ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟಕ್ಕೆ ತಲುಪುತ್ತಿರುವಾಗ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಈ ಬಾರಿಯ ಸೀಸನ್ನಲ್ಲಿ ಅನೇಕ ಅನಿರೀಕ್ಷಿತ ಘಟನೆಗಳು ಸಂಭವಿಸಿವೆ. ಬರೀ ಜಗಳಗಳೊಂದಿಗೆ ಪ್ರಾರಂಭವಾದ ಶೋನಲ್ಲಿ ಮೊದಲಿಗೆ ಲಾಯರ್ ಜಗದೀಶ್ ಹಾಗೂ ರಂಜಿತ್ ಅವರನ್ನು ಶೋನಿಂದ ಹೊರಹಾಕಲಾಯಿತು. ಇದೀಗ ವೈಲ್ಡ್ ಕಾರ್ಡ್ ಮೂಲಕ ಬೆಂಕಿಯಂತೆ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ಎರಡೇ ವಾರಕ್ಕೆ ಶೋನಿಂದ ಹೊರಬರಲು ನಿರ್ಧಾರ ಮಾಡಿದ್ದಾರೆ.
ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಐಶ್ವರ್ಯಾ ಹಾಗೂ ಶಿಶಿರ್ ಪೈಕಿ ಯಾರು ಹೋಗಬೇಕು ಎಂದು ಕೇಳುವಾಗ ಶೋಭಾ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟರು. ನನಗೆ ಈ ಮನೆಯಲ್ಲಿ ಇರೋದಕ್ಕೆ ಆಗುತ್ತಿಲ್ಲ. ನಾನಿಲ್ಲಿ ಕಂಟಿನ್ಯೂ ಮಾಡೋಕೆ ಆಗಲ್ಲ ಅಂತ ಅನ್ನಿಸ್ತಾ ಇದೆ. ವೀಕ್ಷಕರ ನಿರೀಕ್ಷೆಯನ್ನು ನಾನು ಮುಟ್ಟುವುದಕ್ಕೆ ಆಗೋದಿಲ್ಲ ಅಂತ ಅನ್ನಿಸ್ತಾ ಇದೆ. ಹೊರಗಡೆ ಹೋಗಿ ಹೇಗೆ ಫೇಸ್ ಮಾಡಬೇಕು ಅಂತ ಗೊತ್ತಾಗ್ತಿಲ್ಲ. ನನಗೆ ವೋಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಅಂತ ಬಿಕ್ಕಿ ಬಿಕ್ಕಿ ಅತ್ತರು.
ಕಿಚ್ಚ ಸುದೀಪ್ ಅನೇಕ ಬಾರಿ ಅರ್ಥ ಮಾಡಿಸುವ ಪ್ರಯತ್ನ ಪಟ್ಟರೂ ಶೋಭಾ ಕನ್ವೆನ್ಸ್ ಆಗಲಿಲ್ಲ. ಅಂತಿಮವಾಗಿ ಹೊರಗಡೆ ಹೋಗಬೇಕಾ ಎಂದು ಕೈ ತೋರಿಸುತ್ತ ದೊಡ್ಡ ಧ್ವನಿಯಲ್ಲಿ ಕಿಚ್ಚ ಸುದೀಪ್ ಶೋಭಾಗೆ ಪ್ರಶ್ನಿಸಿದ್ದಾರೆ. ನಿನಗಾಗಿ ಡೋರ್ ಓಪನ್ ಇದೆ ಎಂದು ಹೇಳಿದ್ದಾರೆ. ಹೊರಹೋಗಲು ಡಿಸೈಡ್ ಮಾಡಿದ ಶೋಭಾಗೆ ಮನೆಯ ಮುಖ್ಯ ಡೋರ್ ಓಪನ್ ಆಗಿದೆ.
ಈ ಸಂದರ್ಭ ಕಣ್ಣೀರು ಇಡುತ್ತಲೆ ಹೊರ ಬರುವ ಶೋಭಾ ಮಂಡಿಯೂರಿ ಯಾರೆಲ್ಲ ನನಗೆ ವೋಟ್ ಮಾಡಿದ್ದಿರೋ, ನಿಮ್ಮೆಲ್ಲರಿಗೂ ನೋವು ಕೊಡಬೇಕು ಅನ್ನೋ ಉದ್ದೇಶ ನನ್ನದಲ್ಲ. ದಯವಿಟ್ಟು ನನ್ನ ತಪ್ಪನ್ನು ಕ್ಷಮಿಸಿಬಿಡಿ ಎಂದಿದ್ದಾರೆ. ಇದರ ಜೊತೆಗೆ ಶಾಕಿಂಗ್ ಹೇಳಿಕೆ ಕೊಟ್ಟಿರುವ ಶೋಭಾ, ಬಿಗ್ ಬಾಸ್ ನನಗೆ ಹೋಗಬೇಕು ಅನಿಸ್ತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪುನಃ ಮನೆಯಲ್ಲಿ ಉಳಿದುಕೊಳ್ಳುವ ಆಸೆ ವ್ಯಕ್ತಪಡಿಸಿದ್ದಾರೆ. ಆದರೆ, ಇದಕ್ಕೆ ಬಿಗ್ ಬಾಸ್ ಏನು ಹೇಳುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದುಬರಲಿದೆ.
BBK 11: ಬಿಗ್ ಬಾಸ್ನಿಂದ ಶೋಭಾ ಶೆಟ್ಟಿ ದಿಢೀರ್ ಹೊರಬರಲು ಏನು ಕಾರಣ?: ಇಲ್ಲಿದೆ ಅಸಲಿ ವಿಚಾರ