Tuesday, 13th May 2025

ಗುಜರಾತಿ ಸಿನಿಮಾ ಕನ್ನಡದಲ್ಲಿ ಬಿಡುಗಡೆ

ಬೆಂಗಳೂರು: ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ‘ವರ ಪಧರಾವೋ ಸಾವಧಾನ’ ಎಂಬ ಸಿನಿಮಾ ಕನ್ನಡ ನಾಡಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಗುಜರಾತಿ ಚಿತ್ರರಂಗವು ಇದೀಗ ಭಾರಿ ಜನಪ್ರಿಯತೆಯನ್ನು ಪಡೆಯುತ್ತಿದೆ. ಇದಕ್ಕೆ ಸ್ಪೂರ್ತಿ ಎಂಬಂತೆ ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ‘ವರ ಪಧರಾವೋ ಸಾವಧಾನ’ ಎಂಬ ಸಿನಿಮಾ ಕನ್ನಡ ನಾಡಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಸಿ ಥ್ರಿಲ್ಲರ್ ‘ವಿಕ್ರಾಂತ್ ರೋಣ’ ಸಿನಿಮಾ ನಿರ್ಮಾಣಕ್ಕೆ ಹೆಸರುವಾಸಿಯಾಗಿ ರುವ ಮಂಜುನಾಥ್ ಗೌಡ ಅವರ ಶಾಲಿನಿ ಆರ್ಟ್ಸ್ ಬ್ಯಾನರ್ ‘ವರ ಪಧಾರವೋ ಸಾವಧಾನ’ದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಜುಲೈ 7 ರಂದು ಕನ್ನಡದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ವಿಪುಲ್ ಶರ್ಮಾ ಬರೆದು ನಿರ್ದೇಶಿಸಿದ ವರ ಪಧಾರವೋ ಸಾವಧಾನ ಒಂದು ಕಾಮಿಡಿ ಕೌಟುಂಬಿಕ ಮನರಂಜನೆ ಯ ಭರವಸೆಯನ್ನು ನೀಡುತ್ತದೆ. ಪ್ರತಿಭಾವಂತ ನಟರಾದ ತುಷಾರ್ ಸಾಧು ಮತ್ತು ಕಿಂಜಲ್ ರಾಜಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.