Sunday, 11th May 2025

BBK 11: ಬಿಗ್ ಬಾಸ್ ಮನೆಯಲ್ಲಿ ಹೇಗಿರಬೇಕು?: ಹನುಮಂತ ಕೊಟ್ಟ ಉತ್ತರ ನೀವೇ ನೋಡಿ

Hanumantha and Srujan Lokesh

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ಎಲ್ಲರ ಮನೆ ಗೆಲ್ಲುತ್ತಿದ್ದಾರೆ. ತಮ್ಮ ಮಾತುಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳು ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸುತ್ತಿವೆ.

ಶನಿವಾರ ಯೋಗರಾಜ್ ಭಟ್ ಅವರು, ಹನುಮಂತ ನಿಜಕ್ಕೂ ಇನ್ನೋಸೆಂಟ್ ಇದ್ದಾನಾ ಅಥವಾ ಸ್ಮಾರ್ಟ್ ಆಗಿದ್ದಾನಾ? ಎಂದು ಪ್ರಶ್ನೆ ಇಟ್ಟಿದ್ದರು. ಇದಕ್ಕೆ ಸ್ಪರ್ಧಿಗಳು ನಾನಾರೀತಿಯ ಉತ್ತರ ಕೊಟ್ಟಿದ್ದರು. ಭಾನುವಾರ ಸೃಜನ್ ಲೋಕೇಶ್ ಕೂಡ ಹನುಮಂತ ಅವರನ್ನು ಮಾತನಾಡಿಸಿ ಕೆಲ ಪ್ರಶ್ನೆ ಕೇಳಿದ್ದಾರೆ.

ಅತಿಥಿಯಾಗಿ ಬಂದಿರುವ ಸೃಜನ್ ಸ್ಫರ್ಧಿ ಹನುಮಂತುಗೆ, ಮುಖ್ಯವಾಗಿ ಮಾನಸ ಯಾವ ರೀತಿ ಮಾತನಾಡಬೇಕು ಎಂಬುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಹೇಳುತ್ತಾರೆ. ಇದಕ್ಕೆ ಉತ್ತರಿಸುವ ಹನುಮಂತ ಅರ್ಧಂಬರ್ಧ ತಿಳಿದುಕೊಂಡು ಆರ್ಡರ್​ ಮಾಡಿದರೆ ಸರಿ ಹೋಗುವುದಿಲ್ಲ. ವಿಚಾರವನ್ನು ತಿಳಿದುಕೊಂಡು ಮಾತನಾಡಿದರೆ ಸೂಕ್ತ ಎಂದು ಹೇಳುತ್ತಾರೆ. ಮನೆಯೊಳಗೆ ಅವರ ಮಾತು ಕೇಳಿ ಬೇರೆ ಅವರಿಗೆ ತುಂಬ ಬೇಜಾರ್‌ ಆಗುತ್ತೆ. ಗಂಡು ಮಕ್ಕಳ ಮೈ ಮೇಲೆ ಏರಿ ಏರಿ ಹೋಗ್ತಾರೆ. ಅಂದರೆ ಹೊಡಿಲಿಕ್ಕೆ ಹೋಗೋ ತರ ಮಾಡ್ತಾರೆ..ಮುಖದಲ್ಲಿ ಮುಖ ಇಟ್ಟು ಮಾತಾಡ್ತಾರೆ. ಸ್ವಲ್ಪ ಮೃದಯವಾಗಿ ಮಾತನಾಡಬೇಕು. ನೋಡಣ್ಣ..ಹಿಂಗಣ್ಣ ಅಂತ ತಮ್ಮದೇ ಶೈಲಿಯಲ್ಲಿ ಹೇಳಿ ತೋರಿಸಿದ್ದಾರೆ.

ಹನುಮಂತ ಅವರ ಈ ಟಿಪ್ಸ್​ಗೆ ಮನೆಯವರೆಲ್ಲರೂ ಚಪ್ಪಾಳೆ ತಟ್ಟಿ ಫುಲ್ ಖುಷಿಯಾಗಿ ನಗಾಡಿದ್ದಾರೆ. ಹನುಮಂತನ ಮಾತಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅನೇಕರು ಮಾನಸಾ ನಡೆಗೆ ಕಿಡಿಕಾರಿದ್ದಾರೆ.

Deepvavali 2024: ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸುವ ಬಾಲಿವುಡ್ ಹಾಡುಗಳಿವು; ವಿಡಿಯೊಗಳಿವೆ