ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) 15ನೇ ವಾರಕ್ಕೆ ಕಾಲಿಟ್ಟಿದೆ. ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಆಟ ಇನ್ನಷ್ಟು ರೋಚಕತೆ ಸೃಷ್ಟಿಸಿದೆ. ಕಳೆದ ವಾರ ಮನೆಯಿಂದ ಯಾರೂ ಎಲಿಮಿನೇಟ್ ಆಗಿರಲಿಲ್ಲ. ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿರಲಿಲ್ಲ. ಇದೀಗ ಈ ವಾರ ಮಿಡಲ್ ವೀಕ್ ಎಲಿಮಿನೇಷನ್ ಇರಲಿದೆ ಎನ್ನಲಾಗಿದೆ. ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್ ಮನೆಮಂದಿಗೆ ಅನೇಕ ಮಾತುಗಳನ್ನು ಆಡಿ ಬೂಸ್ಟ್ ನೀಡಿದ್ದಾರೆ.
ಭಾನುವಾರ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ನಲ್ಲಿ ಕಿಚ್ಚ ಮನೆಮಂದಿಗೆ ಒಂದು ವಿಶೇಷ ಆಕ್ಟಿವಿಟಿ ಆಡಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಟ್ಟು 9 ಮಂದಿ ಇದ್ದಾರೆ. ಇವರಲ್ಲಿ ಈ ಮನೆಯ ಕಾಂಪಿಟೇಟರ್ ಯಾರು? ಡೇಂಜರ್ ಯಾರು? ಜೋಕರ್ ಯಾರು? ಎಂಬ ಬಗ್ಗೆ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಆದರೆ ‘ಜೋಕರ್’ ಅನ್ನೋ ವಿಭಾಗಕ್ಕೆ ಬಹುತೇಕರ ಉತ್ತರ ಚೈತ್ರಾ ಕುಂದಾಪುರ ಆಗಿದ್ದಾರೆ.
ಚೈತ್ರಾಗೆ ಜೋಕರ್ ಪಟ್ಟ ಕಟ್ಟಿದ ಹನುಮಂತ, ಚೈತ್ರಕ್ಕಾಗೆ ನಾನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅಂತ ಹೇಳಿದ್ದಾರೆ. ಬಳಿಕ ಮಾತಾಡಿದ ರಜತ್, 14 ವಾರ ಆಗಿದೆ ಚೈತ್ರಾ ಅವರು ಬಂದು, ಆದ್ರೆ 14 ವಾರದಿಂದ ಇಷ್ಟು ಸಂಪಾದನೆ ಮಾಡಿದ್ದಾರೆ. ಹೀಗಾಗಿ ಅವರನ್ನು ಜೋಕರ್ ತರ ನೋಡುತ್ತಿದ್ದೇನೆ ಅಂತ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಚೈತ್ರಾ ಕುಂದಪುರ, ಅದೇ ಜೋಕರ್ ಆಸ್ಕರ್ ಗೆದ್ದಿದ್ದನ್ನು ನಾನು ಕೇಳಿದ್ದೀನಿ, ಹೀಗಾಗಿ ಇವರುಗಳ ಅಭಿಪ್ರಾಯ ನನಗೆ ದೊಡ್ಡದು ಅಂತ ಅನೀಸುವುದೇ ಇಲ್ಲ ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ರಜತ್ ಅವರು ಬೇಕಾದ್ರೇ ಆಸ್ಕರ್ ಗೆದ್ದುಕೊಳ್ಳಲಿ, ನಾನು ಬಿಗ್ಬಾಸ್ ಕಪ್ ಗೆದ್ದುಕೊಂಡು ಮನೆಗೆ ಹೋಗುತ್ತೇನೆ ಎಂದು ಡೈಲಾಗ್ ಹೊಡೆದಿದ್ದಾರೆ.
ಇನ್ನು ಭವ್ಯಾ ಗೌಡ ಡೇಂಜರ್ ಜಾಗಕ್ಕೆ ತ್ರಿವಿಕ್ರಮ್ ಫೋಟೋವನ್ನು ಅಂಟಿಸಿದ್ದಾರೆ. ಜೊತೆಗೆ ತ್ರಿವಿಕ್ರಮ್ ತುಂಬಾ ವಿಚಾರಗಳನ್ನು ಓಡಿಸುತ್ತಾ ಇರುತ್ತಾರೆ ಅಂತ ಹೇಳಿದ್ದಾರೆ. ಹನುಮಂತ ಉಗ್ರಂ ಮಂಜು ಅವರಿಗೆ ಕಾಂಪಿಟೇಟರ್ ಪಟ್ಟ ನೀಡಿದ್ದಾರೆ. ಡೇಂಜರ್ ಸ್ಥಾನದಲ್ಲಿ ಉಗ್ರಂ ಮಂಜು, ಹನುಮಂತ ಮತ್ತು ರಜತ್ ಸಹ ಸ್ಥಾನ ಪಡೆದಿದ್ದಾರೆ.