Tuesday, 13th May 2025

‘ಕೆಡಿ’ ಚಿತ್ರೀಕರಣ: ಸಂಜಯ್ ದತ್’ಗೆ ಗಾಯ

ಬೆಂಗಳೂರು: ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನ್ನಡದ ಪ್ಯಾನ್-ಇಂಡಿಯಾ ಸಿನಿಮಾ ‘ಕೆಡಿ’ ಚಿತ್ರೀಕರಣ ನಡೆಸು ತ್ತಿದ್ದು, ಸಂಜಯ್ ದತ್ ಅವರು ಬಾಂಬ್ ಸ್ಫೋಟದ ಸರಣಿಯ ಚಿತ್ರೀಕರಣದ ವೇಳೆ ಗಾಯಗೊಂಡಿ ದ್ದಾರೆ ಎಂದು ಮೂಲಗಳು ಬುಧವಾರ ತಿಳಿಸಿವೆ.
ಬಾಂಬ್ ಸ್ಫೋಟದ ದೃಶ್ಯ ಚಿತ್ರೀಕರಿಸುವಾಗ ಸಂಜಯ್ ಅವರ ಮೊಣಕೈ, ಕೈ ಮತ್ತು ಮುಖದ ಮೇಲೆ ಗಾಯಗಳಾಗಿವೆ ಎಂದು ಮೂಲಗಳು ವಿವರಿಸಿವೆ. ಫೈಟ್ ಮಾಸ್ಟರ್ ಡಾ. ರವಿವರ್ಮ ಚಿತ್ರಕ್ಕೆ ಫೈಟ್ ಕಂಪೋಸ್ ಮಾಡುತ್ತಿದ್ದರು.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗಾಯಗಳಿಂದ ಸಂಜಯ್ ದತ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರರಂಗದ ಮೂಲಗಳು ವಿವರಿಸಿವೆ. ಕೆಜಿಎಫ್ ಅಧ್ಯಾಯ 1 ಮತ್ತು 2ರ ನಂತರ, ಆಯಕ್ಷನ್ ಹೀರೋ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ಸಂಜಯ್ ದತ್ ಅವರು ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ.

‘ಕೆಡಿ’ ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದು, ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.