Saturday, 10th May 2025

BBK 11: ಮೋಕ್ಷಿತಾ ಪೈ ಅತಿರೇಕದ ವರ್ತನೆ: ಮುಗ್ಧ ಹನುಮಂತನ ಮೇಲೆಯೂ ಸಿಟ್ಟು

Hanumantha and Mokshitha

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಐದನೇ ವಾರಕ್ಕೆ ಕಾಲಿಟ್ಟಿದೆ. ನಾಲ್ಕನೇ ವಾರ ಹಂಸ ಪ್ರತಾತ್ ಎಲಿಮಿನೇಟ್ ಆಗಿ ಮನೆಯಿಂದ ಹೊರಹೋದರು. ಇವರ ಜೊತೆ ಡೇಂಝರ್ ಝೋನ್​ನಲ್ಲಿದ್ದ ಮೋಕ್ಷಿತಾ ಪೈ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಸೇವ್ ಆಗಿ ಮನೆಯೊಳಗೆ ಕಾಲಿಟ್ಟಿದ್ದೆ ತಡ ಮೋಕ್ಷಿತಾ ಅವರು ತ್ರಿವಿಕ್ರಮ್ ಮೇಲೆ ರೇಗಾಡಿದರು. ಇದಾದ ಬಳಿಕವೂ ತಣ್ಣಗಾಗದ ಮೋಕ್ಷಿತಾ ಕೋಪ ಮುಗ್ದ ಹನುಮಂತನ ಮೇಲೂ ತೋರಿಸಿದ್ದಾರೆ.

ಹುನುಮಂತ ಬಿಗ್ ಬಾಸ್ ಮನೆಗೆ ಕಾಲಿಟ್ಟು ಒಂದು ವಾರ ಕಳೆದಿದೆ. ಸೈಲೆಂಟ್ ಆಗಿದ್ದರೂ ಮನೆಯ ಎಲ್ಲ ಸದಸ್ಯರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಧನರಾಜ್ ಆಚಾರ್ ಜೊತೆ ಹೆಚ್ಚು ಆತ್ಮೀಯರಾಗಿರುವ ಇವರು ಹಾಡು ಹಾಡುತ್ತಾ ತನ್ನ ಪಾಡಿಗೆ ಇದ್ದವರು. ಇದೀಗ ಮೋಕ್ಷಿತಾ ಅವರು ಹನುಮಂತನ ಮೇಲೆ ರೇಗಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ತಕ್ಯವಾಗುತ್ತಿದೆ.

ಏನಿದು ಘಟನೆ?:

ಸೋಮವಾರದ ಎಪಿಸೋಡ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹಂಸ ಪ್ರತಾಪ್ ಹೊರಹೋದರು. ಇವರ ನಿರ್ಗಮನದ ಬಳಿಕ ಮನೆ ಮತ್ತೊಮ್ಮೆ ರಣರಂಗವಾಯಿತು. ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ನಡುವೆ ದೊಡ್ಡ ಮಾತಿನ ಚಕಮಕಿ ನಡೆಯಿತು. ಮೋಕ್ಷಿತಾ ಪೈ 10 ವಾರ ಇರ್ತಾರೆ ಅಷ್ಟೇ ಎಂದು ಉಗ್ರಂ ಮಂಜು ಬಳಿ ತ್ರಿವಿಕ್ರಮ್ ಹೇಳಿದ್ದರು. ಅದನ್ನ ಮೋಕ್ಷಿತಾ ಪೈ ಹಾಗೂ ಗೌತಮಿ ಜಾಧವ್ ಬಳಿ ಮಂಜು ಹೇಳಿಬಿಟ್ಟಿದ್ದಾರೆ. ಇಲ್ಲಿಂದ ಮೋಕ್ಷಿತಾ ಅವರಿಗೆ ಕೋಪ ಏರಿಕೊಂಡಿದೆ.

ಇದು ಮುಗ್ಧ ಹನುಮಂತನಿಗೂ ನಾಟುವಂತಾಯಿತು. ಮೋಕ್ಷಿತಾ ಪೈ, ಗೌತಮಿ ಜಾಧವ್ ಹಾಗೂ ಮಂಜು ಮಾತನಾಡುತ್ತಿದ್ದ ಜಾಗಕ್ಕೆ ಹನುಮಂತ ಅವರು ಅಚಾನಕ್ಕಾಗಿ ಬಂದಿದ್ದಾರೆ. ಆಗ ಮೋಕ್ಷಿತಾ ಪೈ, ಹನುಮಂತು ಮಾತಾಡ್ತಾ ಇದ್ದೀವಿ. ಆಮೇಲೆ ಬನ್ನಿ ಎಂದು ರೇಗಾಡಿದ್ದಾರೆ. ಇದಕ್ಕೆ ಗೌತಮಿ ಅವರು ಪಾಪ ಅವನು, ನಾನೇ ಹೆದರಿಬಿಟ್ಟೆ. ಜನರಲ್ ಆಗಿ ಬರ್ತಿದ್ರು ಅನ್ಸುತ್ತೆ. ಅವರಿಗೆ ಗೊತ್ತಾಗಿರಲ್ಲ ಎಂದರು. ಇದಕ್ಕೆ ಮೋಕ್ಷಿತಾ ಅವರು ಇರೋದನ್ನ ಹೇಳಿದ್ದೀನಿ. ಒಳಗಡೆಯಿಂದ ಕಳ್ಸಿರ್ತಾರೆ ಎಂದು ಹೇಳಿದ್ದಾರೆ. ಮೋಕ್ಷಿತಾ ಅವರ ಈ ವರ್ತನೆಗೆ ಅನೇಕರು ಬೇಸರಗೊಂಡಿದ್ದಾರೆ.

BBK 11: ಕ್ಯಾಪ್ಟನ್ ಆಗೋಕೆ ಅರ್ಹತೆನೇ ಇಲ್ಲ: ತ್ರಿವಿಕ್ರಮ್​ ಅನ್ನು ಬೆಂಬಿಡದೆ ಕಾಡುತ್ತಿರುವ ಮೋಕ್ಷಿತಾ