Sunday, 11th May 2025

BBK 11: ಬಿಗ್ ಬಾಸ್ ಮನೆಯಲ್ಲಿ ಭಯದ ವಾತಾವರಣ: ಅಷ್ಟಕ್ಕೂ ಏನಾಯಿತು?, ಇಲ್ಲಿದೆ ಮಾಹಿತಿ

BBK 11 Ghost

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೆರಡನೇ ವಾರದ ಅಂತ್ಯದಲ್ಲಿದೆ. ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ವಾರದ ಕತೆಯನ್ನು ಕಿಚ್ಚ ಸುದೀಪ್ ಮನೆಯವರೊಂದಿಗೆ ಮಾತನಾಡಲಿದ್ದಾರೆ. ಇದರ ನಡುವೆ ಬಿಗ್ ಬಾಸ್ ಮನೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮನೆಯ ಕನ್ನಡಿಯಲ್ಲಿ ಯಾರನ್ನೋ ನೋಡಿದ್ದಾರೆ. ಕಿಚನ್ ಏರಿಯಾದಲ್ಲಿದ್ದ ಗೌತಮಿ ಹೆದರಿದ್ದಾರೆ. ಮನೆಯಲ್ಲಿರೋ ಸದಸ್ಯರೆಲ್ಲರೂ ಬೆಚ್ಚಿಬಿದಿದ್ದಾರೆ.

ಮೊದಲು ಇದನ್ನು ನೋಡಿದ ಗೌತಮಿ ಏನೋ ಕಾಣಿಸುತ್ತಿದೆ ಎಂದು ಮೋಕ್ಷಿತಾಗೂ ತೋರಿಸುತ್ತಾರೆ. ಮತ್ತೊಮ್ಮೆ ದೆವ್ವ ಕಾಣಿಸಿಕೊಂಡಾಗ ಗೌತಮಿ ಜೋರಾಗಿ ಕಿರುಚಾಡಿದ್ದಾರೆ. ಜೊತೆಗೆ ಗೌತಮಿ ಮನೆಯವರನ್ನೆಲ್ಲ ಕರೆಸಿದ್ದಾರೆ. ಉಗ್ರಂ ಮಂಜು- ರಜತ್ ಕಿಶನ್ ಕೂಡ ಬೆಚ್ಚಿಬಿದ್ದು ಜೋರಾಗಿ ಕಿರುಚಿಕೊಂಡಿದ್ದಾರೆ. ಅತ್ತ ಐಶ್ವರ್ಯಾ ಸಿಂಧೋಗಿಗೆ ಕೂಡ ಕನ್ನಡಿಯಲ್ಲಿ ಯಾರದ್ದೋ ಮುಖ ಕಾಣಿಸಿಕೊಮಡಿದೆ. ನಂತರ ಅದರ ಅಸಲಿ ಕತೆ ರಿವೀಲ್ ಆಗಿದೆ.

ದೊಡ್ಮನೆಯಲ್ಲಿ ಯಾವುದೇ ದೆವ್ವ-ಭೂತವಿಲ್ಲ. ನೂರು ಜನ್ಮಕೂ ಸೀರಿಯಲ್ ಕಲಾವಿದರು ಬಂದಿದ್ದಾರಷ್ಟೆ. ತಮ್ಮ ಸೀರಿಯಲ್ ಪ್ರಮೋಷನ್‌ಗೇನೆ ಇವರು ಇಲ್ಲಿ ಆಗಮಿಸಿದ್ದಾರೆ. ಹೀರೋ, ಹೀರೋಯಿನ್ ಹಾಗೂ ದೆವ್ವದ ಪಾತ್ರಧಾರಿ ಇಲ್ಲಿ ಎಂಟ್ರಿಕೊಟ್ಟಿದ್ದಾರೆ. ಈ ಮೂಲಕ ಮನೆ ಮಂದಿಗೆ ಸರ್ಪ್ರೈಸ್‌ ಕೊಟ್ಟಿದ್ದಾರೆ.

ಈ ಕಲಾವಿದರ ಆಗಮನದಿಂದ ಮನೆ ಸದಸ್ಯರು ಫುಲ್ ಖುಷಿ ಆಗಿದ್ದಾರೆ. ವಿಶೇಷವಾಗಿ ನಟಿ ಭವ್ಯ ಗೌಡ ಹ್ಯಾಪಿ ಆಗಿದ್ದಾರೆ. ಕಾರಣ, ದಿವ್ಯಾ ಅಭಿನಯದ ಗೀತಾ ಸೀರಿಯನ್‌ನ ಹೀರೋ ಧನುಷ್ ಗೌಡ ಈ ಹೊಸ ಸೀರಿಯಲ್ ನೂರು ಜನ್ಮಕೂನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂತೆಯೇ ಬಿಗ್​ಬಾಸ್​ ಮನೆಯಲ್ಲಿ ಆತ್ಮರೂಪದಲ್ಲಿ ಚಂದನಾ ಗೌಡ ಅವರ ಮುಖ ಕಾಣಿಸಿದೆ. ಇದನ್ನು ನೋಡಿ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.

ಚೈತ್ರಾ ಕುಂದಾಪುರಾಗೆ ಕ್ಲಾಸ್?:

ಈ ವಾರದ ಟಾಸ್ಕ್ ಮಧ್ಯೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ ಕುಂದಾಪುರ ತೆಗೆದುಕೊಂಡ ಕೆಲವು ನಿರ್ಧಾರಗಳು ಅನೇಕ ಕೆಂಗಣ್ಣಿಗೆ ಗುರಿಯಾಯಿತು. ಇದರ ಪರಿಣಾಮ ಈ ವಾರದ ಕಳಪೆ ಪಟ್ಟ ಪಡೆದು ಜೈಲಿಗೆ ಹೋದರು. ಬಿಗ್‌ ಬಾಸ್‌ ನೀಡಿದ್ದ ಕೆಲವು ಟಾಸ್ಕ್‌ಗಳ ಉಸ್ತುವಾರಿಯಾಗಿದ್ದ ಚೈತ್ರಾ ಕುಂದಾಪುರ ತಂಡಗಳ ನಡುವೆ ಪಕ್ಷಪಾತಿ ನೀತಿ ಅನುಸರಿಸಿದರು ಎಂದು ಹೇಳಿರುವ ಮನೆಯ ಇತರ ಸ್ಪರ್ಧಿಗಳು ಈ ವಾರದ ಕಳಪೆ ಪಟ್ಟವನ್ನು ಚೈತ್ರಾ ಅವರಿಗೆ ನೀಡಿದ್ದಾರೆ. ಚೈತ್ರಾ ವಿಚಾರವಾಗಿ ಇಂದು ಸುದೀಪ್ ಕೂಡ ಮಾತನಾಡಲಿದ್ದಾರೆ.

ಉಸ್ತುವಾರಿಗಳು ಜವಾಬ್ದಾರಿಗಳನ್ನು ಮರೆತು ಆಟದ ದಾರಿಯನ್ನು ತಪ್ಪುಸುತ್ತಿದ್ದಾರೆ. ಮಾತಿನ ಮಿತಿಗಳು ಮಿರುತ್ತಾ ಹೋಗುತ್ತಿವೆ ಖಡಕ್​ ಡೈಲಾಂಗ್​ ಹೊಡೆದು ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಈ ಮೊದಲು ಹೊರಗಿನ ವಿಚಾರಗಳನ್ನು ಎಲ್ಲರ ಎದುರು ಹೇಳಿ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದೀಗ ಉಸ್ತುವಾರಿ ಸರಿಯಾಗಿ ನಿರ್ವಹಿಸದ ಚೈತ್ರಾಗೆ ಸುದೀಪ್ ಕ್ಲಾಸ್‌ ತೆಗೆದುಕೊಳ್ಳಲಿದ್ದಾರೆ.

BBK 11: ಹ್ಯಾಟ್ರಿಕ್ ಕಳಪೆ: ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೊಸ ರೆಕಾರ್ಡ್