ಹೈದರಾಬಾದ್ : ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಇದೀಗ ಪುಷ್ಪಾ 2 ವೀಕ್ಷಣೆ ಮಾಡಿದ್ದ ಶಕ್ತಿಮಾನ್ (Shaktimaan) ಹಾಗೂ ಮಹಾಭಾರತದ ಭೀಷ್ಮನ ಪಾತ್ರದಲ್ಲಿ ಜನಪ್ರಿಯರಾಗಿದ್ದ ಮುಕೇಶ್ ಖನ್ನಾ (Mukesh Khanna) ಅಲ್ಲು ಅರ್ಜುನ್ (Allu Arjun) ಅವರು ಶಕ್ತಿಮಾನ್ ಪಾತ್ರದಲ್ಲಿ ನಟಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಯುಟ್ಯೂಬ್ ಖಾತೆಯಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಪುಷ್ಪ 2 ಸಿನಿಮಾದ ನೋಡಿದ ಖನ್ನಾ ಇಡೀ ಚಿತ್ರ ತಂಡವನ್ನು ಹೊಗಳಿದ್ದಾರೆ. ಸಿನಿಮಾದಲ್ಲಿನ ಆ್ಯಕ್ಷನ್ , ಕಾಡಿಮಿ ಹಾಗೂ ಕ್ಯಾಮರಾ ಸಂಯೋಜನೆ ಉತ್ತಮವಾಗಿದೆ ಎಂದು ಹೇಳಿದ್ದಾರೆ. ನಂತರ ಅಲ್ಲು ಅರ್ಜುನ್ ನಟನೆಯ ಬಗ್ಗೆ ಮಾತನಾಡಿದ ಅವರು , ಅಲ್ಲು ಅರ್ಜುನ್ ಒಬ್ಬ ಉತ್ತಮ ನಟ. ಯಾವುದೇ ಪಾತ್ರವನ್ನಾಗಲಿ ಆತ ನಿರ್ವಹಿಸುತ್ತಾನೆ. ನನ್ನ ಪ್ರಕಾರ ಅವರು ಶಕ್ತಿಮಾನ್ ನಂತಹ ಸಿನಿಮಾಗಳಲ್ಲಿ ನಟಿಸಬೇಕು ಎಂದಿದ್ದಾರೆ. ಅವರಿಗಿರುವ ಎತ್ತರ, ಲುಕ್ ಎಲ್ಲವೂ ಶಕ್ತಿಮಾನ್ ಪಾತ್ರಕ್ಕೆ ಹೋಲುತ್ತದೆ. ಪುಷ್ಪಾದಲ್ಲಿ ಅವರನ್ನು ಖಳನಟನ ರೀತಿಯಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರೆ. ಅವರು ‘ಐಕಾನ್ ಸ್ಟಾರ್’ ಅನ್ನು ಪರದೆಯ ಮೇಲೆ ನೋಡುತ್ತಿರುವುದು ಇದೇ ಮೊದಲು. ಅವರು, ನಾನು ಹೆಚ್ಚು ಅಲ್ಲು ಅರ್ಜುನ್ ಚಿತ್ರಗಳನ್ನು ನೋಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ನಂತರ ಸಿನಿಮಾ ಬಗ್ಗೆ ಮಾತನಾಡಿದ ಅವರು ಸಿನಿಮಾ ಉತ್ತಮವಾಗಿದೆ. ಆದರೆ ಚಲನಚಿತ್ರ ನಿರ್ದೇಶಕರು ಕಳ್ಳಸಾಗಣಿಕೆಯನ್ನು ಉತ್ಪ್ರೇಕ್ಷೆ ಮಾಡಿ ತೋರಿಸಿದ್ದಾರೆ ಎಂದು ಟೀಕಿಸಿದರು. ಚಿತ್ರದಲ್ಲಿ ಶ್ರೀಗಂಧದ ಕಳ್ಳ ಸಾಗಾಣಿಕೆಯನ್ನು ತೋರಿಸಲಾಗಿದೆ ಇದು ಪ್ರೇಕ್ಷರರ ಮೇಲೆ ಪರಿಣಾಮ ಬೀರುತ್ತದೆ . ಕೇವಲ ಹಿಟ್ ಗಳಿಸುವುದಕ್ಕಾಗಿ ಇಂತಹ ಚಿತ್ರಗಳನ್ನು ಮಾಡಬೇಡಿ ಎಂದು ದಕ್ಷಿಣದ ಚಲನಚಿತ್ರ ನಿರ್ಮಾಪಕರಿಗೆ ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಬಾಲಿವುಡ್ ಬಗ್ಗೆ ಮುಖೇಶ್ ಟೀಕೆ
ವೀಡಿಯೊದಲ್ಲಿ, ಮುಖೇಶ್ ದಕ್ಷಿಣ ಭಾರತ ಮತ್ತು ಬಾಲಿವುಡ್ ನಿರ್ಮಾಣದ ಚಲನಚಿತ್ರ ನಡುವಿನ ವ್ಯತ್ಯಾಸವನ್ನು ಹೈಲೈಟ್ ಮಾಡಿದ್ದಾರೆ. ನಾನು ಬಾಲಿವುಡ್ ಮಂದಿಗೆ ದಕ್ಷಿಣ ಭಾರತದ ಚಿತ್ರಗಳನ್ನು ನೋಡಿ ಕಲಿಯಲು ಹೇಳುತ್ತೇನೆ. ದಕ್ಷಿಣ ಭಾರತೀಯರು ನಮಗಿಂತ ಹೆಚ್ಚು ಹಣವನ್ನು ಹೊಂದಿದ್ದಾರೆಂದು ನೀವು ಹೇಳುತ್ತೀರಿ, ಆದರೆ ಅದು ನಿಜವಲ್ಲ. ದಕ್ಷಿಣದ ಎಲ್ಲಾ ಚಿತ್ರಗಳು ಹೈ ಬಜೆಟ್ ಚಿತ್ರ ಆಗಿರುವುದಿಲ್ಲ. ಅವರು ಯೋಚಿಸಿ ಕಥೆಯನ್ನು ಜನರ ಮುಂದಿಡುತ್ತಾರೆ.
ಆದರೆ ಬಾಲಿವುಡ್‌ನಲ್ಲಿ 150 ಕೋಟಿ ರೂ. ಬಜೆಟ್ ಸಿನಿಮಾದಲ್ಲಿ 60 ಕೋಟಿ ರೂ. ನಾಯಕನಿಗೆ ಕೊಡುತ್ತಾರೆ. ಸಿನಿಮಾ ಓಡದಿದ್ದಾಗ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಸತತ ಮೂರು ಚಿತ್ರ ಪ್ಲಾಫ್ ಆದರೂ ಇಲ್ಲಿನ ಹಿರೋಗಳು ತಮ್ಮ ಸಂಭಾವನೆಯನ್ನು ಇಳಿಸುವುದಿಲ್ಲ. ಹಿರೋಗಳಿಗೆ ನೀಡುವ ಅರ್ಧದಷ್ಟು ಹಣವನನ್ನು ಬರಹಗಾರರಿಗೆ ನೀಡಿ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Allu Arjun: ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್