ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) 11ನೇ ವಾರದ ಕ್ಯಾಪ್ಟನ್ ಆಗಿರುವ ಗೌತಮಿ ಜಾಧವ್ ಕೆಲವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಹಿಂದೆ ಟಾಸ್ಕ್ ಮಧ್ಯೆ ಕೂಡ ಗೆಳೆತಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದ ಗೌತಮಿ ಈಗ ಸಂಪೂರ್ಣ ಬದಲಾಗಿದ್ದಾರೆ. ತನ್ನ ಆತ್ಮೀಯ ಗೆಳೆಯ ಉಗ್ರಂ ಮಂಜು ಅವರನ್ನು ಸಖತ್ ಆಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಿಧಾನವಾಗಿ ಗೌತಮಿ ಅವರು ಮಂಜು ಅವರಿಂದ ದೂರವಾಗುವಂತೆ ಕಾಣುತ್ತದೆ.
ಆರಂಭದಲ್ಲಿ ಗೌತಮಿ ಅವರು ಕ್ಯಾಪ್ಟನ್ಸಿ ಟಾಸ್ಕ್ನಿಂದಲೇ ಮಂಜು ಅವರನ್ನು ಹೊರಗಿಟ್ಟರು. ಇದು ಮಂಜುಗೆ ಅಘಾತವಾಗಿದೆ. ಅಲ್ಲದೆ ಗೌತಮಿ ತೆಗೆದುಕೊಂಡ ನಿರ್ಧಾರ ಇಡೀ ಮನೆಗೆ ಶಾಕ್ ನೀಡಿತು. ಟಾಸ್ಕ್ ಮಧ್ಯೆ ಕೂಡ ಗೌತಮಿ ಅವರು ಮಂಜು ಜೊತೆಗೆ ರೇಗಾಡಿದ್ದರು. ನಾನು ಕ್ಯಾಪ್ಟನ್ ಆದಾಗ, ನೀವು ಲೀಡ್ ಮಾಡಬೇಡಿ. ನಿಮ್ಮ ಧ್ವನಿಯಿಂದಾಗಿ, ನನ್ನ ಧ್ವನಿ ಕೆಳೆಗೆ ಹೋಗುತ್ತಿದೆ ಎಂದಿದ್ದರು.
ಮೋಕ್ಷಿತಾ ಅವರು ಏನು ಅಂದ್ರು. ಅವರು ಇಬ್ಬರೇ ಮಾತಾಡ್ತಾರೆ ಅಂತ. ನಾನು ಮಾತಾಡುವಾಗ, ನೀವೆ ಮಾತಾಡ್ತೀರಾ ಅನಿಸುತ್ತೆ. ಮೋಕ್ಷಿತಾ ಅವತ್ತು ಹೇಳಿದು ಕರೆಕ್ಟ್ ಅಂತ ಅನಿಸಿತು. ಮುಂಚಿನ ರೀತಿ ನೀವು ಇಲ್ಲ ಎಂದು ಮಂಜು ಜೊತೆ ಹೇಳಿದ್ದರು. ಇದರಿಂದ ಮಂಜುಗೆ ನೋವಾಗಿದೆ. ಇದೀಗ ಮತ್ತೆ ಮಂಜು ಅವರ ಜೊತೆ ಗೌತಮಿಗೆ ಜಗಳವಾಗಿದೆ.
ಟಾಸ್ಕ್ ಒಂದರಲ್ಲಿ ಗೌತಮಿ ಹಾಗೂ ಐಶ್ವರ್ಯಾ ಆಡುತ್ತಿದ್ದರು. ಆಗ ಉಗ್ರಂ ಮಂಜು ಅವರ ಏಕಾಗ್ರತೆಯನ್ನು ಹಾಳು ಮಾಡಲು ಹಾಡು ಹಾಡಿದ್ದಾರೆ. ಆಗ ಶಿಶಿರ್ ಮಂಜಣ್ಣ ಸ್ಪಲ್ಪ ಸುಮ್ನೆ ಇರಿ ಅಂತ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಮಂಜು ಕಿರುಚಾಡಿದ್ದಾರೆ. ಆಗ ಗೌತಮಿ ಗೆಳೆಯ ಮಂಜು ವಿರುದ್ಧ ಕೋಪಗೊಂಡಿದ್ದಾರೆ.
ಆಡ್ತೀನೋ, ಸಾಯ್ತಿನೋ ದಯವಿಟ್ಟು ನನ್ನ ಕಡೆ ತಿರುಗಬೇಡಿ, ನೀವು ಮಾಡುವ ತಪ್ಪಿಗೆ ನನಗೆ ಬಹಳಷ್ಟು ತೊಂದರೆಯಾಗಿದೆ ಅಂತ ಹೇಳಿದ್ದಾರೆ. ಇದಾದ ಬಳಿಕ ಮತ್ತೆ ಬೆಡ್ರೂಮ್ನಲ್ಲಿ ಗಲಾಟೆ ಮಾಡಿಕೊಂಡು ಮಂಜು ಅವರ ಮೇಲೆ ಗೌತಮಿ ರೇಗಾಡಿದ್ದಾರೆ. ಮೊನ್ನೆ ಕೂಡ ಮಂಜುಗೆ ಗೌತಮಿ ವಾರ್ನಿಂಗ್ ಮಾಡಿದ್ದರು. ನಾನು ಕ್ಯಾಪ್ಟನ್ ಆದಾಗ ನಂದೇ ಸೌಂಡ್ ಇರಬೇಕು. ಅಲ್ಲಿ ಬಂದು ಎಲ್ಲ ಕೆಲಸವನ್ನು ಹಾಳು ಮಾಡಬೇಡಿ. ನಾನು ಮಾತಾಡುವಾಗ ಮಧ್ಯೆ ಮಾತಾಡಬೇಡಿ ಅಂತ ಖಡಕ್ ಆಗಿ ಹೇಳಿದ್ದರು. ಈ ಎಲ್ಲ ಮಾತುಗಳಿಂದ ಮಂಜುಗೆ ಬೇಸರವಾಗಿದೆ.