Sunday, 11th May 2025

Ramesh Aravind: ಜನ್ಮದಿನದ ಸಂಭ್ರಮದಲ್ಲಿ ರಮೇಶ್‌ ಅರವಿಂದ್‌; ಫೋಟೊ ಶೂಟ್‌ ಮೂಲಕ ಗಮನ ಸೆಳೆದ ನಟ

Ramesh Aravind

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ರಮೇಶ್ ಅರವಿಂದ್ (Ramesh Aravind) ಪ್ರತಿಭಾನ್ವಿತ ಕಲಾವಿದ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೀಗೆ ಅವರೊಬ್ಬ ಬಹುಮುಖ ಪ್ರತಿಭೆ. ಪ್ರತಿಭಾನ್ವಿತ ಸಜ್ಜನ ನಟ ಎನಿಸಿಕೊಂಡಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್‍ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ಅವರು ಇಂದಿಗೂ ಕೂಡ ಬೇಡಿಕೆಯ ನಟ. ರಮೇಶ್ ಹುಟ್ಟುಹಬ್ಬದ ಪ್ರಯುಕ್ತ ಸ್ಪೆಷಲ್ ಆಗಿ ಸಖತ್ ಸ್ಟೈಲಿಶ್‌ ಆಗಿ ಫೋಟೊ ಶೂಟ್‌ ಮಾಡಿಸಿಕೊಂಡಿದ್ದಾರೆ.

ರಮೇಶ್ ಅರವಿಂದ್ ಇಂದು (ಸೆಪ್ಟೆಂಬರ್‌ 10) ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ರೆಟ್ರೋ ಲುಕ್‌ನಲ್ಲಿ ಕ್ಯಾಮೆರಾಗೆ ತರೇಹವಾರಿ ಪೋಸ್ ಕೊಟ್ಟಿದ್ದಾರೆ. ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಭರತ್ ರಾಮದಾಸ್ ಬಟ್ಟೆಯಲ್ಲಿ ರಮೇಶ್ ಚಿರಯುವಕನಂತೆ ಕಂಗೊಳಿಸಿದ್ದಾರೆ.

ಯಾರು ಈ ಭರತ್?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್‌ಬಾಸ್‌ನಲ್ಲಿ ತೊಡುವ ಸ್ಟೈಲಿಶ್‌ ಕಾಸ್ಟ್ಯೂಮ್‌ಗಳನ್ನು ನೀವೆಲ್ಲಾ ನೋಡೇ ಇರ್ತಿರಾ. ವೀಕೆಂಡ್‌ನಲ್ಲಿ ಸಖತ್ ಡಿಫರೆಂಟ್ ಕಾಸ್ಟ್ಯೂ ಮ್‌ನಲ್ಲಿ ಕಿಚ್ಚ ಕಾಣಿಸಿಕೊಳ್ಳುತ್ತಿದ್ದರು. ಕಿಚ್ಚನ ಆ ಸ್ಟೈಲಿಶ್‌ ಅವತಾರದ ಹಿಂದಿನ ರೂವಾರಿಯೇ ಈ ಭರತ್. ಭರತ್ ಕಿಚ್ಚನಿಗೆ ಮಾತ್ರವಲ್ಲ ಸಾಕಷ್ಟು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಕಾಸ್ಟ್ಯೂಮ್ ಡಿಸೈನರ್ ಆಗಿ ಜನಪ್ರಿಯರಾಗಿದ್ದಾರೆ. ಸದ್ಯ ರಮೇಶ್‌ ಅವರ ಹೊಸ ಫೋಟೊ ಶೂಟ್‌ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ರಮೇಶ್‌ ಅರವಿಂದ್‌ ಮುಂದಿನ ಚಿತ್ರಗಳು

ಸದ್ಯ ರಮೇಶ್‌ ವಿವಿಧ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ರಾಧಿಕಾ ಕುಮಾರಸ್ವಾಮಿ ನಟಿಸಿ, ನಿರ್ಮಿಸುತ್ತಿರುವ ʼಭೈರಾದೇವಿʼ ಸಿನಿಮಾದಲ್ಲಿ ರಮೇಶ್‌ ಮುಖ್ಯಪಾತ್ರದಲ್ಲಿ ಕಾನಿಸಿಕೊಂಡಿದ್ದಾರೆ. ದಸರಾ ಪ್ರಯುಕ್ತ ಅಕ್ಟೋಬರ್‌ 3ರಂದು ಈ ಸಿನಿಮಾ ತೆರೆ ಕಾಣಲಿದೆ. ಶ್ರೀಜೈ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರದಲ್ಲಿ ರಾಧಿಕಾ ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರು ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ರಮೇಶ್‌ ಮತ್ತು ರಾಧಿಕಾ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ.

ಇದರ ಜತೆಗೆ ಧ್ರುವ ಸರ್ಜಾ-ಪ್ರೇಮ್‌ ಕಾಂಬಿನೇಷನ್‌ನ ʼಕೆಡಿʼ ಸಿನಿಮಾದಲ್ಲಿಯೂ ರಮೇಶ್‌ ನಟಿಸುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಚಿತ್ರವಾಗಿ ಇದು ತೆರೆ ಕಾಣಲಿದ್ದು, ಬಾಲಿವುಡ್‌ ಸ್ಟಾರ್‌ಗಳಾದ ಸಂಜಯ್‌ ದತ್‌ ಮತ್ತು ಶಿಲ್ಪಾ ಶೆಟ್ಟಿ, ವಿ.ರವಿಚಂದ್ರನ್‌ ಕೂಡ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಇತ್ತೀಚೆಗೆ ಸೆಟ್ಟೇರಿದ ‘Your’s Sincerely ರಾಮ್’ ಸಿನಿಮಾದಲ್ಲಿ ಗಣೇಶ್‌ ಜೊತೆಗೆ ರಮೇಶ್‌ ಮೋಡಿ ಮಾಡಲಿದ್ದಾರೆ. ವಿಖ್ಯಾತ್ ನಿರ್ದೇಶನದ ಈ ಚಿತ್ರಕ್ಕೆ ಗೌರಿ ಹಬ್ಬವಾದ ಶುಕ್ರವಾರ ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಮುಹೂರ್ತ ನೆರವೇರಿದೆ.

ಕೊನೆಯದಾಗಿ ರಮೇಶ್‌ 2023ರಲ್ಲಿ ತೆರೆಕಂಡ ʼಶಿವಾಜಿ ಸುರತ್ಕಲ್‌ 2ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆಕಾಶ್‌ ಶ್ರೀವತ್ಸ ನಿರ್ದೇಶಿಸಿದ ಈ ಸಿನಿಮಾ ಮೂಲಕ ಗಮನ ಸೆಳೆದಿದ್ದರು.

ಈ ಸುದ್ದಿಯನ್ನೂ ಓದಿ: Your’s Sincerely Raam: ಮತ್ತೆ ಒಂದಾದ ಗಣೇಶ್‌-ರಮೇಶ್‌; ಗಮನ ಸೆಳೆಯುವ ʼರಾಮ್‌ʼ ಚಿತ್ರದ ಟೀಸರ್‌ ಇಲ್ಲಿದೆ

Leave a Reply

Your email address will not be published. Required fields are marked *