Sunday, 11th May 2025

Devara Update: ಜೂ. ಎನ್‌ಟಿಆರ್‌ ಅಭಿನಯದ ‘ದೇವರ’ ಹಿಂದಿ ವರ್ಷನ್‌ ಒಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್‌; ಎಲ್ಲಿ, ಯಾವಾಗ ಸ್ಟ್ರೀಮಿಂಗ್‌?

Devara Update

ಮುಂಬೈ: ಈ ವರ್ಷದ ಬಹು ನಿರೀಕ್ಷಿತ, ಟಾಲಿವುಡ್‌ ಸ್ಟಾರ್‌ ಜೂ. ಎನ್‌ಟಿಆರ್‌ (Jr NTR) ಅಭಿನಯದ ‘ದೇವರ: ಪಾರ್ಟ್ 1’ (Devara: Part 1) ಚಿತ್ರ ತೆರೆಕಂಡಿದೆ. ಪ್ರೇಕ್ಷಕರಿಂದ, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಬಾಕ್ಸ್‌ ಆಫೀಸನಲ್ಲಿ ಧೂಳೆಬ್ಬಿಸಿದೆ. ಸುಮಾರು 200−300 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಜಾಗತಿಕವಾಗಿ 500 ಕೋಟಿ ರೂ. ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿವಿಧ ಭಾಷೆಗಳಲ್ಲಿ ಸೆ. 27ರಂದು ರಿಲೀಸ್‌ ಆದ ‘ದೇವರ: ಪಾರ್ಟ್ 1’ ಇದೀಗ ಒಟಿಟಿಗೂ ಲಗ್ಗೆ ಇಟ್ಟಿದೆ. ಹಿಂದಿ ಹೊರತುಪಡಿಸಿ ಉಳಿದ ಭಾಷೆಗಳಲ್ಲಿ ನ. 8ರಿಂದ ಸ್ಟ್ರೀಮಿಂಗ್‌ ಆಗುತ್ತಿದೆ. ಇದೀಗ ಹಿಂದಿ ಅವತರಣಿಕೆ ಪ್ರಸಾರಕ್ಕೂ ಮುಹೂರ್ತ ಸಿದ್ಧವಾಗಿದೆ (Devara Update).

ಮಾಸ್‌ ನಿರ್ದೇಶಕ ಕೊರಟಾಲ ಶಿವ ಆ್ಯಕ್ಷನ್‌ ಕಟ್‌ ಹೇಳಿರುವ ʼದೇವರʼ ಚಿತ್ರ ತೆಲುಗು, ಕನ್ನಡ, ತಮಿಳು ಮತ್ತು ಮಲೆಯಾಳಂ ಭಾಷೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದ್ದು, ಮತ್ತಷ್ಟು ವೀಕ್ಷಕರ ಗಮನ ಸೆಳೆಯುತ್ತಿದೆ. ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡವರು ಮನೆಯಲ್ಲೇ ಕುಳಿತು ಈ ಆ್ಯಕ್ಷನ್‌ ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದಾಗ್ಯೂ ಹಿಂದಿ ವರ್ಷನ್‌ ರಿಲೀಸ್‌ ಆಗದೆ ಇರುವುದು ಕೆಲವರಿಗೆ ಬೇಸರ ತರಿಸಿದೆ. ಸದ್ಯ ಚಿತ್ರತಂಡ ಅಂತಹವರಿಗೆ ಗುಡ್‌ನ್ಯೂಸ್‌ ನೀಡಿದೆ.

ಹಿಂದಿ ವರ್ಷನ್‌ ಯಾವಾಗ?

ಬಾಲಿವುಡ್‌ ಬೆಡಗಿ, ನಟಿ ಶ್ರಿದೇವಿ ಪುತ್ರಿ ಜಾನ್ವಿ ಕಪೂರ್‌ ನಾಯಕಿಯಾಗಿ ಟಾಲಿವುಡ್‌ಗೆ ʼದೇವರʼ ಮೂಲಕ ಕಾಲಿಟ್ಟಿದ್ದಾರೆ. ಅಲ್ಲದೆ ಪ್ರಭಾಸ್‌ ಅಭಿನಯದ ʼಆದಿ ಪುರುಷ್‌ʼ ಚಿತ್ರದ ಬಳಿಕ ಸೈಫ್‌ ಆಲಿ ಖಾನ್‌ ಮತ್ತೆ ಟಾಲಿವುಡ್‌ನಲ್ಲಿ ಕಾಣಿಸಿಕೊಂಡ ಚಿತ್ರವಿದು. ಹೀಗಾಗಿ ಬಾಲಿವುಡ್‌ ವೀಕ್ಷಕರು ಈ ಚಿತ್ರದ ಸ್ಟ್ರೀಮಿಂಗ್‌ಗಾಗಿ ಕಾದು ಕುಳಿತಿದ್ದಾರೆ. ಮೂಲವೊಂದರ ಪ್ರಕಾರ ಹಿಂದಿ ವರ್ಷನ್‌ ಕೂಡ ನೆಟ್‌ಫ್ಲಿಕ್‌ನಲ್ಲೇ ಪ್ರಸಾರವಾಗಲಿದೆ. ನ. 22ರಿಂದ ಸ್ಟ್ರೀಮಿಂಗ್‌ ಆಗಲಿದೆ ಎನ್ನಲಾಗುತ್ತಿದೆ. ಅದಗ್ಯೂ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬೀಳಬೇಕಿದೆ.

ಚೈತ್ರಾ ರೈ, ಪ್ರಕಾಶ್‌ ರೈ, ಶ್ರೀಕಾಂತ್‌, ಶೈನ್‌ ಟಾಮ್‌ ಚಾಕೋ, ನರೇನ್‌, ಶ್ರೀಕಾಂತ್‌ ಮತ್ತಿತರರು ʼದೇವರʼ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕರಾವಳಿ ತೀರದ ಕಥೆಯನ್ನು ಇದು ಒಳಗೊಂಡಿದೆ. 2016ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಜನತಾ ಗ್ಯಾರೇಜ್‌ʼ (Janatha Garage) ಸಿನಿಮಾದಲ್ಲಿಒಟ್ಟಾಗಿ ಕೆಲಸ ಮಾಡಿದ್ದ ಜನಪ್ರಿಯ ನಿರ್ದೇಶಕ ಕೊರಟಾಲ ಶಿವ ಮತ್ತು ಜೂನಿಯರ್‌ ಎನ್‌ಟಿಆರ್‌ ಸುಮಾರು 8 ವರ್ಷಗಳ ಬಳಿಕ ʼದೇವರʼ ಚಿತ್ರದ ಮೂಲಕ ಒಂದಾಗಿದ್ದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಚಿತ್ರ ಬಿಡುಗಡೆಗೆ ಮೊದಲೇ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿರುವ ಹಾಡುಗಳು ಮೋಡಿ ಮಾಡಿದ್ದವು. ಹೀಗಾಗಿ ಈ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿತ್ತು. ಕೊನೆಗೆ ಚಿತ್ರ ತೆರೆಕಂಡು ನಿರೀಕ್ಷಿತ ಮಟ್ಟಕ್ಕೆ ತಲುಪದಿದ್ದರೂ ಪಾರ್ಟ್‌ 2 ಬಗ್ಗೆ ಕುತೂಹಲ ಹುಟ್ಟು ಹಾಕಿದೆ. ಸದ್ಯ ಒಟಿಟಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಈ ಸುದ್ದಿಯನ್ನೂ ಓದಿ: Devara Part 1: ʼದೇವರʼ ಬಿಡುಗಡೆಗೆ ಮುನ್ನವೇ ದಾಖಲೆಯ ಕಲೆಕ್ಷನ್‌; ಅಡ್ವಾನ್ಸ್‌ ಬುಕ್ಕಿಂಗ್‌ನಿಂದ ಜೂನಿಯರ್‌ ಎನ್‌ಟಿಆರ್‌ ಚಿತ್ರ ಗಳಿಸಿದ್ದೆಷ್ಟು?