ಹೈದರಾಬಾದ್: ರಾಮ್ ಚರಣ್ (Ram Charan) ನಟನೆಯ ಗೇಮ್ ಚೇಂಜರ್ ಸಿನಿಮಾ ಇನ್ನೇನು ಕೆಲವೇ ದಿನದಲ್ಲಿ ಬಿಡುಗಡೆ ಆಗಲಿದ್ದು ಸಿನಿಮಾದ ಪ್ರಚಾರಕ್ಕಾಗಿ ವಿಶೇಷ ಸಂದರ್ಶನಗಳನ್ನು ನೀಡುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಅವರ ಟಾಕ್ ಶೋಗೂ ರಾಮ್ ಚರಣ್ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಗಳ ಬಗ್ಗೆ ಮಾತನಾಡಿ ರಾಮ್ ಚರಣ್ ಭಾವುಕರಾಗಿದ್ದಾರೆ. ತನ್ನ ಮಗಳಿಗೆ ಕ್ಲಿನ್ ಕಾರಾ ಕೊನಿಡೆಲಾ ಎಂದು ಹೆಸರಿಟ್ಟಿದ್ದು ಮಗುವಿನ ಮುಖ ಇಲ್ಲಿಯವರೆಗೆ ಅವರು ರಿವೀಲ್ ಮಾಡಿಲ್ಲ. ಹೀಗಿರುವಾಗ ತಮ್ಮ ಪುತ್ರಿಯ ಫೇಸ್ ರಿವೀಲ್ ಬಗ್ಗೆ ರಾಮ್‌ಚರಣ್ ಬಿಗ್ ಅಪ್ಡೇಟ್‌ವೊಂದನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಗಳ ಮುಖ ಯಾವಾಗ ತೋರಿಸ್ತೀರಾ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಮ್‌ಚರಣ್ ಕ್ಲಿನ್ ಕಾರಾ ನನ್ನ ಅಪ್ಪ ಅಂದ ಕೂಡಲೇ ಎಲ್ಲರಿಗೂ ತೋರಿಸ್ತೀನಿ ಎಂದು ಹೇಳಿ ಭಾವುಕರಾಗಿದ್ದಾರೆ. ಈ ಮಾತು ಕೇಳಿ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ. ತಮ್ಮ ಮಗಳ ಬಗ್ಗೆ ಮಾತನಾಡಿ ಕ್ಲಿನ್ ಕಾರಾ ನನ್ನ ಜೊತೆಯಲ್ಲಿ ತುಂಬಾ ತುಂಟಾಟ ಮಾಡ್ತಾಳೆ. ಕಾಲ್ಬೆರಳುಗಳನ್ನು ತನ್ನ ಮೇಲೆ ಇಡುತ್ತಾಳೆ ಎಂದು ಮಗಳ ಬಗ್ಗೆ ಮಾತನಾಡಿದ್ದಾರೆ.
ಈ ಶೋನಲ್ಲಿ ಖಾಸಗಿ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಪತ್ನಿ ಉಪಾಸನಾ ಬಗ್ಗೆಯೂ ಮಾತನಾಡಿದ್ದಾರೆ. ಕುಟುಂಬದ ಬಗ್ಗೆ ಮಾತಾಡುವಾಗ ರಾಮ್‌ಚರಣ್ ಭಾವುಕರಾಗಿದ್ದಾರೆ. ಕ್ಲಿನ್ ಕಾರಾ ಬಗ್ಗೆ ಮಾತಾಡುವಾಗಲೂ ಕಣ್ಣೀರು ಹಾಕಿದ್ದಾರೆ. ಶೋನಲ್ಲಿ ಅವರ ತಾಯಿ ಮತ್ತು ಅಜ್ಜಿ ವಿಡಿಯೋ ಮೂಲಕ 2025ರಲ್ಲಿ ಇನ್ನೊಂದು ಮಗು ಬೇಕು ಎಂದು ಹೇಳಿದಾಗ ರಾಮ್‌ಚರಣ್ ತಮಾಷೆ ಮಾಡಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಉಪಾಸನಾ ಕೂಡ ಮಗುವಿನ ಫೇಸ್ ಬ್ಲರ್ ಆಗಿರುವ ಫೊಟೋ ಶೇರ್ ಮಾಡಿದ್ದರು.
ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಚಿತ್ರ ಜನವರಿ 10 ರಂದು ವಿಶ್ವದಾದ್ಯಂತ ತೆರೆ ಕಾಣಲಿದ್ದು ನಟ ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಂಕರ್ ನಿರ್ದೇಶನದ ಗೇಮ್ ಚೇಂಜರ್‌ನಲ್ಲಿ ಚರಣ್ ಜೋಡಿ ಯಾಗಿ ಕಿಯಾರಾ ಅದ್ವಾನಿ, ಅಂಜಲಿ ನಟಿಸಿದ್ದಾರೆ. ಇವರ ಜೊತೆಗೆ ಶ್ರೀಕಾಂತ್, ಎಸ್ ಜೆ ಸೂರ್ಯ, ಸುನಿಲ್, ನವೀನ್ ಚಂದ್ರ ಇತರರು ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಇದು ಸರ್ಪ ಸಂಬಂಧ! ಸತ್ತ ಗಂಡು ಹಾವಿನ ಎದುರು ಗಂಟೆಗಟ್ಟಲೆ ಕೂತು ಶೋಕಿಸಿದ ಹೆಣ್ಣು ಹಾವು; ವಿಡಿಯೊ ವೈರಲ್