Wednesday, 14th May 2025

ಮುಂಬೈ ಪೊಲೀಸರ ವಿಚಾರಣೆಗೆ ಹಾಜರಾದ ’ಕ್ವೀನ್‌’

Kangana Ranaut

ಮುಂಬೈ: ರೈತರ ಪ್ರತಿಭಟನೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಗುರುವಾರ ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ರೈತರ ವಿರುದ್ಧ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ, ಬಾಲಿವುಡ್ ನಟಿಯ ವಿರುದ್ಧ ದಾಖಲಾಗಿ ರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕಂಗನಾ ಅವರು ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಪರ ವಕೀಲರು ತಿಳಿಸಿದ್ದಾರೆ.

ಸಿಖ್ ಸಂಘಟನೆಯೊಂದು ನೀಡಿದ ದೂರಿನ ಮೇರೆಗೆ ಕಳೆದ ತಿಂಗಳು ಕಂಗನಾ ರನೌತ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ತಿಂಗಳ ಆರಂಭದಲ್ಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನಟಿಗೆ ನೋಟಿಸ್ ನೀಡಿದ್ದರು.