Wednesday, 14th May 2025

ಹಾಲಿವುಡ್ ನಟ ಕೆವಿನ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ಲಂಡನ್‌: ಬ್ರಿಟನ್​ನ ಕ್ರೌನ್ ಪ್ರೊಟೆಕ್ಷನ್ ಸರ್ವಿಸಸ್ ಹಾಲಿವುಡ್ ನಟ ಕೆವಿನ್ ಸ್ಪೇಸಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದೆ.

ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೆವಿನ್ ಮೇಲಿದ್ದು, ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ಆರೋಪಗಳನ್ನು ಅಧಿಕೃತ ಗೊಳಿಸಲಾಗಿದೆ.

ಬುಧವಾರ ಯುಕೆ ಕ್ರೌನ್ ಪ್ರಾಸಿಕ್ಯೂಷನ್ ಸೇವೆಯು ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ನಾಲ್ಕು ಕ್ರಿಮಿನಲ್ ಆರೋಪಗಳನ್ನು ಅಧಿಕೃತಗೊಳಿಸಿದೆ. ಹಾಲಿವುಡ್​ನಲ್ಲಿ ಕೆವಿನ್ ದೊಡ್ಡ ಹೆಸರಾಗಿದ್ದು 2 ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

62 ವರ್ಷ ವಯಸ್ಸಿನ ನಟ 2017 ರಿಂದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮ ಅವರ ವೃತ್ತಿ ಬದುಕಿನಲ್ಲೂ ಆಗಿದ್ದು, ಅವರು ಕಾಣಿಸಿಕೊಳ್ಳಬೇಕಿದ್ದ ಚಿತ್ರದಲ್ಲಿ ಬೇರೆ ನಟ ಕಾಣಿಸಿಕೊಳ್ಳುತ್ತಿದ್ದಾರೆ.