ಇದು ಅವರ ಬ್ಲಾಕ್ಬಸ್ಟರ್ ‘ಡ್ರೀಮ್ ಗರ್ಲ್’ನ ಮುಂದುವರಿದ ಭಾಗವಾಗಿದೆ. ಚಿತ್ರ ತಯಾರಕರು ‘ಡ್ರೀಮ್ ಗರ್ಲ್ 2’ ನಿಂದ ಪೂಜಾ ಪಾತ್ರ ಕೈಬಿಟ್ಟಿದ್ದಾರೆ. ಪೋಸ್ಟರ್ಗೆ ಆಯುಷ್ಮಾನ್ ಅವರ ಪತ್ನಿ ತಾಹಿರಾ ಕಶ್ಯಪ್ ಅವರ ಪ್ರತಿಕ್ರಿಯೆ ಗಮನ ಸೆಳೆದಿದೆ.
ಪೋಸ್ಟರ್ ಹಂಚಿಕೊಂಡಿರುವ ಆಯುಷ್ಮಾನ್ ಖುರಾನಾ, “ಇದು ಕೇವಲ ಮೊದಲ ನೋಟ. ಕನ್ನಡಿಯಲ್ಲಿರುವ ವಸ್ತುಗಳು ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚು ಸುಂದರವಾಗಿ ರುತ್ತದೆ! ಡ್ರೀಮ್ ಗರ್ಲ್ 2 ಆಗಸ್ಟ್ 25” ಎಂದು ಕ್ಯಾಪ್ಶನ್ ನೀಡಿದ್ದಾರೆ.
ಪೋಸ್ಟರ್ಗೆ ಪ್ರತಿಕ್ರಿಯಿಸಿದ ಆಯುಷ್ಮಾನ್ ಅವರ ಪತ್ನಿ ಮತ್ತು ಲೇಖಕಿ ತಾಹಿರಾ ಕಶ್ಯಪ್, ಕಾಮೆಂಟ್ ವಿಭಾಗದಲ್ಲಿ ಹೃದಯ ಕಣ್ಣುಗಳ ಎಮೋಜಿ ಮತ್ತು ಫೈರ್ ಎಮೋನಿ ನೊಂದಿಗೆ ಪೂಜಾ ಅವರ ನೋಟಕ್ಕೆ ಪ್ರತಿಕ್ರಿಯಿಸಿದರು.
ಪೋಸ್ಟರ್‌ನಲ್ಲಿ ಆಯುಷ್ಮಾನ್ ಗ್ಲಾಮರಸ್ ಮಹಿಳೆಯಂತೆ ಕಾಣುತ್ತಿದ್ದು, ಅದರಲ್ಲಿ ಲಿಪ್‌ಸ್ಟಿಕ್ ಹಚ್ಚಿಕೊಳ್ಳುತ್ತಿದ್ದಾರೆ. ಮೊದಲ ನೋಟ ಹಂಚಿಕೊಂಡ ನಟ, ಆಗಸ್ಟ್ 25 ಕ್ಕೆ ಒಂದು ತಿಂಗಳ ಕೌಂಟ್‌ಡೌನ್‌ನೊಂದಿಗೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಸಹ ಉಲ್ಲೇಖಿಸಿದ್ದಾರೆ. ಸಿನಿಮಾವನ್ನು ರಾಜ್ ಶಾಂಡಿಲ್ಯ ನಿರ್ದೇಶಿಸಿದ್ದಾರೆ. ಚಿತ್ರವು ಆಗಸ್ಟ್ 25 ರಂದು ತೆರೆ ಕಾಣಲಿದೆ.
ಈ ಚಿತ್ರಕ್ಕೆ ಅನನ್ಯಾ ಪಾಂಡೆ ಕೂಡ ಸೇರಿಕೊಂಡಿದ್ದಾರೆ.