Tuesday, 13th May 2025

ರೆಬಲ್‌ಸ್ಟಾರ್‌ ಅಂಬರೀಶ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಚಿವ ಸೋಮಶೇಖರ್

ಬೆಂಗಳೂರು: ನಟ, ರಾಜಕಾರಣಿ ರೆಬಲ್‌ಸ್ಟಾರ್‌ ಅಂಬರೀಶ್‌ ನಿಧನರಾಗಿ ಇಂದಿಗೆ ಎರಡು ವರ್ಷವಾದ ಹಿನ್ನಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಅಂಬರೀಷ್ ಅವರ ನಿವಾಸಕ್ಕೆ ತೆರಳಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ದಿ. ಅಂಬರೀಶ್‌ ಅವರ ಪತ್ನಿ, ಮಂಡ್ಯ ಸಂಸದ ಸುಮಲತಾ ಅಂಬರೀಷ್ ಇದ್ದರು.

ಅಂಬರೀಶ್‌ ಪುಣ್ಯತಿಥಿ ಪ್ರಯುಕ್ತ ಒಂದಷ್ಟು ಸಾಮಾಜಿಕ ಕಾರ್ಯಗಳಿಗೆ ಅಂಬರೀಶ್‌ ಕುಟುಂಬ ವರ್ಗ ಮತ್ತು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಸುಮಲತಾ ತಮ್ಮ ಸಂಸದರ ನಿಧಿಯಿಂದ ಹತ್ತು ಮಂದಿ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಇಂದು ವಿತರಿಸಲಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸುಮಲತಾ ಅಂಬರೀಶ್‌, “ರೆಬಲ್‌ಸ್ಟಾರ್‌ ಡಾ. ಅಂಬರೀಶ್‌ ನಮ್ಮನ್ನು ಅಗಲಿ ಎರಡು ವರ್ಷ. ದೈಹಿಕವಾಗಿ ಅವರು ನಮ್ಮಿಂದ ದೂರವಾಗಿದ್ದರೂ ನಾನಾ ಕೆಲಸಗಳಿಂದಾಗಿ ಅವರ ಹೆಸರು ನಮ್ಮೆಲ್ಲರ ಹೃದಯದಲ್ಲಿ ಯಾವಾಗಲೂ ಶಾಶ್ವತ. ಅವರಿಂದ ಸಹಾಯ ಪಡೆದ ಕೈಗಳು ಸಾವಿರಾರು. ಸಿನಿಮಾ ರಂಗ, ರಾಜಕೀಯ ಕ್ಷೇತ್ರದ ಆಚೆಯೂ ಅವರನ್ನು ಜನರು ಅಷ್ಟೊಂದು ಪ್ರೀತಿಸುತ್ತಿದ್ದರು ಅನ್ನುವುದಕ್ಕೆ ಕಾರಣ, ಜನರಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ ಎಂದಿದ್ದಾರೆ

Leave a Reply

Your email address will not be published. Required fields are marked *