
ಯಶ್ ನಟನೆಯ ಕೆಜಿಎಫ್ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿದೆ. ಈ ಮೂಲಕ ಯಶ್ ಎಲ್ಲಾ ಎಲ್ಲೆಗಳನ್ನು ಮೀರಿ ಎಲ್ಲೆಡೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಪೆಪ್ಸಿಯ ರಾಯಭಾರಿ ಯಾಗಿರುವುದಕ್ಕೆ ಉತ್ಸಾಹ ಹಂಚಿಕೊಂಡ ಯಶ್, ‘ನಾನು ಪೆಪ್ಸಿಯೊಂದಿಗೆ ತೊಡಗಿಸಿ ಕೊಳ್ಳಲು ಮತ್ತು ಬ್ರಾಂಡ್ನ ಮುಖವಾಗಿ ಅವರೊಂದಿಗೆ ಸೇರಲು ಉತ್ಸುಕನಾಗಿದ್ದೇನೆ. ನಾನು ಜೀವನವನ್ನು ಪೂರ್ಣವಾಗಿ ಜೀವಿಸುತ್ತೇನೆ ಎಂದಿದ್ದಾರೆ.
ಯಶ್ ಕನ್ನಡ ಚಿತ್ರರಂಗದಲ್ಲಿ ಅವರ ನಿರ್ಭೀತ ಮತ್ತು ದಿಟ್ಟ ವ್ಯಕ್ತಿತ್ವದಿಂದಲೇ ಶ್ಲಾಘನೆಗೆ ಒಳಗಾಗಿ ದ್ದಾರೆ ಮತ್ತು ದೇಶದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಯಶ್ ಮತ್ತು ಪೆಪ್ಸಿ ಸೇರಿರುವ ಈ ಬ್ಲಾಕ್ಬಸ್ಟರ್ ತಂಡ ಬೇಸಿಗೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಸಿದ್ಧವಾಗಿದೆ.
ಪೆಪ್ಸಿಕೋ ಇಂಡಿಯಾದ ಪೆಪ್ಸಿ ಕೋಲಾ ವಿಭಾಗದ ಮುಖ್ಯಸ್ಥೆ ಸೌಮ್ಯಾ ರಾಥೋರ್, ‘ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಕೈಜೋಡಿಸಲು ನಾವು ರೋಮಾಂಚನಗೊಂಡಿದ್ದೇವೆ. ಇದು ನಿರ್ಭಯದ ಮನೋಭಾವವನ್ನು ನಿಜವಾಗಿಯೂ ವ್ಯಾಖ್ಯಾನಿ ಸುವ ಹೆಸರು. ಪೆಪ್ಸಿ ಗ್ರಾಹಕರು ಕೂಡ ಇದನ್ನು ಬಲವಾಗಿ ಪ್ರತಿಧ್ವನಿಸುತ್ತಾರೆ.