Thursday, 15th May 2025

ಬಾಲಿವುಡ್‌ ನಟ ರಮೇಶ್‌ ದೇವ್‌ ನಿಧನ

ಮುಂಬೈ: ಬಾಲಿವುಡ್‌ ನಟ ರಮೇಶ್‌ ದೇವ್‌ (93) ನಿಧನರಾದರು.  ಅವರಿಗೆ ಪತ್ನಿ ಸೀಮಾ ದೇವ್, ಇಬ್ಬರು ಪುತ್ರರು ಇದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇಲ್ಲಿನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪುತ್ರ ಅಜಿಂಕ್ಯಾ ಅವರು ಮರಾಠಿ ಚಿತ್ರ ನಟರಾಗಿದ್ದರೆ, ಮತ್ತೊಬ್ಬ ಅಭಿನಯ್‌ ನಿರ್ದೇಶಕರಾಗಿದ್ದಾರೆ. 285 ಹಿಂದಿ ಹಾಗೂ 190 ಮರಾಠಿ ಚಿತ್ರಗಳಲ್ಲಿ ನಟಿಸಿದ್ದು, 20ಕ್ಕೂ ಅಧಿಕ ಮರಾಠಿ ನಾಟಕಗಳಲ್ಲಿ ಅಭಿನಯಿಸಿದ್ದರು. ‘ಆ‍ಪ್‌ ಕಿ ಕಸಮ್’, ‘ಮೇರೆ ಅಪ್ನೆ’ ಅವರಿಗೆ ಹೆಸರು ತಂದ ಕೊಟ್ಟ ಪ್ರಮುಖ ಚಿತ್ರ ಗಳಾಗಿವೆ.

ಅಮಿತಾಭ್ ಬಚ್ಚನ್, ರಾಜೇಶ್‌ ಖನ್ನಾ ಅವರ ಅಭಿನಯದ ಜನಪ್ರಿಯ ಚಿತ್ರ ‘ಆನಂದ್‌’ನಲ್ಲಿ ರಮೇಶ್‌ ಅವರು ಡಾ.ಪ್ರಕಾಶ್‌ ಕುಲಕರ್ಣಿ ಪಾತ್ರದಲ್ಲಿ ನಟಿಸಿದ್ದರು.