ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅರ್ಧಶತಕ ಪೂರೈಸಿ ಮುನ್ನುಗ್ಗುತ್ತಿದೆ. ಪ್ರತೀ ವೀಕೆಂಟ್ ಕಿಚ್ಚ ಸುದೀಪ್ ಬಂದು ವಾರದ ಕತೆಯನ್ನು ಮಾತನಾಡುತ್ತಾರೆ. ಆದರೆ, ಕಳೆದ ಕೆಲವು ವಾರಗಳಿಂದ ವಾರದ ಕತೆ ಕಿಚ್ಚ ಜೊತೆ ಹಾಗೂ ಭಾನುವಾರ ನಡೆಯುವ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ಗೆ ದೊಡ್ಡ ಮಟ್ಟದ ಟಿಆರ್ಪಿ ಇರಲಿಲ್ಲ. ಆದರೀಗ ಬಿಗ್ ಬಾಸ್ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಬಿಗ್ ಬಾಸ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಿಚ್ಚನ ಆಗಮನದ ದಿನ ಟಿಆರ್ಪಿ ಎರಡಂಕಿ ತಲುಪಿದೆ.
ಬಿಗ್ ಬಾಸ್ಗೆ ಈ ಹಿಂದೆ 47ನೇ ವಾರದ ಟಿಆರ್ಪಿ ಕೊಂಚ ಡೌನ್ ಆಗಿತ್ತು. ಆ ವಾರದ ವೀಕೆಂಡ್ ಕಿಚ್ಚ ಸುದೀಪ್ ಚೈತ್ರಾ ಕುಂದಾಪುರ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಅವರು ಆಸ್ಪತ್ರೆಗೆ ಹೋಗಿ ಬಂದ ಬಳಿಕ ಹೊರಗಿನ ವಿಚಾರ ಹಂಚಿಕೊಂಡಿದ್ದರು. ಆ ವಾರದ ದಿನಗಳಲ್ಲಿ 8 (ನಗರ ಭಾಗ), ಶನಿವಾರ 9.5 (ನಗರ ಭಾಗ) ಹಾಗೂ ಭಾನುವಾರ 10.0 (ನಗರ ಭಾಗ) ಸಿಕ್ಕಿತ್ತು.
ಇದೀಗ 48ನೇ ವಾರ ಯಾವಾ ಸೂಪರ್ ಹಿಟ್ ಧಾರಾವಾಹಿಗಳಿಗೂ ಸಿಗದಷ್ಟು ಟಿಆರ್ಪಿ ಬಿಗ್ ಬಾಸ್ಗೆ ಸಿಕ್ಕಿದೆ. ವಾರದ ದಿನಗಳಲ್ಲಿ ನಗರ ಭಾಗದಲ್ಲಿ 8.2 ಟಿಆರ್ಪಿ ಸಿಕ್ಕರೆ, ಶನಿವಾರ ಬರೋಬ್ಬರಿ 9.9 ಟಿಆರ್ಪಿ ದೊರೆತಿದೆ. ಭಾನುವಾರ 10.3 ಟಿಆರ್ಪಿ ದೊರೆತಿದೆ. ರಜತ್ ಅವರು ಅವಾಚ್ಯ ಶಬ್ದ ಬಳಕೆ ಮಾಡಿ ಪಾಠ ಹೇಳಿಸಿಕೊಂಡ ವಾರದ ಟಿಆರ್ಪಿ ಇದಾಗಿದೆ. ಇದರಿಂದ ಸುದೀಪ್ ಅವರ ನಿರೂಪಣೆಗೆ ಇರುವ ಗತ್ತು ಏನು ಎಂಬುದು ಸಾಬೀತಾಗಿದೆ.
ಇನ್ನು ಧಾರಾವಾಹಿ ವಿಚಾರಕ್ಕೆ ಬರೋದಾದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಮತ್ತದೆ ಬಿಗ್ ಶಾಕ್ ಆಗಿದೆ. ಎರಡನೇ ಸ್ಥಾನಕ್ಕೆ ಕುಸಿದಿದ್ದ ಈ ಧಾರಾವಾಯಿ ಮೇಲೆದ್ದಿಲ್ಲ. ಸಮಯ ಬದಲಾವಣೆಯ ನಂತರ ಟಿಆರ್ಪಿ ಕುಸಿಯುತ್ತಾ ಬರುತ್ತಿದೆ. ಲಕ್ಷ್ಮೀ ನಿವಾಸ ಧಾರಾವಾಹಿ ಮೊದಲ ಸ್ಥಾನದಲ್ಲಿ ಭದ್ರವಾಗಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುವ ಅಮೃತಧಾರೆ ಸೀರಿಯಲ್ ಸಹ ವೀಕ್ಷಕರನ್ನು ಸೆಳೆಯುತ್ತಿದೆ. ಈ ಸೀರಿಯಲ್ ಈ ಮೂರನೇ ಸ್ಥಾನದಲ್ಲಿದೆ.
ಅಣ್ಣಯ್ಯ ಧಾರಾವಾಹಿ ಕೂಡ ಮೂರನೇ ಸ್ಥಾನದಲ್ಲಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಸೀರಿಯಲ್ ನಾಲ್ಕನೇ ಸ್ಥಾನದಲ್ಲಿದೆ. ಶ್ರಾವಣಿ ಸುಬ್ರಮಣ್ಯ ಐದನೇ ಸ್ಥಾನದಲ್ಲಿದೆ. ರಾಮಾಚಾರಿ ಹಾಗೂ ಸೀತಾ ರಾಮ ಸೀರಿಯಲ್ ಇನ್ನೂ ಮೇಲೇಳಲು ಹರಸಾಹಸ ಪಡುತ್ತಿದೆ.
BBK 11: ಸುದೀಪ್ ಮಾತನ್ನೇ ಮೀರಿದ ಭವ್ಯಾ ಗೌಡ: ವೀಕೆಂಡ್ನಲ್ಲಿ ಕಿಚ್ಚನ ಕ್ಲಾಸ್ ಖಚಿತ