Wednesday, 14th May 2025

‘ತಾನ್ಹಾಜಿ’ ಅಜಯ್, ‘ಸೂರರೈಪೋಟ್ರು’ ಚಿತ್ರದ ಸೂರ್ಯಗೆ ಶ್ರೇಷ್ಠ ನಟ ಪ್ರಶಸ್ತಿ

ನವದೆಹಲಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದೆ.

ಅಜಯ್ ದೇವಗನ್ ಗೆ ‘ತಾನ್ಹಾಜಿ’ ಚಿತ್ರದ ಅಮೋಘ ಅಭಿನಯಕ್ಕಾಗಿ ಮತ್ತು ‘ಸೂರರೈಪೋಟ್ರು’ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಟ ಸೂರ್ಯಗೆ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ.

ನಟ ಸೂರ್ಯ ಅಭಿನಯದ ಸೂರರೈಪೋಟ್ರು ಚಿತ್ರ ಐದು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಉತ್ತಮ ನಟ (ಸೂರ್ಯ-ಸೂರರೈಪೋಟ್ರು), ಅತ್ಯುತ್ತಮ ಚಲನಚಿತ್ರ-ಸೂರರೈಪೋಟ್ರು, ಅತ್ಯುತ್ತಮ ಹಿನ್ನಲೆ ಸಂಗೀತ-(ಜಿವಿ ಪ್ರಕಾಶ್ ಕುಮಾರ್) (ಚಿತ್ರ- ಸೂರರೈಪೋಟ್ರು), ಅತ್ಯುತ್ತಮ ನಟಿ- ಅಪರ್ಣಾ ಬಾಲಮುರಳಿ (ಚಿತ್ರ-ಸೂರರೈಪೋಟ್ರು), ಅತ್ಯುತ್ತಮ ಚಿತ್ರಕಥೆ-ಶಾಲಿನಿ ಉಷಾ ನಾಯರ್ ಕೊಂಗರ (ಚಿತ್ರ-ಸೂರರೈಪೋಟ್ರು) ವಿಭಾಗಗಳಲ್ಲಿ ಚಿತ್ರ ಪ್ರಶಸ್ತಿ ಗೆದ್ದಿದೆ.