Sunday, 11th May 2025

ಶಿವರಾಜ್​ ಕುಮಾರ್ ಚಿತ್ರ ಜೀವನಕ್ಕೆ ಈಗ 37 ವರ್ಷ..

ಬೆಂಗಳೂರು: ಶಿವರಾಜ್​ ಕುಮಾರ್ ತಮ್ಮ ವ್ಯಕ್ತಿತ್ವದಿಂದ ಎಲ್ಲರ ಶಿವಣ್ಣ ಆಗಿದ್ದಾರೆ. ಅಭಿನಯದ ಪ್ರತಿಭೆಯಿಂದಲೇ ಸ್ಟಾರ್ ನಟರಾಗಿ ಬೆಳೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು ಹ್ಯಾಟ್ರಿಕ್ ಹೀರೋ ಕೂಡ ಅನಿಸಿಕೊಂಡಿದ್ದಾರೆ.

ಶಿವರಾಜ್​ ಕುಮಾರ್ ಚಿತ್ರ ಜೀವನಕ್ಕೆ ಈಗ 37 ವರ್ಷ ತುಂಬಿದೆ. 1986 ರಿಂದ 2023 ಲೆಕ್ಕವನ್ನ ತೆಗೆದುಕೊಂಡರೆ ಶಿವರಾಜ್​​ ಕುಮಾರ್ ತಮ್ಮ ಜೀವನದಲ್ಲಿ 37 ವರ್ಷ ಚಿತ್ರರಂಗದಲ್ಲಿಯೇ ಕಳೆದಿದ್ದಾರೆ.

ಆನಂದ ಸಿನಿಮಾ ಶಿವಣ್ಣನ ಬದುಕಿನ ಯಶಸ್ವಿ ಮೊದಲ ಹೆಜ್ಜೆ ಆಗಿದೆ. ಈ ಚಿತ್ರ 1986 ರಲ್ಲಿ ರಿಲೀಸ್ ಆಗಿತ್ತು. ಇದು ಶಿವಣ್ಣನ ಚಿತ್ರ ಜೀವನಕ್ಕೆ ಭದ್ರ ಬುನಾದಿ ಕೂಡ ಆಗಿತ್ತು.

ಆನಂದ ಚಿತ್ರ ಗೆದ್ದ ಮೇಲೆ ರಥಸಪ್ತಮಿ ಸಿನಿಮಾ ಬಂತು. ಇದು ಶಿವರಾಜ್​ ಕುಮಾರ್ ಸಿನಿಮಾ ಜೀವನದ ಎರಡನೇ ಹಿಟ್ ಚಿತ್ರ ಆಗಿತ್ತು. ಮನಮೆಚ್ಚಿದ ಹುಡುಗಿ ಮೂರನೇ ಹಿಟ್ ಚಿತ್ರವಾಯಿತು. ಅಲ್ಲಿಗೆ ಕನ್ನಡಕ್ಕೆ ಹ್ಯಾಟ್ರಿಕ್ ಹೀರೋ ಸಿಕ್ಕೇ ಬಿಟ್ಟರು.

ಹೀಗೆ ಶಿವರಾಜ್ ಕುಮಾರ್ ಹೊಸ ಪಾತ್ರಗಳಿಗೆ ಜೀವ ತುಂಬತ್ತಲೇ, ಈಗ 37 ವರ್ಷ ಪೂರೈಸಿದ್ದಾರೆ. ವರ್ಷ ವರ್ಷ ದಂತೆ ಈ ವರ್ಷ ಕೂಡ ಶಿವರಾಜ್​ ಕುಮಾರ್ ಒಂದು ಅರ್ಧ ಡಜನ್ ಸಿನಿಮಾ ಒಪ್ಪಿದ್ದಾರೆ.