Sunday, 11th May 2025

Chaithra Kundapura: ಹಣದ ಸುರಿಮಳೆ: ಒಂದು ದಿನಕ್ಕೆ ಚೈತ್ರಾ ಕುಂದಾಪುರಗೆ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

Chaithra Kundapura remuneration

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ (Bigg Boss Kannada) ಚಾಲನೆ ಸಿಕ್ಕಿದ್ದು ಒಟ್ಟು 17 ಸರ್ಧಿಗಳು ಮನೆಯೊಳಗೆ ಪ್ರವೇಶ ಪಡೆದಿದ್ದಾರೆ. ಇದರಲ್ಲಿ 10 ಜನ ಸ್ವರ್ಗ ಹಾಗೂ 7 ಜನರು ನರಕದಲ್ಲಿದ್ದಾರೆ. ಈ ಬಾರಿ ಕೆಲ ಇಂಟ್ರೆಸ್ಟಿಂಗ್ ಕಂಟೆಸ್ಟೆಂಟ್​ಗಳು ಮನೆಯಲ್ಲಿದ್ದು, ಮೊದಲ ದಿನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿನ ಸೀಸನ್​ಗಳಂತೆ ಈ ಆವೃತ್ತಿಯಲ್ಲಿ ಕೂಡ ಬಿಗ್ ಬಾಸ್ ಮನೆಯೊಳಗೆ ಗಲಾಟೆಗಳೇ ಹೆಚ್ಚು ಸೌಂಡ್ ಮಾಡುತ್ತಿದೆ. ಈ ಪೈಕಿ ಮೊದಲ ದಿನ ಹೈಲೇಟ್ ಆದವರು ಚೈತ್ರಾ ಕುಂದಾಪುರ (Chiathra Kundapura).

ತನ್ನ ಮೈಂಡ್ ಗೇಮ್ ಮತ್ತು ಖಡಕ್ ಮಾತುಗಳಿಂದ ಸ್ವರ್ಗ ವಾಸಿಗಳ ಕೆಂಗಣ್ಣಿಗೆ ಗುರಿಯಾದ, ಫೈರ್ ಬ್ರ್ಯಾಂಡ್ ಎಂದೇ ಫೇಮಸ್ ಆಗಿರುವ ಚೈತ್ರಾ ಕುಂದಾಪುರ ನೇರವಾಗಿ ನಾಮಿನೇಟ್ ಕೂಡ ಆಗಿದ್ದಾರೆ. ಮೂಲತಃ ಕುಂದಾಪುರದವರಾದ ಚೈತ್ರಾ ತೆಕ್ಕಟ್ಟೆಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿ ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಬಳಿಕ ಕೆಲ ಕಾಲ ಬೆಂಗಳೂರಿನಲ್ಲಿ ಸಮಯ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿದ್ದರು. ಹಾಗೆಯೆ ಉಡುಪಿಯ ಸ್ಥಳೀಯ ಸುದ್ದಿ ವಾಹಿನಿ ಸ್ಪಂದನ ಟಿವಿಯಲ್ಲೂ ಕೆಲಸ ಮಾಡಿದ್ದಾರೆ.

ಮಾತಾಡೋಕೆ ಒಂದು ಲೆವೆಲ್ ಬೇಕು: ಬಿಗ್ ಬಾಸ್ ಮನೆಯಲ್ಲಿ ಎರಡನೇ ದಿನವೂ ಆರ್ಭಟಿಸಿದ ಚೈತ್ರಾ

ಉಡುಪಿ ಜಿಲ್ಲೆಯ ಬೈಂದೂರಿನ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿರುವ ಬಗ್ಗೆ ಆರೋಪ ಇತ್ತು. ಈ ಪ್ರಕರಣದಲ್ಲಿ ಅವರು ಜೈಲು ಪಾಲಾಗಿದ್ದಾರೆ. ಇತ್ತೀಚೆಗಷ್ಟೆ ಜಾಮೀನಿನ ಮೇಲೆ ಹೊರಬಂದಿದ್ದರು. ‘ನಾನು ವಿವಾದದ ಮಾತು ಆಡೋದಿಲ್ಲ. ಆದರೆ, ಅದು ಎದುರು ಇರೋರಿಗೆ ಹಾಗೆ ಕಾಣಿಸುತ್ತದೆ. ಸತ್ಯ ಹೇಳೋದೇ ವಿವಾದ ಆಗುತ್ತೆ ಅಂತಾದ್ರೆ, ಅದುವೇ ನನಗೆ ಪ್ರೀತಿ’ ಎಂದು ಚೈತ್ರಾ ಕಿಚ್ಚ ಸುದೀಪ್ ಎದುರು ಹೇಳಿಕೊಂಡಿದ್ದರು.

ಹೀಗೆ ಬಿಗ್ ಬಾಸ್​ನಲ್ಲಿ ಇಂಟ್ರೆಸ್ಟಿಂಗ್ ಕಂಟೆಸ್ಟೆಂಟ್ ಆಗಿರುವ ಚೈತ್ರಾ ಮೊದಲ ಎರಡು ದಿನ ಫುಲ್ ಎನರ್ಜಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವರ್ಗ ವಾಸಿಗಳು ನಾಮಿನೇಟ್ ಮಾಡಿದಾಗ ಅದಕ್ಕೆ ಚೈತ್ರಾ ಕೊಟ್ಟ ಉತ್ತರ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಇವರದ್ದೇ ಟಾಕ್ ಶುರುವಾಗಿದೆ. ಜೊತೆಗೆ ಬಿಗ್ ಬಾಸ್​ನಲ್ಲಿ ಇವರಿಗೆ ಎಷ್ಟು ಸಂಭಾವನೆ ಇರಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದೆ. ಹಾಗಾದರೆ ಚೈತ್ರಾ ಸಂಭಾವನೆ ಎಷ್ಟು?.

ಕನ್ನಡದ ಖಾಸಗಿ ವೆಬ್​ಸೈಟ್ ಒಂದು ಮಾಡಿರುವ ವರದಿಯ ಪ್ರಕಾರ, ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ವಾರಕ್ಕೆ 1 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ. ಅಂದರೆ ದಿನಕ್ಕೆ ಸುಮಾರು 14,000 ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೆ ಈ ಬಾರಿ ಮನೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಲಾಯರ್ ಜಗದೀಶ್ ಅವರು ಎಂಬ ಮಾತು ಕೂಡ ಇದೆ.