Monday, 12th May 2025

BBK 11: ಎಂಟನೇ ವಾರಕ್ಕೆ ಬಿಗ್ ಬಾಸ್ ಪ್ರಯಾಣ ಕೊನೆಗೊಳಿಸಿದ ಹೃದಯವಂತ ಧರ್ಮಾ

Dharma KeerthiRaj Out

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಎಂಟನೇ ವಾರಕ್ಕೆ ಅಚ್ಚರಿ ಎಂಬಂತೆ ಶರ್ಮಾ ಕೀರ್ತಿರಾಜ್ ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ. ಈಗಾಗಲೇ ಬಿಗ್ ​ಬಾಸ್ ಮನೆಯಿಂದ 6 ಸ್ಪರ್ಧಿಗಳು ಆಚೆ ಹೋಗಿದ್ದಾರೆ. ನಟಿ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ರಂಜಿತ್‌, ಹಂಸ, ಅನುಷಾ ರೈ ಹಾಗೂ ಮಾನಸಾ ಔಟ್ ಆಗಿದ್ದರು. ಈ ಲಿಸ್ಟ್​ಗೆ ಇದೀಗ ಧರ್ಮಾ ಕೂಡ ಸೇರಿದ್ದಾರೆ. ಕಳೆದ ವಾರವಷ್ಟೆ ಇವರ ಸ್ನೇಹಿತೆ ಅನುಷಾ ರೈ ಮನೆಯಿಂದ ಹೊರಬಂದಿದ್ದರು.

ಎಂಟನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದರು. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್‌ ಹಾಗೂ ಕ್ಯಾಪ್ಟನ್ ಭವ್ಯಾ ಗೌಡಾ ಅವರ ನೇರ ನಾಮಿನೇಷನ್​ನಿಂದ ಹನುಮಂತ ಲಮಾಣಿ ನಾಮಿನೇಟ್ ಮಾಡಿದ್ದರು. ಇವರಲ್ಲಿ ಮೋಕ್ಷಿತಾ ಹಾಗೂ ಹನುಮಂತ ಅವರನ್ನು ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಸೇವ್ ಮಾಡಿದ್ದರು.

ಭಾನುವಾರದ ಎಪಿಸೋಡ್​ನಲ್ಲಿ ಚೈತ್ರಾ, ಮಂಜು, ತ್ರಿವಿಕ್ರಮ್, ಗೌತಮಿ ಹಾಗೂ ಹನುಮಂತ ಸೇಫ್ ಆಗಿದ್ದಾರೆ. ಚೈತ್ರಾ ಹಾಗೂ ಧರ್ಮಾ ಕೊನೆಯಲ್ಲಿ ಡೇಂಜರ್ ಝೋನ್​ನಲ್ಲಿದ್ದರು. ಇವರಲ್ಲಿ ಅಂತಿಮವಾಗಿ ಧರ್ಮಾ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಧರ್ಮಾ ಕೀರ್ತಿರಾಜ್ ಮೂಲೆಗುಂಪಾಗುತ್ತಿದ್ದಾರೆ ಎಂದು ಕಳೆದ ಕೆಲವು ವಾರಗಳಿಂದ ಕೇಳಿ ಬರುತ್ತಲೇ ಇತ್ತು. ತಮ್ಮ ಒಳ್ಳೆಯ ಮನಸ್ಸಿನಿಂದ ಧರ್ಮ ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಆದರೆ, ಅವರು ಉತ್ತಮ ಆಟ ತೋರಿಸುತ್ತಿಲ್ಲ. ಸಿಕ್ಕ ಅವಕಾಶವನ್ನು ದೊಡ್ಟ ಮಟ್ಟದಲ್ಲಿ ಉಳಿಸಿಕೊಂಡಿಲ್ಲ ಎಂಬುದು ಕೂಡ ನಿಜ.

ಕಳೆದ ವಾರ ಚೈತ್ರಾ ಅವರು ನಾನು ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ದರು. ಆದರೆ, ವಾರದ ಮೊದಲ ಎರಡು ದಿನ ಸೈಲೆಂಟ್ ಆಗಿದ್ದರೂ ಆ ಬಳಿಕ ಚಿಗುರಿಕೊಂಡಿದ್ದರು. ಟಾಸ್ಕ್​ನಲ್ಲಿ ಕೂಡ ಚೆನ್ನಾಗಿ ಭಾಗವಹಿಸಿದ್ದರು. ಐಶ್ವರ್ಯಾ ಅವರ ಬಳಿಯಿಂದ ನಾಜೂಕಾಗಿ ಹಣ ಕದ್ದಿದ್ದನ್ನು ಸ್ವತಃ ಸುದೀಪ್ ಅವರೇ ಪ್ರಶಂಶಿಸಿದರು. ಈ ಎಲ್ಲ ಕಾರಣಗಳಿಂದ ಚೈತ್ರಾ ಎಲಿಮಿನೇಷನ್​ನಿಂದ ಸ್ವಲ್ಪದರಲ್ಲೇ ಪಾರಾದರು ಎನ್ನಬಹುದು.

BBK 11: ಏಳು ಮಂದಿಯಲ್ಲಿ ಇಂದು ಮೂರು ಸ್ಪರ್ಧಿಗಳು ಸೇಫ್: ಯಾರೆಲ್ಲ ನೋಡಿ