Thursday, 15th May 2025

ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ ಇನ್ನಿಲ್ಲ

ವದೆಹಲಿ : ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ (58) ಬುಧವಾರ ನಿಧನ ರಾಗಿದ್ದಾರೆ.

ಆಗಸ್ಟ್ 10 ರಂದು ರಾಜು ಶ್ರೀವಾಸ್ತವ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿ ರೆಳೆದಿದ್ದಾರೆ.

ಏಮ್ಸ್‌ನಲ್ಲಿ 42 ದಿನ ಚಿಕಿತ್ಸೆ : ಆಗಸ್ಟ್ 10 ರಂದು, ರಾಜು ಶ್ರೀವಾಸ್ತವ ಅವರು ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ, ಕುಸ್ದು ಬಿದ್ದಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಿಸಲಾಗಿತ್ತು. ಏಮ್ಸ್‌ಗೆ ದಾಖಲಾದ ನಂತರ, ರಾಜು ಶ್ರೀವಾಸ್ತವ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಯಿತು.

ರಾಜು ಶ್ರೀವಾಸ್ತವ್ ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದು, ಅವರನ್ನು ಲೈಫ್ ಸಪೋರ್ಟ್ ನಲ್ಲಿಡಲಾಗಿತ್ತು. ಕೆಲ ದಿನಗಳ ಹಿಂದೆ ರಾಜು ಶ್ರೀವಾತ್ಸವ್ ಅವರ ಕೈಕಾಲುಗಳಲ್ಲಿ ಚಲನವಲನ ಕಂಡು ಬಂದಿತ್ತಾದರೂ, ಇಹ ಲೋಕ ತ್ಯಜಿಸಿದ್ದಾರೆ.