ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಕಳೆದ ಭಾನುವಾರ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್ ಆಗಿ ಹೊರಬಂದರು. ಸದ್ಯ ದೊಡ್ಮನೆಯಲ್ಲಿ ಒಂಬತ್ತು ಮಂದಿ ಇದ್ದಾರಷ್ಟೆ. ಈ ವಾರ ಮನೆಯಿಂದ ಯಾರು ಔಟ್ ಆಗಬಹುದು ಎಂಬುದು ಕುತೂಹಲ ಎಲ್ಲರಲ್ಲಿತ್ತು. ಯಾಕೆಂದರೆ ಮನೆಯೊಳಗಿರುವ ಎಲ್ಲ ಸ್ಪರ್ಧಿಗಳು ಸಾಕಷ್ಟು ಬಲಿಷ್ಠರೇ ಆಗಿದ್ದಾರೆ. ಆದರೆ, ಈ ವಾರ ನಾಮಿನೆಷನ್ ಪ್ರಕ್ರಿಯೇ ಆಗಲಿಲ್ಲ.
ಈ ವಾರ ಫ್ಯಾಮಿಲಿ ವೀಕ್ ಆಗಿತ್ತು. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದ್ದು, ಇದಕ್ಕೂ ಮುನ್ನ ಇರುವ 9 ಸ್ಪರ್ಧಿಗಳಿಗೆ ಜೋಶ್ ಬರಲು ಕುಟುಂಬದವರನ್ನು ಮನೆಯೊಳಗೆ ಕರೆಸಲಾಗಿತ್ತು. ಸ್ಪರ್ಧಿಗಳ ಅಮ್ಮಂದಿರು, ಅಪ್ಪಂದಿರು ಮಡದಿ, ಮಕ್ಕಳು ಬಿಗ್ ಬಾಸ್ಗೆ ಬಂದಿದ್ದಾರೆ. ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದರು.
ಎಲ್ಲರಿಗೂ ಈ ವಾರ ತುಂಬಾ ಎಮೋಷನಲ್ ಜೊತೆ ಖುಷಿಯಿಂದ ಕೂಡಿತ್ತು. ಜೊತೆಗೆ ಹೊಸ ವರ್ಷದ ಹರುಷ ಕೂಡ ಇತ್ತು. ಹೀಗಾಗಿ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಇಲ್ಲ. ಈಗಾಗಲೇ ಬಿಬಿಕೆ 11 ನಲ್ಲಿ 2ನೇ ವಾರ, 6ನೇ ವಾರ, 10ನೇ ವಾರ, 12ನೇ ವಾರ ಎಲಿಮಿನೇಷನ್ ಇರಲಿಲ್ಲ. ಈ ವಾರವೂ ಎಲಿಮಿನೇಷನ್ ಕ್ಯಾನ್ಸಲ್ ಆಗಿದೆ. ಹೀಗಾಗಿ ಈ ವಾರ ಯಾವೊಬ್ಬ ಸ್ಪರ್ಧಿಯೂ ಬಿಗ್ ಬಾಸ್ ಮನೆಯಿಂದ ಆಚೆ ಹೋಗುವುದಿಲ್ಲ.
9 ಸ್ಪರ್ಧಿಗಳು ಈ ವಾರ ಸೇಫ್ ಆಗಿದ್ದಾರೆ. ಮುಂದಿನ ವಾರಕ್ಕೆ ಈ 9 ಜನರಲ್ಲಿ ಯಾರು ಬಿಗ್ ಮನೆಯಿಂದ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಆದರೆ, ಇದರಲ್ಲೊಂದು ಟ್ವಿಸ್ಟ್ ಇರುವ ಸಾಧ್ಯತೆ ಇದೆ. ಮುಂದಿನ ವಾರ ಮಿಡ್ ವೀಕ್ ಅಥವಾ ಮಿಡ್ ನೈಟ್ ಎಲಿಮಿನೇಷನ್ ಇರಲಿದೆ ಎನ್ನಲಾಗಿದೆ. ಸೀಸನ್ನಲ್ಲಿ ಒಮ್ಮೆಯಾದರು ಮಿಡ್ ವೀಕ್ ಅಥವಾ ಮಿಡ್ ನೈಟ್ ಎಲಿಮಿನೇಷನ್ ಇರುತ್ತದೆ. ಇದು ಮುಂದಿನ ವಾರವೇ ನಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ.
BBK 11: ಟಿಆರ್ಪಿಯಲ್ಲಿ ಬಿಗ್ ಬಾಸ್ಗೆ ಬಿಗ್ ಶಾಕ್: ದಾಖಲೆ ಸೃಷ್ಟಿಸಿದ ‘ಸರಿಗಮಪ’