Wednesday, 14th May 2025

ಕೋಟಿ ಸಂಭಾವನೆ ಕೊಟ್ಟರೂ ಲಿಪ್ ಲಾಕ್ ಸೀನ್‌ಗಳಲ್ಲಿ ನಟಿಸಲ್ಲ: ನಟಿ ಪ್ರಿಯಾಮಣಿ

ಬೆಂಗಳೂರು: ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ಹುಡುಗಿ ನಟಿ ಪ್ರಿಯಾಮಣಿ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮದುವೆಯ ಬಳಿಕ ಕೊಂಚ ಮಟ್ಟಿಗೆ ಸಿನಿಮಾದ ಕೆಲಸಗಳಿಂದ ದೂರವಾಗಿದ್ದ ನಟಿ ಇದೀಗ ಮತ್ತೆ ಪ್ಲ್ಯಾಟ್ ಗೆ ಮರಳಿದ್ದಾರೆ.

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷ ಕಳೆದಿದ್ದರು ಇದುವರೆಗೂ ಯಾವುದೇ ಕಿಸ್ಸಿಂಗ್ ದೃಶ್ಯ ಅಥವಾ ಹಸಿ ಬಿಸಿ ದೃಶ್ಯಗಳಲ್ಲಿ ಪ್ರಿಯಾಮಣಿ ನಟಿಸಿಲ್ಲ.

ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿರುವ ನಟಿ ಕನ್ನಡದಲ್ಲಿ ರಾಮ್, ಅಣ್ಣಾ ಬಾಂಡ್, ಕೋ ಕೋ, ವಿಷ್ಣು ವರ್ಧನ, ಲಕ್ಷ್ಮಿ ಚಿತ್ರ ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಶಾರುಖ್ ಖಾನ್ ನಟನೆಯ ‌’ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾದಲ್ಲಿನ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಇದೀಗ ಮತ್ತೆ ಶಾರುಖ್ ಜೊತೆ ಸೊಂಟ ಬಳುಕಿಸಲು ಸಜ್ಜಾಗಿದ್ದಾರೆ.

20 ವರ್ಷಗಳ ಸಿನಿ ಜರ್ನಿಯಲ್ಲಿ ಭಿನ್ನ ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರೋ ಪ್ರಿಯಾಮಣಿ, ಕೋಟಿ ಸಂಭಾವನೆ ಕೊಟ್ರು ಹಾಟ್ ದೃಶ್ಯ, ಲಿಪ್ ಲಾಕ್ ಸೀನ್‌ಗಳಲ್ಲಿ ನಟಿಸೋದಿಲ್ಲ ಎಂದಿದ್ದಾರೆ.

ಸಿನಿಮಾದಲ್ಲಿ ನಟಿಸುವಾಗ ಕೆಲವರು ಮಡಿವಂತಿಕೆ ಕಾಪಾಡಿಕೊಂಡಿದ್ದಾರೆ. ಕಿಸ್ ದೃಶ್ಯಗಳಲ್ಲಿ, ಹಸಿಬಿಸಿ ದೃಶ್ಯಗಳಲ್ಲಿ ನಟಿಸೋಕೆ ನೋ ಎನ್ನುತ್ತಾರೆ. ಪ್ರಿಯಾಮಣಿ ಅವರು ಎರಡನೇ ಸಾಲಿಗೆ ಸೇರುತ್ತಾರೆ.

2017ರಲ್ಲಿ ಮುಸ್ತಫಾ ರಾಜ್ ಅವರನ್ನು ಪ್ರಿಯಾಮಣಿ ಮದುವೆ ಆದರು. ಮದುವೆ ನಂತರ ಪಾತ್ರಗಳನ್ನು ಮಾಡುತ್ತಿಲ್ಲ. ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳದೇ ಇರೋದು ನನ್ನ ಜವಾಬ್ದಾರಿ ಎನಿಸುತ್ತದೆ ಎಂದು ನಟಿ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *