Saturday, 10th May 2025

BBK 11: ಬಿಗ್ ಬಾಸ್​ನ ಪ್ರಮುಖ ನಿಯಮವನ್ನೇ ಮುರಿದ ಕ್ಯಾಪ್ಟನ್ ಗೌತಮಿ: ಏನಾಯಿತು ನೋಡಿ

Gouthami Jadav

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರದ ಮನೆಯ ಕ್ಯಾಪ್ಟನ್ ಆಗಿ ಗೌತಮಿ ಜಾಧವ್ ಆಯ್ಕೆ ಆಗಿದ್ದಾರೆ. ಬಯಸದೇ ಬಂದ ಭಾಗ್ಯ ಎಂಬಂತೆ ಯಾರೂ ಅಂದುಕೊಳ್ಳದ ರೀತಿಯಲ್ಲಿ ಗೌತಮಿಗೆ ಈ ಅವಕಾಶ ಒಲಿದುಬಂತು. ಆದರೆ, ಕ್ಯಾಪ್ಟನ್ ಆದ ಬೆನ್ನಲ್ಲೇ ಬಿಗ್ ಬಾಸ್​ನ ಬಹುದೊಡ್ಡ ನಿಯಮವನ್ನೇ ಗೌತಮಿ ಮೀರಿದ್ದಾರೆ. ಇದಕ್ಕೆ ಸ್ವತಃ ಅವರೇ ಶಿಕ್ಷೆ ಕೂಡ ಅನುಭವಿಸಿದ್ದಾರೆ.

ಕಳೆದ ವಾರ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಗಳಾಗಿತ್ತು. ಇದರಲ್ಲಿ ಧನರಾಜ್ ಆಚಾರ್ ತಂಡ ಗೆದ್ದು ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದುಕೊಂಡಿತು. ಈ ಟೀಮ್​ನಲ್ಲಿ ಇದ್ದವರು. ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದುಕೊಳ್ಳಲು ರಂಜಿತ್, ಹನುಮಂತ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ಶಿಶಿರ್ ಶಾಸ್ತ್ರೀ ಆಯ್ಕೆ ಆದರು. ಆದರೆ, ಇದರಲ್ಲಿ ಮೋಕ್ಷಿತಾ ನಾನು ಕ್ಯಾಪ್ಟನ್ಸಿ ಟಾಸ್ಕ್ ಆಡಲ್ಲ ಎಂದು ಹಠಿ ಹಿಡಿದು ಕ್ವಿಟ್ ಆದರು.

ಇದರ ಪರಿಣಾಮ ಸೋತ ತಂಡದಲ್ಲಿದ್ದ ಗೌತಮಿ ಜಾಧವ್​ಗೆ ಅದೃಷ್ಟ ಒಲಿದುಬಂತು. ಇವರು ಕ್ಯಾಪ್ಟನ್ಸಿ ಟಾಸ್ಕ್ ಆಡಲು ಅರ್ಹತೆ ಪಡೆದುಕೊಂಡರು. ಅಷ್ಟೇ ಅಲ್ಲದೆ ಯಾರೂ ಊಹಿಸದ ರೀತಿಯಲ್ಲಿ ಇದರಲ್ಲಿ ಗೆದ್ದು ಕ್ಯಾಪ್ಟನ್ ಕೂಡ ಆಗಿದ್ದಾರೆ. ಮನೆಯಲ್ಲಿ ಯಾವುದೇ ರೂಲ್ಸ್ ಬ್ರೇಕ್ ಆಗದಂತೆ ನೋಡಿಕೊಳ್ಳಬೇಕಾಗಿರುವುದು ಕ್ಯಾಪ್ಟನ್ ಜವಾಬ್ದಾರಿ. ಹಾಗೇನಾದರೂ ಸ್ಪರ್ಧಿಗಳು ರೂಲ್ಸ್​ ಬ್ರೇಕ್​ ಮಾಡಿದ್ದೇ ಆದರೆ ಅವರು ಶಿಕ್ಷೆಗೆ ಬಳಗಾಗಬೇಕಾಗುತ್ತದೆ.

ಬಿಗ್ ​ಬಾಸ್​ ಮನೆಯ ರೂಲ್ಸ್​ ಬ್ರೇಕ್ ಮಾಡಿದವರಿಗೆ ಆ ವಾರದ ಕ್ಯಾಪ್ಟನ್​ ಶಿಕ್ಷೆ ಕೊಡುತ್ತಾರೆ. ಇದು ನಡೆದುಕೊಂಡು ಬಂದ ನಿಯಮ. ಆದರೆ ಇಲ್ಲಿ ಕ್ಯಾಪ್ಟನ್ ಅವರೇ​ ಬಿಗ್ ​ಬಾಸ್ ​ಮನೆಯ ರೂಲ್ಸ್​ ಬ್ರೇಕ್​ ಮಾಡಿದ್ದಾರೆ. ಗೌತಮಿ ಜಾಧವ್ ಡ್ರೆಸ್​ ಅಪ್ ಮಾಡುವಾಗ ಮೈಕ್​ ಅನ್ನು ಹಾಕಿಕೊಂಡಿರಲಿಲ್ಲ. ಹಾಕಿಕೊಳ್ಳದೇ ಥ್ಯಾಂಕ್ಯೂ ಎಂಬ ಪದವನ್ನು ಯೂಸ್​ ಮಾಡಿದ್ದಾರೆ. ಆ ಕೂಡಲೇ ಬಿಗ್​ಬಾಸ್​ ವಾಯ್ಸ್​ ನೋಟ್​ ಬರುತ್ತೆ.

ನಂತರ ಓಡಿ ಹೋಗಿ ಗೌತಮಿ ಅವರು ಮೈಕ್​ ಧರಿಸುತ್ತಾರೆ. ಸ್ವತಃ ಕ್ಯಾಪ್ಟನ್ ಮನೆಯ ರೂಲ್ಸ್ ಬ್ರೇಕ್ ಮಾಡಿರುವುದಕ್ಕೆ ಇತರೆ ಸ್ಪರ್ಧಿಗಳು ಸಖತ್ ಮಜಾ ತೆಗೆದುಕೊಂಡಿದ್ದಾರೆಎ. ಬಳಿಕ ಗೌತಮಿ ಅವರು ಮನೆಯ ಎಲ್ಲ ಸದಸ್ಯರ ಬಳಿ ಹೋಗಿ ನಾನು ಕ್ಯಾಪ್ಟನ್​ ಆಗಿ ಈ ತಪ್ಪು ಮಾಡಬಾರದಾಗಿತ್ತು, ಇನ್ಮುಂದೆ ಈ ರೀತ ಆಗದಾಗೆ ನೋಡಿಕೊಳ್ಳುತ್ತೇನೆ, ಸ್ವಾರಿ ಎಂದು ಹೇಳಿದ್ದಾರೆ.

BBK 11: ಬಿಗ್ ಬಾಸ್ ಮನೆಗೆ ಬಂದ ಸೀನಿಯರ್​ಗಳು: ತನಿಷಾ ಜೊತೆ ಹನುಮಂತು ಸಖತ್ ಡ್ಯಾನ್ಸ್