ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವೀಕೆಂಡ್ನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿತ್ತು. ಮೊದಲ ಎರಡು ದಿನ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದರು. ಆದರೆ, ಬುಧವಾರ ಬಿಗ್ ಬಾಸ್ ಇದರಲ್ಲೊಂದು ಟ್ವಿಸ್ಟ್ ಕೊಟ್ಟರು. ಮನೆಗೆ ಯುವರಾಣಿಯಾಗಿ ಮೋಕ್ಷಿತಾ ಪೈ ಬಂದು ಮನೆ ಎರಡು ಬಣವಾಯಿತು.
ಯುವರಾಣಿಯ ಆಗಮನದಿಂದ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಜೊತೆಗೆ ಅನೇಕ ಜಗಳಗಳು ಕೂಡ ನಡೆದಿವೆ. ರಜತ್ ಹಾಗೂ ಮಂಜು ಬಾಯಿಂದ ಕೆಲ ಪದಕ ಬಳಕೆ ಕೂಡ ಆಗಿವೆ. ಇದೀಗ ವಾರಾಂತ್ಯ ಬಂದಿದ್ದು ಸುದೀಪ್ ಬಂದಿದ್ದಾರೆ. ಈ ವಾರದ ಪಂಚಾಯಿತಿಯಲ್ಲಿ, ರಾಜ, ರಾಣಿಯರ ಆಡಳಿತದ ವಿಶ್ಲೇಷಣೆ ಮಾಡಿದ್ದಾರೆ. ಬಿಗ್ ಬಾಸ್ ಸಾಮ್ರಾಜ್ಯದ ತಪ್ಪು, ಒಪ್ಪುಗಳ ಕಿಚ್ಚ ಮಾತನಾಡಿದ್ದಾರೆ.
ಮಂಜು ಮತ್ತು ಮೋಕ್ಷಿತಾ ಅವರ ಹೆಸರನ್ನು ತೆಗೆದುಕೊಂಡು ಪರ್ಸನಲ್, ಪರ್ಸನಲ್, ಪರ್ಸನಲ್ ಎಂದು ಸುದೀಪ್ ಅಸಮಧಾನಗೊಂಡಿದ್ದಾರೆ. ಟಾಸ್ಕ್ನಲ್ಲಿ, ವೈಯಕ್ತಿಕ ಮನಸ್ತಾಪಗಳನ್ನು ತರುವ ಅಗತ್ಯವಿತ್ತೇ ಎಂಬಂತಿತ್ತು ಕಿಚ್ಚನ ಈ ಮಾತು. ಅದಕ್ಕೆ ಮಂಜಣ್ಣನ ಮಾತುಗಳು ನನಗೆ ತುಂಬಾನೇ ಹರ್ಟ್ ಆಗಿದೆ ಸರ್, ಹರ್ಟ್ ಆದ್ಮೇಲೆನೇ ನಾನು ಆ ರೀತಿ ರಿಯಾಕ್ಟ್ ಮಾಡಲು ಶುರು ಮಾಡಿದೆ ಎಂದು ಮೋಕ್ಷಿತಾ ತಿಳಿಸಿದ್ದಾರೆ.
ಆಟಕ್ಕೆ ಅಡ್ಡಿ ಮಾಡಿದ್ವಾ ಸಂಬಂಧಗಳು?
— Colors Kannada (@ColorsKannada) November 30, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/VbivAWq6d3
ಯುವರಾಣಿ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು ಎಂದು ಆದೇಶಿಸಿದಾಗ ಗೌತಮಿ ಅವರು ನಿರಾಕರಿಸಿದ್ದೇಕೆ ಎಂಬ ಪ್ರಶ್ನೆಯನ್ನು ಸುದೀಪ್ ಎತ್ತಿದ್ದಾರೆ. ಮಹಾರಾಜ ಆಗಿ ಬೇರೆಯವರಿಗೆ ಆದೇಶ ಕೊಟ್ಟಂತೆ ತಾವು ಕೊಡಬೇಕಿತ್ತು, ಹೇಳ್ದಷ್ಟು ಮಾಡಿ ಅಂತಾ (ಮಂಜು ಬಗ್ಗೆ ಮಾತನಾಡಿರೋದು), ಪ್ರಜೆ ಮಾತಾಡ್ತಿದ್ರೋ ಅಥವಾ ಗೌತಮಿ ಮಾತನಾಡುತ್ತಿದ್ರೋ?. ಸಂಬಂಧ, ಸಂಬಂಧ, ಸಂಬಂಧ ಅಂತೀರಾ. ಆಮೇಲೆ ನನಗೆ ಮೋಸ ಆಯ್ತು, ನಂಬಿಕೆ ದ್ರೋಹ ಆಯ್ತು ಅಂತೀರ. ಯಾರ್ ಹೇಳಿದ್ದು ನಂಬಿ ಅಂತಾ ಎಂದು ಕಿಚ್ಚ ಕೋಪಗೊಂಡಿದ್ದಾರೆ.
BBK 11: ರಾಜಕುಟುಂಬದ ಕತೆಯ ಸಾರಾಂಶ ಹೇಳಲು ಬಂದ ಸುದೀಪ್: ಯಾರಿಗೆ ತೆಗೋತಾರೆ ಕ್ಲಾಸ್?