ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ಈ ವಾರ ಅನೇಕ ಹೈ-ಡ್ರಾಮ ನಡೆದಿದೆ. ಇದು ವಾರಂತ್ಯಕ್ಕೂ ಮುಂದುವರೆದಿದೆ. ಮುಖ್ಯವಾಗಿ ವಾರದ ಪ್ರದರ್ಶನ ನೋಡಿ ಉತ್ತಮ-ಕಳಪೆ ನೀಡಲಾಗಲೂ ಮನೆಯೊಳಗೆ ಜಗಳಗಳು ನಡೆದಿವೆ. ಧನರಾಜ್ ಹಾಗೂ ರಜತ್ ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದ್ದಾರೆ. ಆದರೆ, ಅಂತಿಮವಾಗಿ ಇಂದು ಈ ಸೀಸನ್ನಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಸ್ಪರ್ಧಿಗಳು ಜೈಲಿಗೆ ಹೋಗಿದ್ದಾರೆ.
ಮನೆ ಮಂದಿ ಕಳಪೆ ಪಟ್ಟವನ್ನು ಹೆಚ್ಚಾಗಿ ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ಅವರಿಗೆ ನೀಡಿದ್ದಾರೆ. ಇವರಿಬ್ಬರಿಗೆ ತಲಾ 4 ವೋಟ್ ಬಂದಿದೆ. ಟೈ ಆದ ಕಾರಣ ಇಬ್ಬರೂ ಸ್ಪರ್ಧಿಗಳು ಜೈಲಿಗೆ ಹೋಗಿದ್ದಾರೆ. ಅಲ್ಲದೇ ಜೈಲಿನಲ್ಲೇ ಇದ್ದುಕೊಂಡೆ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಉಳಿದ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಚೈತ್ರಾ ಅವರು ನಾನು ಈ ಮನೆಯ ಎಲ್ಲ ರೂಲ್ಸ್ ಬ್ರೇಕ್ ಮಾಡ್ತೀವಿ ಎಂದಿದ್ದಾರೆ. ಅತ್ತ ತ್ರಿವಿಕ್ರಮ್ ಗೋಲ್ಡ್ ಸುರೇಸ್ ವಿರುದ್ಧ ರೇಗಾಡಿದ್ದಾರೆ.
ಧನರಾಜ್-ರಜತ್ ಫೈಟ್:
ಅತ್ತ ಧನರಾಜ್ ಅವರು ಕಳಪೆಗೆ ರಜತ್ ಕಿಶನ್ ಹೆಸರನ್ನು ತೆಗೆದುಕೊಂಡಿದ್ದಾರೆ. ‘‘ನನ್ನ ಕಳಪೆ ಬಂದುಬಿಟ್ಟು ರಜತ್. ಕೈಕಾಲು ಮುರೀತಿನಿ ಅಂತಾರೆ, ಬೆದರಿಕೆ ಹಾಕೋ ಥರಾ ಅವರ ಮಾತುಗಳು ಇರುತ್ತದೆ’’ ಎಂಬ ಕಾರಣ ನೀಡಿದ್ದಾರೆ. ಇದರಿಂದ ಸಿಟ್ಟಾದ ರಜತ್, ಅಂದು ನೀವು ನನ್ನ ಮುಖವನ್ನು ಟಚ್ ಮಾಡಿದಾಗ ಅದು, ಸಾಫ್ಟ್ ಆಗಿರಲಿಲ್ಲ ಎಂದಿದ್ದಾರೆ. ಅದಕ್ಕೆ ಧನರಾಜ್, ನನಗೆ ಗೊತ್ತು, ನಾನು ಎಷ್ಟು ಸಾಫ್ಟ್ ಆಗಿ ಮಾಡಿದ್ದೀನಿ ಎಂದು ಅಂತಾ ಹೇಳುತ್ತಾರೆ. ಮತ್ತೆ ಕೌಂಟರ್ ಕೊಟ್ಟ ರಜತ್, ನೀನೇನು ಮಗು ಮುಟ್ಟಿದ ಹಾಗೆ ಮುಟ್ಟಿರೋದಾ?, ನಾನೇನು ನಿನ್ನೆ ಮೊನ್ನೆ ಹುಟ್ಟಿ ಬಿಗ್ ಬಾಸ್ಗೆ ಬಂದಿಲ್ಲ. ನನಗೆ ಬರ್ತಿರೋ ಸಿಟ್ಟಿಗೆ ನಿನ್ನ ಮಕ-ಮೂತಿ ಒಡೆದು ಹಾಕಿಯೇ ಆಚೆ ಹೋಗಬೇಕಾಗಿತ್ತು ಎಂದಿದ್ದಾರೆ.
ರಜತ್ ಅವರ ಈ ಮಾತು ಧನುಗೆ ಸಿಟ್ಟು ತರಿಸಿದೆ. ಅದೇನೋ ಮುಕ-ಮೂತಿ ಒಡೆಯುತ್ತೀನಿ ಅಂದ್ರಲ್ಲ. ಹೊಡೆಯಿರಿ ನೋಡೋಣ ಎಂದಿದ್ದಾರೆ. ನಿಂಗೆ ತಾಖತ್ತಿದ್ದರೆ ನನ್ನ ಮುಟ್ಟಿ ತೋರಿಸೋ ಎಂದು ಧನು ಮೇಲೆ ರಜತ್ ಮತ್ತಷ್ಟು ಗರಂ ಆಗಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಧನು ಹೊಡೆಯುತ್ತೀರಾ.. ಹೊಡೆಯಿರಿ.. ಎಂದಿದ್ದಾರೆ. ಆಗ ರಜತ್ ಅವರು, ಧನು ಮೇಲೆ ಕೈಮಾಡಲು ಹೋಗಿದ್ದಾರೆ.