Sunday, 11th May 2025

Tamannaah Bhatia: ಮೇಕಪ್ ಇಲ್ಲದೆ ಕಾಣಿಸಿಕೊಂಡ ಮಿಲ್ಕ್ ಬ್ಯೂಟಿ ತಮನ್ನಾ; ಹೇಗಿದ್ದಾರೆ ನೋಡಿ…

Tamannaah Bhatia

ಸಿನಿಮಾ ತಾರೆಯರು (film actress) ಮೇಕಪ್ ಇಲ್ಲದೆ (Without makeup) ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಒಂದು ವೇಳೆ ಹೊರ ಬಂದರೂ ಯಾರಿಗೂ ತಮ್ಮ ಮುಖ ತೋರಿಸುವುದಿಲ್ಲ. ಅಪರೂಪಕ್ಕೊಮ್ಮೆ ಮೇಕಪ್ ಇಲ್ಲದೆ ಮನೆಯಿಂದ ಹೊರಬಂದ ನಟಿಯರು ಪಾಪರಾಜಿಗಳ ಕೆಮರಾ ಕಣ್ಣಿಗೆ ಬಿದ್ದು ಟ್ರೋಲ್ ಆಗುವುದು ಖಾತರಿ. ಯಾಕೆ ಈ ವಿಷಯ ಅಂತೀರಾ ? ಇದೀಗ ಮಿಲ್ಕ್ ಬ್ಯೂಟಿ ಎಂದೇ ಕರೆಯಲ್ಪಡುವ ತಮನ್ನಾ ಭಾಟಿಯಾ (Tamannaah Bhatia) ಮೇಕಪ್ ಇಲ್ಲದೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಮೇಕಪ್ ಇಲ್ಲದ ತಮನ್ನಾ ಭಾಟಿಯಾ ಅವರ ಚಿತ್ರವನ್ನು ಪಾಪರಾಜಿಗಳು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದು ಭಾರಿ ವೈರಲ್ ಆಗಿದೆ. ಸಾಕಷ್ಟು ಮಂದಿ ಮಿಲ್ಕ್ ಬ್ಯೂಟಿಯ ಮೇಕಪ್ ಇಲ್ಲದ ಲುಕ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tamannaah Bhatia

ಸ್ತ್ರೀ 2 ಚಿತ್ರದಲ್ಲಿ ಆಜ್ ಕಿ ರಾತ್‌.. ಐಟಂ ಸಾಂಗ್ ಮೂಲಕ ಎಲ್ಲರ ಮನಗೆದ್ದಿರುವ ನಟಿ ತಮನ್ನಾಳ ಮೋಡಿ ಮಾಡುವ ನೋಟ, ನೃತ್ಯಕ್ಕೆ ಸಾಕಷ್ಟು ಮಂದಿ ಮನಸೋತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಮನ್ನಾಳ ಮೇಕಪ್ ಇಲ್ಲದ ಚಿತ್ರವನ್ನು ನೋಡಿ ಕೆಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಮನ್ನಾ ಭಾಟಿಯಾ ಜಿಮ್‌ನಿಂದ ಹೊರಬರುವಾಗ ಅವರ ಫೋಟೋಗಳನ್ನು ಕ್ಲಿಕ್ ಮಾಡಲಾಗಿದೆ. ಅವರ ಮುಖವು ಬೆವರಿನಿಂದ ಒದ್ದೆಯಾಗಿತ್ತು. ಹಳದಿ ಬಣ್ಣದ ಟಾಪ್ ನೊಂದಿಗೆ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ತಮನ್ನಾ ಅವರ ಚಿತ್ರವನ್ನು ಪಾಪರಾಜಿಗಳು ಸೆರೆಹಿಡಿದಿದ್ದಾರೆ.

ತಮನ್ನಾ ಭಾಟಿಯಾ ಅವರ ಈ ಫೋಟೋಗಳು ಸಾವಿರಾರು ಮೆಚ್ಚುಗೆಗಳನ್ನು ಗಳಿಸಿದ್ದು, ಯಾವುದೇ ಮೇಕಪ್ ಇಲ್ಲದ ಅವರನ್ನು ನೋಡಿರುವ ಕೆಲವರು ಸಂದೇಶಗಳನ್ನು ಕಳುಹಿಸಿದ್ದಾರೆ, ಶುಭಾಶಯಗಳನ್ನು ತಿಳಿಸಿದ್ದಾರೆ.
ಕಾಮೆಂಟ್ ವಿಭಾಗದಲ್ಲಿ ಕೆಲವರು ಮೇಕಪ್ ಇಲ್ಲದೆಯೂ ನೀವು ತುಂಬಾ ಅದ್ಭುತವಾಗಿ ಕಾಣುತ್ತೀರಿ ಎಂದು ಹೇಳಿದ್ದಾರೆ. ಇನ್ನು ಕೆಲವರು ಅವರ ಸೌಂದರ್ಯವು ಕೇವಲ ಮೇಕ್ಅಪ್ ಗೆ ಸೀಮಿತವಾಗಿಲ್ಲ ಎಂದು ತಿಳಿಸಿದ್ದಾರೆ.

Star Fashion: ಅಮೆರಿಕದಲ್ಲಿ ಸ್ಯಾಂಡಲ್‌ವುಡ್‌ ನಟಿ ಸಾನ್ಯಾ ಅಯ್ಯರ್‌ ಹೈ ಸ್ಟ್ರೀಟ್‌ ಫ್ಯಾಷನ್‌!

ತಮನ್ನಾ ಕೊನೆಯ ಬಾರಿಗೆ ವೇದಾದಲ್ಲಿ ಕಾಣಿಸಿಕೊಂಡಿದ್ದರು. ನಿಖಿಲ್ ಅಡ್ವಾಣಿ ನಿರ್ದೇಶಿಸಿರುವ ವೇದಾದಲ್ಲಿ ಜಾನ್ ಅಬ್ರಹಾಂ ಮತ್ತು ಶಾರ್ವರಿ ವಾಘ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ತಮನ್ನಾ ಅವರು ಒಡೆಲಾ 2 ತೆಲುಗು ವೆಬ್ ಸರಣಿಯ ಹಿಂದಿ ಆವೃತ್ತಿಯಾದ ಡೇರಿಂಗ್ ಪಾರ್ಟ್‌ನರ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *