Monday, 12th May 2025

72ನೇ ಹುಟ್ಟುಹಬ್ಬ ಆಚರಿಸಿಕೊಂಡ ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಬಾಬಾ’ ಚಿತ್ರವು 20 ವರ್ಷಗಳ ಬಳಿಕ ಮರು ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್ 12ಕ್ಕೆ ರಜನಿಕಾಂತ್ ಅವರು ತಮ್ಮ 72ನೇ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ.

2002ರಲ್ಲಿ ತೆರೆ ಕಂಡಿದ್ದ ಅಧ್ಯಾತ್ಮಿಕ ಹಿನ್ನೆಲೆಯ ಕಥಾಹಂದರ ಹೊಂದಿರುವ ಬಾಬಾ ಸಿನಿಮಾ ಆಗ ಸಕ್ಸೆಸ್ ಕಂಡಿರ ಲಿಲ್ಲ.  ನೆಲಕಚ್ಚಿದ್ದ ಸಿನಿಮಾವನ್ನು ಮತ್ತೆ 20 ವರ್ಷಗಳ ಬಳಿಕೆ ಯಾಕೆ ಮರು ಬಿಡುಗಡೆ ಮಾಡಲಾಗಿದೆ ಎಂಬ ಕುತೂಹಲ ಸಹಜ.

ಈ ಚಿತ್ರದಲ್ಲಿ ಮೋನಿಷಾ ಕೊಯಿರಾಲ ಮುಖ್ಯ ನಟಿಯಾಗಿದ್ದರು. ಆಸ್ಕರ್ ವಿಜೇತ ಎ ಆರ್ ರೆಹಮಾನ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದರು. ರಜನಿಕಾಂತ್ ಅವರದ್ದೇ ಕತೆ, ಚಿತ್ರಕತೆ ಮತ್ತು ನಿರ್ಮಾಣ ಕೂಡ. ಹಾಗಾಗಿ, ಈ ಸಿನಿಮಾದ ಬಗ್ಗೆ ಅವರಿಗೆ ಪ್ರೀತಿ ಹೆಚ್ಚು.

ಟಿವಿ, ಒಟಿಟಿ, ಯುಟ್ಯೂಬ್ ಸೇರಿದಂತೆ ಯಾವ ವೇದಿಕೆಗಳಲ್ಲೂ ಈ ಸಿನಿಮಾ ಅಧಿಕೃತವಾಗಿ ಬಿಡುಗಡೆಯಾಗಿಲ್ಲ.