Wednesday, 14th May 2025

ಇಂದು ನಾದಸರಸ್ವತಿ ಲತಾ ಅವರ ಮೊದಲ ಪುಣ್ಯಸ್ಮರಣೆ

ಮುಂಬೈ: ಭಾರತ-ಚೀನಾ ಯುದ್ಧದಲ್ಲಿ ಮಡಿದ ಯೋಧರ ಗೌರವಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತದ ಕೋಗಿಲೆ, ಗಾನ ಸರಸ್ವತಿ ಲತಾ ಮಂಗೇಶ್ಕರ್ (1963 ಜನವರಿ 27 ರಲ್ಲಿ) ‘ಏ ಮೇರೆ ವತನ್ ಕೆ ಲೋಗೋ..’ ಗೀತೆ ಹಾಡಿದಾಗ ಅಲ್ಲಿ ನೆರೆದಿದ್ದ ಸಮಸ್ತರ ಕಣ್ಣಲ್ಲಿ ಭಾವಧಾರೆ ಕೋಡಿಯಾಗಿ ಹರಿದಿತ್ತು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅಕ್ಷರಶಃ ಅತ್ತುಬಿಟ್ಟರು.

ಪ್ರದೀಪ್ ಬರೆದ, ಸಿ.ರಾಮಚಂದ್ರ ಸಂಗೀತ ಸಂಯೋಜಿಸಿದ್ದ ‘ಏ ಮೇರೆ ವತನ್ ಕೆ ಲೋಗೋ..’ ಗೀತೆ ಲತಾ ಅವರ ಮಾಧುರ್ಯದ ಕಂಠದಲ್ಲಿ ದೇಶದ ನಾಡಿ ಮಿಡಿದಿತ್ತು. ಗಾಯನ ಮುಗಿದ ಬಳಿಕ ವೇದಿಕೆಯಿಂದ ನಿರ್ಗಮಿಸುತ್ತಿದ್ದ ಲತಾ ಅವರನ್ನು ನಿರ್ವಪಕ ಮೆಹಬೂಬ್ ಖಾನ್, ‘ಒಂದು ನಿಮಿಷ ಬನ್ನಿ’ ಎಂದು ಸೀದಾ ಪಂಡಿತ್ ನೆಹರೂ ಬಳಿ ಕರೆ ದೊಯ್ದರು.

ನೆಹರು ಗದ್ಗದಿತರಾಗಿದ್ದರು. ಕಣ್ಣು ತುಂಬಿದ್ದವು. ‘ಎಂಥ ನಿರಭಿಮಾನಿಯ ಹೃದಯದಲ್ಲೂ ದೇಶಪ್ರೇಮ ಬಡಿದೆಬ್ಬಿಸುವ ಗೀತೆ. ನೀವದನ್ನು ತುಂಬಾ ಸುಂದರವಾಗಿ ಹಾಡಿದಿರಿ’ ಎಂದರು. ‘ನೆಹರು ಹೊಗಳಿದ್ದು ತಮ್ಮ ಬದುಕಿನ ಅತ್ಯಂತ ಶ್ರೇಷ್ಠ ಗಳಿಗೆ’ ಎಂದು ಲತಾಜಿ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿ ದ್ದರು.

1942ರಿಂದ ಹಾಡಲು ಆರಂಭಿಸಿದ ‘ಭಾರತ ರತ್ನ’ ಲತಾ ಮಂಗೇಶ್ಕರ್ ನಿರಂತರವಾಗಿ ಏಳು ದಶಕ ಕಾಲ ಸಂಗೀತದ ಗಂಗಾವತ ರಣದ ಮೂಲಕ ಸಹೃದಯಿಗಳನ್ನು ಪಾವನಗೊಳಿಸಿದವರು. 2022 ಫೆ. 6ರಂದು ತಮ್ಮ 92ನೇ ವಯಸ್ಸಿನಲ್ಲಿ ನಾದಸರಸ್ವತಿ ಯಲ್ಲಿ ಲೀನರಾದ ಲತಾ ಅವರ ಮೊದಲ ಪುಣ್ಯಸ್ಮರಣೆ ಸೋಮವಾರ.