ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಹನ್ನೆರಡನೇ ವಾರ ಮುಕ್ತಾಯದ ಹಂತದಲ್ಲಿದೆ. ಟಾಸ್ಕ್ಗಳ ಕಾವು ಏರಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 10 ಮಂದಿ ಇದ್ದಾರೆ. ಕಳೆದ ವಾರ ಮನೆಯಿಂದ ಅಚ್ಚರಿ ಎಂಬಂತೆ, ಫೈನಲ್ ಸ್ಪರ್ಧಿ ಎಂದುಕೊಂಡಿದ್ದ ಶಿಶಿರ್ ಶಾಸ್ತ್ರೀ ಎಲಿಮಿನೇಟ್ ಆಗಿ ಹೊರಬಂದರು. ಉಳಿದಿರುವ ಸ್ಪರ್ಧಿಗಳಲ್ಲಿ ಈ ವಾರ ಮನೆಯಿಂದ ಯಾರು ಔಟ್ ಆಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಈ ವಾರ ಮನೆಯಿಂದ ಹೊರಹೋಗಲು 4 ಮಂದಿ ನಾಮಿನೇಟ್ ಆಗಿದ್ದಾರೆ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಬಹಳ ವಿಭಿನ್ನವಾಗಿ ನಡೆಯಿತು. ಟಾಸ್ಕ್ನಲ್ಲಿ ಗೆದ್ದ ತಂಡ ಎದುರಾಳಿ ತಂಡದವರನ್ನ ನಾಮಿನೇಟ್ ಮಾಡಬೇಕಿತ್ತು. ಎಲ್ಲಾ ಚಟುವಟಿಕೆಗಳು ಗುರುವಾರದ ಸಂಚಿಕೆಯಲ್ಲಿ ಮುಕ್ತಾಯಗೊಂಡು ಕೊನೆಗೆ ತ್ರಿವಿಕ್ರಮ್, ರಜತ್, ಹನುಮಂತ, ಮೋಕ್ಷಿತಾ ನಾಮಿನೇಟ್ ಆದರು.
ಆದರೆ, ಗುರುವಾರ ಸಂಚಿಕೆ ಮುಗಿದು, ಶುಕ್ರವಾರ, ಶನಿವಾರವಾದರೂ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ. ವೀಕ್ಷಕರಿಂದ ಮತಗಳನ್ನ ಪಡೆಯದೆ ಸ್ಪರ್ಧಿಗಳನ್ನ ಬಿಗ್ ಬಾಸ್ ಔಟ್ ಮಾಡುವುದಿಲ್ಲ. ಹೀಗಾಗಿ, ಈ ವಾರ ಬಿಗ್ ಬಾಸ್ ಮನೆಯಿಂದ ಯಾರೂ ಹೊರಬರುವುದಿಲ್ಲ. ಅಂದರೆ ಇದು ನೋ ಎಲಿಮಿನೇಷನ್ ವೀಕ್ ಆಗಿದೆ.
ಈ ವಾರ ಎಲಿಮಿನೇಷನ್ ಇರೋದಿಲ್ಲ ಎಂದು ಮನೆಯಲ್ಲಿರೋ ಸ್ಪರ್ಧಿಗಳಿಗೆ ಗೊತ್ತಿಲ್ಲ. ಹೀಗಾಗಿ 4 ಮಂದಿ ನಾಮಿನೇಷನ್ ಟೆನ್ಷನ್ನಲ್ಲೇ ಇದ್ದಾರೆ. ಕಳೆದ ವಾರ ವೈಯಕ್ತಿಕ ಕಾರಣಗಳಿಂದ ಗೋಲ್ಡ್ ಸುರೇಶ್ ಹೊರಬರಬೇಕಾಯಿತು. ಬಹುಶಃ ಒಂದೇ ವಾರದಲ್ಲಿ ಇಬ್ಬರು ಹೊರಬಂದಿದ್ದಕ್ಕೆ ಈ ವಾರದ ಎಲಿಮಿನೇಷನ್ ಅನ್ನು ಬಿಗ್ ಬಾಸ್ ಕ್ಯಾನ್ಸಲ್ ಮಾಡಿರುವಂತಿದೆ.
ಭವ್ಯಾ ಗೌಡ ಕ್ಯಾಪ್ಟನ್:
13ನೇ ವಾರಕ್ಕೆ ಭವ್ಯಾ ಗೌಡ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ವಿಶೇಷ ಎಂದರೆ ಭವ್ಯಾ ಮನೆಯ ಕ್ಯಾಪ್ಟನ್ ಆಗಿರುವುದು ಇದು ಎರಡನೇ ಬಾರಿ. ಬಿಗ್ ಬಾಸ್ ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ನೀಡುದ್ದರು. ಅದರಲ್ಲಿ ಗೌತಮಿ, ಐಶ್ವರ್ಯಾ, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಧನರಾಜ್ ಆಯ್ಕೆಯಾಗಿದ್ದರು. ಇವರ ಪೈಕಿ ಕೊನೆಯ ಕ್ಷಣದಲ್ಲಿ ಐಶ್ವರ್ಯಾ ಹಾಗೂ ಭವ್ಯಾ ಗೌಡ ಕ್ಯಾಪ್ಟನ್ಸಿ ಓಟಕ್ಕೆ ಸೆಲೆಕ್ಟ್ ಆಗಿದ್ದರು. ಈ ಕತ್ತಲೆ ಬೆಳಕಿನ ಆಟದಲ್ಲಿ ಭವ್ಯಾ ಗೌಡ ಗೆದ್ದು ಮನೆಯ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿದ್ದಾರೆ. ಈ ಮೂಲಕ ಮುಂದಿನ ವಾರದ ನಾಮಿನೇಷನ್ನಿಂದ ಭವ್ಯಾ ಪಾರಾಗಿದ್ದಾರೆ.
BBK 11: ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಪಟ್ಟ ಅಲಂಕರಿಸಿದೆ ಭವ್ಯಾ ಗೌಡ