Sunday, 11th May 2025

ಅತಿ ಹೆಚ್ಚು ತೆರಿಗೆ ಪಾವತಿ: ಸೂಪರ್ ಸ್ಟಾರ್ ರಜನಿಕಾಂತ್’ಗೆ ಗೌರವ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆದಾಯ ತೆರಿಗೆ ಇಲಾಖೆ ಗೌರವಿಸಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಮತ್ತು ತ್ವರಿತ ತೆರಿಗೆ ಪಾವತಿಸುವವರೆಂದು ಗುರುತಿಸ ಲ್ಪಟ್ಟಿದ್ದಾರೆ. ಅವರು ಅತಿ ಹೆಚ್ಚು ತೆರಿಗೆ ಪಾವತಿಸಿದ್ದಾರೆ. ತಂದೆಯ ಪರ ಪುತ್ರಿ ಐಶ್ವರ್ಯಾ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಮಗಳು ಐಶ್ವರ್ಯಾ ಅವರು ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ರಜನೀ ಕಾಂತ್ ಈಗ ಹಲವಾರು ವರ್ಷಗಳಿಂದ ತಮಿಳುನಾಡಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ. ಜುಲೈ 24 ರಂದು, ಅಕ್ಷಯ್ ಕುಮಾರ್ ಸರ್ಕಾರದಿಂದ ಅತಿ ಹೆಚ್ಚು ತೆರಿಗೆ ಪಾವತಿಸುವ ಪ್ರಶಸ್ತಿ ಪಡೆದರು. ಅವರು ಐಟಿ ಇಲಾಖೆ ಯಿಂದ ಪ್ರಮಾಣಪತ್ರವನ್ನು ಪಡೆದರು.

ಫೋಟೋಗಳನ್ನು ಹಂಚಿಕೊಂಡಿರುವ ಐಶ್ವರ್ಯಾ, ‘ಉನ್ನತ ಮತ್ತು ತ್ವರಿತ ತೆರಿಗೆದಾರರ ಹೆಮ್ಮೆಯ ಮಗಳು.  #incometaxday2022 #onbehalfofmyfather ರಂದು ಅಪ್ಪಾ ಅವರನ್ನು ಗೌರವಿಸಿದ್ದಕ್ಕಾಗಿ ತಮಿಳುನಾಡು ಮತ್ತು ಪುದು ಚೇರಿಯ #incometaxdepartment ಧನ್ಯವಾದಗಳು ತಿಳಿಸಿದ್ದಾರೆ.