡುವಣ ಜಗಳ ಸಖತ್ ಸೌಂಡ್ ಮಾಡುತ್ತಿದೆ.

BBK 11: ಭವ್ಯಾ-ಮೋಕ್ಷಿತಾ ಸೇರಿ ಮತ್ತೆ ಮೋಸದಾಟ?: ಬಲಿಯಾಗಿದ್ದು ರಜತ್

Leave a Reply

Your email address will not be published. Required fields are marked *