ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರದ ನಾಮಿನೇಷನ್ ಪ್ರಕ್ರಿಯೆ ಎಲ್ಲ ಸ್ಪರ್ಧಿಗಳ ಪ್ಲ್ಯಾನ್ ಅನ್ನು ತಲೆಕೆಳಗಾಗಿಸುತ್ತಿದೆ. ಈ ವಾರದಿಂದ ಟಾಸ್ಕ್ ಮತ್ತಷ್ಟು ಕಠಿಣವಾಗಿದ್ದು ಅದಕ್ಕೆ ತಕ್ಕಂತೆ ನಾಮಿನೇಷನ್ ವಿಚಾರದಲ್ಲೂ ಬಿಗ್ ಬಾಸ್ ಟ್ವಿಸ್ಟ್ ನೀಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ನಾಮಿನೇಷನ್ಗೆ ಸಂಬಂಧಿಸಿದಂತೆ ವಿಶೇಷ ಟಾಸ್ಕ್ ನೀಡಿದ್ದಾರೆ.
ಎಲ್ಲ ಸ್ಪರ್ಧಿಗಳ ಬೆನ್ನಿಗೆ ಒಂದು ಬೆಂಡಿನ ತುಂಡನ್ನು ಕಟ್ಟಿರುತ್ತಾರೆ. ಯಾರೆಲ್ಲಾ ನಾಮಿನೇಟ್ ಮಾಡಲು ಬಯಸುತ್ತಾರೋ ಅವರೆಲ್ಲರೂ ಅದಕ್ಕೆ ಚೂರಿ ಚುಚ್ಚಬೇಕಿರುತ್ತದೆ. ಇದಕ್ಕೆ ಸೂಕ್ತ ಕಾರಣಗಳನ್ನು ಕೂಡ ಅಲ್ಲೇ ಎಲ್ಲರ ಸಮ್ಮುಖದಲ್ಲಿ ನೀಡಬೇಕು. ಎಲ್ಲರ ಎದುರೇ ಕಾರಣಗಳನ್ನು ನೀಡುವಾಗ ಜಗಳಗಳು ಶುರುವಾಗಿ ಹಿಂದೆ ಆಡಿದ ಮಾತುಗಳೆಲ್ಲ ಇದೀಗ ಹೊರಬಂದಿದೆ.
ಮುಖ್ಯವಾಗಿ ಚೈತ್ರಾ ಕುಂದಾಪುರ ಅವರು ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡುವ ಸಂದರ್ಭ ನಡೆದ ಗಲಾಟೆ ತಾರಕಕ್ಕೇರಿದೆ. ತ್ರಿವಿಕ್ರಮ್ ಮ್ಯಾನಿಪುಲೇಟ್ ಮಾಡುತ್ತಾರೆ. ಮೋಕ್ಷಿತಾರನ್ನು ನೋಡಿದರೆ ಸೈಕೋ ಅಂತೀರಾ ಎಂದು ತ್ರಿವಿಕ್ರಮ್ ಬಗ್ಗೆ ಚೈತ್ರಾ ಹೇಳಿದ್ದಾರೆ. ಇದನ್ನು ಕೇಳಿ ಮನೆಮಂದಿ ಶಾಕ್ ಆಗಿದ್ದಾರೆ. ಅದರಲ್ಲೂ ಅಲ್ಲೇ ಕೂತಿದ್ದ ಮೋಕ್ಷಿತಾ ಕಣ್ಣಲ್ಲೇ ಕೆಂಡಕಾರಿದ್ದಾರೆ.
ಚೈತ್ರಾ ಹೇಳಿಕೆಯಿಂದ ಕೆರಳಿದ ತ್ರಿವಿಕ್ರಮ್, ನಾಲಗೆಯಲ್ಲಿ ಶಕ್ತಿಯಿಲ್ಲ ನನಗೆ, ತೋಳಿನಲ್ಲಿ ಶಕ್ತಿ ಇರುವುದು. ನಾಲಗೆಯಲ್ಲಿ ಸಿಕ್ಸ್ ಪ್ಯಾಕ್ ಬೆಳೆಸಿಲ್ಲ ಗೊತ್ತಾಯಿತ್ತಾ ಎಂದು ಹೇಳಿದರು. ಇಲ್ಲಿಗೆ ನಿಲ್ಲದ ತ್ರಿವಿಕ್ರಮ್ ಮಾತು, ಶಿಶಿರ್ ಅವರನ್ನು ಕರೆದು ಭಯ್ಯಾ ನಿಮ್ಮನ್ನ ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ ಅಂತ ಹೇಳಿದ್ದಾರೆ ಎಂದರು. ಇದನ್ನು ಕೇಳಿ ಶಿಶಿರ್ಗೆ ಶಾಕ್ ಆಗಿದೆ. ಆಗ ಚೈತ್ರಾ ಅವರು, ನಾನು ಆ ವರ್ಡ್ ನಾನು ಯೂಸ್ ಮಾಡಿಲ್ಲ. ಆ ರೀತಿ ನಾನು ಹೇಳಿದ್ದರೆ ನನ್ನ ನಾಲಗೆ ಬಿದ್ದೋಗ್ಲಿ ಎಂದಿದ್ದಾರೆ.
ಅತ್ತ ಐಶ್ವರ್ಯಾ ಶಿಂಧೋಗಿ ಮಂಜು ಅವರ ಬೆನ್ನಿಗೆ ಚೂರಿ ಚುಚ್ಚಿ ನಾಮಿನೇಟ್ ಮಾಡಿದ್ದಾರೆ. ಈ ಹಿಂದೆ ರಾಜನ ಟಾಸ್ಕ್ ವೇಳೆಯಲ್ಲಿ ತಾನು ಮಹಾರಾಜ ಎಂಬ ಧರ್ಪದಲ್ಲಿ ಮಂಜು ಅವರು ಜನರನ್ನು ಅಂದರೆ ಪ್ರಜೆಗಳನ್ನು ಎತ್ತಿ ಬಿಸಾಡಿದ್ದಾರೆ. ದೈಹಿಕವಾಗಿ ಅವರು ಅಟ್ಯಾಕ್ ಮಾಡಿದ್ದಾರೆ ಎಂದು ಕಾರಣ ಕೊಟ್ಟಿದ್ದಾರೆ. ಆಗ ಮಂಜು ಅವರು ನಾನು ನನ್ನ ಸಿಂಹಾಸನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೆ. ಅದನ್ನು ನೀವು ನಾಮಿನೇಷನ್ ಕಾರಣವಾಗಿ ನೀಡುವಹಾಗಿಲ್ಲ ಎಂದು ಹೇಳಿದ್ದಾರೆ. ನೀವು ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ನೋಡಿದ್ರೆ, ನಾನು ಕುಗ್ಗುವಂತಹ ಮಗಳೇ ಅಲ್ಲ. ಅದು ಏನೇನು ಚುಚ್ಚಿ ಮಾತನಾಡ್ತಿರೋ ಆಡಿ ಎಂದು ಐಶ್ವರ್ಯ ಸವಾಲ್ ಹಾಕಿದ್ದಾರೆ.
BBK 11: ತ್ರಿವಿಕ್ರಮ್ಗೆ ತಲೆ ಬೋಳಿಸುವ ಚಾಲೆಂಜ್ ನೀಡಿದ ಹನುಮಂತ: ಒಪ್ಪಿದ್ರಾ?