Sunday, 11th May 2025

ಆಸ್ಕರ್ ಪ್ರಶಸ್ತಿ ರೇಸ್‌: ʼಕಾಂತಾರʼ ಕ್ಕೆ ಇನ್ನೊಂದು ಗರಿ

ಬೆಂಗಳೂರು: ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿರುವ ಕನ್ನಡದ ‌ಮೊದಲ ಸಿನಿಮಾ ʼಕಾಂತಾರʼ ತನ್ನ ಮುಕುಟಕ್ಕೆ ಇನ್ನೊಂದು ಗರಿ ಸಿಕ್ಕಿಸಿಕೊಂಡಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ವಿಶ್ವದ ಅತ್ಯಂತ ಪ್ರತಿಷ್ಠಿತ ಪುರಸ್ಕಾರ ಆಸ್ಕರ್‌ನ ʼಅತ್ಯುತ್ತಮ ಚಿತ್ರʼ ಹಾಗೂ ʼಅತ್ಯುತ್ತಮ ನಟʼ ವಿಭಾಗಗಳಲ್ಲಿ ಸ್ಪರ್ಧೆಯ ಅರ್ಹತೆ ಪಡೆದಿದೆ.

301 ಸಿನಿಮಾಗಳ ಪಟ್ಟಿಯಲ್ಲಿ ಕಾಂತಾರ ಚಿತ್ರಕ್ಕೂ ಅರ್ಹತೆ ದೊರೆತಿದೆ. ಕಳೆದ ವರ್ಷದ ಭಾರತೀಯ ಚಿತ್ರಗಳಲ್ಲೆಲ್ಲ ಕಾಂತಾರ ಅತಿ ಹೆಚ್ಚು ಗಳಿಕೆಯ ಹಾಗೂ ಅತ್ಯುತ್ತಮ ಚಿತ್ರ ಎಂದು ಕರೆಸಿಕೊಂಡಿತ್ತು. ರಿಷಬ್‌ ಶೆಟ್ಟಿ ಅವರ ನಟನೆಗೂ ಅತ್ಯುತ್ತಮ ಎಂಬ ಗೌರವ ವಿಮರ್ಶಕರಿಂದ ಸಂದಿತ್ತು.

ಜನವರಿ 24ರಂದು ಆಸ್ಕರ್ ವಿಜೇತ ಚಿತ್ರಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಕಾಂತಾರ ಜೊತೆ RRR, ಗಂಗೂಬಾಯಿ ಕಾಥಿಯಾ ವಾಡಿ, ಕಾಶ್ಮೀರಿ ಫೈಲ್ಸ್ ಕೂಡ ಸ್ಪರ್ಧಿಸಲಿವೆ. ನಾಳೆಯಿಂದ ಓಟಿಂಗ್ ಪ್ರಕ್ರಿಯೆ ಶುರುವಾಗಲಿದ್ದು, 17ರವರೆಗೂ ಓಟಿಂಗ್ ನಡೆಯಲಿದೆ. ಆಸ್ಕರ್ ಜೂರಿಯ 350 ಸದಸ್ಯರಿಂದ ಓಟಿಂಗ್ ನಡೆಯಲಿದೆ.

ಈ ಬಗ್ಗೆ ಹೊಂಬಾಳೆ ಫಿಲಂಸ್‌ನಿಂದ ಅಧಿಕೃತ ಘೋಷಣೆ ಬಂದಿದೆ. ಚಿತ್ರರಸಿಕರ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದೆ.

 
Read E-Paper click here