Thursday, 15th May 2025

ನಟ ಜಯಂ ರವಿಗೆ ಕರೋನಾ ಸೋಂಕು ದೃಢ

ಚೆನ್ನೈ: ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್ 1’ ನಲ್ಲಿ ಅರುಣ್ಮೋಳಿ ವರ್ಮನ್ ಪಾತ್ರ ನಿರ್ವಹಿಸಿದ್ದ ನಟ ಜಯಂ ರವಿ ಅವರಿಗೆ ಕರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ಜಯಂ ರವಿ, ‘ಇಂದು ಸಂಜೆ ನನಗೆ ಕೋವಿಡ್-19 ದೃಢಪಟ್ಟಿದೆ. ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸಿ, ನಾನು ತಕ್ಷಣವೇ ಪ್ರತ್ಯೇಕ ವಾಸದಲ್ಲಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಅಗತ್ಯವಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸುತ್ತೇನೆ. ಮಾಸ್ಕ್.

ಮಾಸ್ಕ್ ಧರಿಸಿ. ಸುರಕ್ಷಿತವಾಗಿರಿ! ದೇವರ ಆಶೀರ್ವಾದವಿರಲಿ’ ಎಂದಿದ್ದಾರೆ. ಹಲವಾರು ಸೆಲೆಬ್ರಿಟಿಗಳು ರವಿ ಅವರು ಕೋವಿಡ್ನಿಂದ ಶೀಘ್ರವಾಗಿ ಮತ್ತು ಸಂಪೂರ್ಣ ಚೇತರಿಸಿ ಕೊಳ್ಳಲಿ ಎಂದು ಹಾರೈಸಿದ್ದಾರೆ.

ರವಿ ಅವರಿಗೆ ಕೋವಿಡ್ ದೃಢಪಟ್ಟಿರುವ ಈ ಘೋಷಣೆಯು ಕೋವಿಡ್ ಎಂಬುದು ಗತಕಾಲದ ಸಂಗತಿ ಎಂದು ಭಾವಿಸಿದ್ದ ಚಿತ್ರರಂಗದ ಅನೇಕರಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಜನರು ತಮ್ಮ ಮನೆಗಳಿಂದ ಹೊರಬರುವಾಗ ಮಾಸ್ಕ್ ಧರಿಸದಿರುವ ತಮ್ಮ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಇದು ಈಗ ಒತ್ತಾಯಿಸಿದೆ.