Tuesday, 13th May 2025

ಹಿರಿಯ ನಟ ರಾಜೇಶ್ ಅವರ ಪತ್ನಿ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರ ಪತ್ನಿ ಪಾರ್ವತಮ್ಮ(78 ವರ್ಷ) ನಿಧನ ಹೊಂದಿದ್ದಾರೆ.

ಹಿರಿಯ ನಟ ರಾಜೇಶ್ ಅವರ ಪತ್ನಿ ಪಾರ್ವತಮ್ಮ ಬೆಂಗಳೂರಿನ ವಿದ್ಯಾರಣ್ಯಪುರದ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಪಾರ್ವತಮ್ಮ ಅವರು ಪತಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ರಾಜೇಶ್ ದಂಪತಿಯ ಪುತ್ರಿ ನಿವೇದಿತಾ, ನಟ ಅರ್ಜುನ್ ಸರ್ಜಾ ಅವರನ್ನು ವಿವಾಹವಾಗಿದ್ದಾರೆ.