Sunday, 11th May 2025

ನಟಿ ಜಾಕ್ವೆಲಿನ್ ಜಾಮೀನು ನವೆಂಬರ್ 15 ರವರೆಗೆ ವಿಸ್ತರಣೆ

ವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ (200 ಕೋಟಿ ) ಸಂಬಂಧ ನಟಿ ಜಾಕ್ವೆಲಿನ ಫರ್ನಾಂಡೀಸ್ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕೋರ್ಟ್ ಮಧ್ಯಂತರ ಜಾಮೀನನ್ನು ವಿಸ್ತರಿಸಿ ಆದೇಶಿಸಿದೆ.

ಶುಕ್ರವಾರ ಮಧ್ಯಂತರ ಜಾಮೀನು ಅರ್ಜಿಯ ವಿಸ್ತರಣೆ ಕುರಿತಂತೆ ಸಲ್ಲಿಸಿ ದಾಖಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿಯ ಪಾಟಿಯಾಲ ಹೌಸ್ ಕೋರ್ಟ್, 200 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾಕ್ವೆಲಿನ್ ಫರ್ನಾಂಡಿಸ್ ಅವರ ಮಧ್ಯಂತರ ಜಾಮೀನನ್ನು ನವೆಂಬರ್ 15 ರವರೆಗೆ ವಿಸ್ತರಿಸಿದೆ.